ಬೈಲಹೊಂಗಲ : ಸಾಕಷ್ಟು ಅನುದಾನದೊಂದಿಗೆ ಉದ್ಘಾಟನಾ ಭಾಗ್ಯ ಕಂಡಿದ್ದ ಪಟ್ಟಣದ ಕೇಂದ್ರ ಬಸ್ ನಿಲ್ದಾಣ ಕೆಲವೇ ತಿಂಗಳುಗಳಲ್ಲಿ ತನ್ನ ನಾಮಫಲಕ ಕಳೆದುಕೊಂಡಿದೆ.
ನೂತನವಾಗಿ ನಿರ್ಮಾಣವಾದ ಬೈಲಹೊಂಗಲ ಕೇಂದ್ರ ಬಸ್ ನಿಲ್ದಾಣಕ್ಕೆ ಈ ಭಾಗದ ಪ್ರಪ್ರಥಮ ಮಹಿಳಾ ಸೈನ್ಯ ಕಟ್ಟಿದ ವೀರರಾಣಿ ಬೆಳವಡಿ ಮಲ್ಲಮ್ಮನ ಹೆಸರಿರಡಬೇಕೆಂದು ಹಲವಾರು ಮನವಿ ಸಂದ ಬಳಿಕ ಜಿಲ್ಲಾಡಳಿತ ವೀರರಾಣಿ ಬೆಳವಡಿ ಮಲ್ಲಮ್ಮ ಬಸ್ ನಿಲ್ದಾಣ ಬೈಲಹೊಂಗಲ ಎಂದು ನಾಮಕರಣ ಮಾಡಿ ನಾಮಫಲಕ ಅಳವಡಿಸಿತ್ತು ಕಳೆದ ಜನವರಿಯಲ್ಲಿ ಉದ್ಘಾಟನೆಗೊಂಡ ಬಸ್ ನಿಲ್ದಾಣದ ನಾಮಫಲಕದಲ್ಲಿ ಬೆಳವಡಿ ಎಂಬುವದು ಕಿತ್ತು ಕೇವಲ ಮಲ್ಲಮ್ಮ ಬಸ್ ನಿಲ್ದಾಣ ಮಾತ್ರ ಉಳಿದಿದೆ.