ರಂಗ ಕಲೆ ಉಳಿಸುವಲ್ಲಿ ಸಂಘಟನೆಗಳ ಪಾತ್ರ ದೊಡ್ಡದು: ರೇವಣ ಸಿದ್ದಯ್ಯ ಶ್ರೀ

  • shivaraj B
  • 9 Aug 2024 , 10:25 PM
  • Koppal
  • 366

ಗಂಗಾವತಿ: ಪರಮಪಾರಿಕ ಕಲೆಗಳು ನಸಿಸದಂತೆ ಕಾಪಾಡುವ ಹೊಣೆ ಸಮಾಜದ ಪ್ರತಿಯೊಬ್ಬರ ಮೇಲಿದೆ ಈ ನಿಟ್ಟಿನಲ್ಲಿ ರಂಗಕಲೆ ಉಳಿಸುವಲ್ಲಿ ಸಂಘಟನೆಗಳ ಪಾತ್ರದೊಡ್ಡದು ಎಂದು ಅರಳಹಳ್ಳಿಯ ಶ್ರೀ ರೇವಣ ಸಿದ್ದಯ್ಯ ಶ್ರೀಗಳು ತಿಳಿಸಿದರು.

 ಅವರು ವಿರಪಾಪುರದ ಬಸವಭವನದಲ್ಲಿ ಕರುಣಾ ರೂರಲ್ ಡೆವಲಪ್ ಮೆಂಟ್ ಸೊಸೈಟಿಯಿಂದ ಅಸಯೋಜಿಸಿದ್ದ ಶ್ರೀ ಕೃಷ್ಣ ಸಂಧಾನ ನಾಟಕ ಪ್ರದರ್ಶನ ಉದ್ಠಾಟಿಸಿ ಮಾತನಾಡಿದರು, ದೂರದರ್ಶನ ಇಂಟರ್ ನೆಟ್ ಹಾವಳಿಯಿಂದ ದೇಸಿ ಕಲೆಗಳಿಗೆ ಪ್ರೋತ್ಸಾಹ ಇಲ್ಲದಂತಾಗಿದ್ದು,ಸಿಗೇರಿಯ ಧಾತ್ರಿ ರಂಗ ಸಂಸ್ಥೆ ಇದಕ್ಕೆ ಅಪವಾದ ಎಂಬಂತಾಗಿದೆ, ಸಿನೆಮಾ ಥಿಯೇಟರ್ ಕಡೆ ಜನರು ಇತ್ತೀಚಿಗೆ ಮುಖ ಮಾಡುತ್ತಿಲ್ಲಾ ಆದರೂ ಧಾತ್ರಿ ಸಂಸ್ಥೆ ತಿರುಗಾಟ ಆರಂಭಿಸಿ ನಾಟಕದ ಗಟ್ಟಿತನ ತೋರಿಸುತ್ತಿದ್ದಾರೆ, ಅವರ ಎದೆಗಾರಿಕೆ ಮೆಚ್ಚಲೇಬೇಕು, ಮಾಹಾಲಕ್ಷ್ಮೀಯವರು ಸಹ ತಮ್ಮ ಸಂಸ್ಥೆಯಿಂದ ಗಂಗಾವತಿ ಜನತೆಗೆ ನಾಟಕದ ಸವಿ ಉಣಬಡಿಸುತ್ತಿರುವುದು ಶ್ಲಾಘನೀಯ ಎಂದರು.

ಕರುಣಾ ರೂರಲ್ ಡೆವಲಪ್ ಮೆಂಟ್ ಸಂಸ್ಥೆಯ ಆದ್ಯಕ್ಷರಾದ ಸಿ ಮಹಾಲಕ್ಷ್ಮೀ ಮಾತನಾಡಿ, 

ರಂಗ ಪ್ರದರ್ಶನ ನೈಜ ಕಲೆ ಇದನ್ನು ಉಳಿಸಿಕೊಂಡು ಹೋಗುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ, ಕಲಾವಿದರೊಟ್ಟಿಗೆ ಅನೇಕರಿಗೆ ಉತ್ತೇಜನ ನೀಡಿದಂತಾಗುತ್ತದೆ ಕಲೆಗೆ ಹೆಚ್ಚು ಹೆಚ್ಚು ಪ್ರೋತ್ಸಾಹ ನೀಡುವವರು ಮುಂದೆ ಬರಬೇಕಿದೆ ಎಂದರು.

ವೇದಿಕೆಯಲ್ಲಿ ಖ್ಯಾತ ಹಾಸ್ಯಮಾತುಗಾರ ಬಿ.ಪ್ರಾಣೇಶ್, ಖ್ಯಾತ ನಾಟಕಕಾರ ಎಸ್.ವಿ.ಪಾಟೀಲ್ ಗುಂಡೂರ್, ಖ್ಯಾತ ಸಂಶೋಧಕ ಶರಣ ಬಸಪ್ಪ ಕೋಲ್ಕಾರ್, ಸಮಾಜ ಸೇವಕರಾದ ಡಾ. ಶಿವಕುಮಾರ್ ಮಾಲಿಪಾಟೀಲ್, ಹಿರಿಯ ಪತ್ರಕರ್ತರಾದ ರಾಮಮೂರ್ತಿ ನವಲಿ, ವೀರಾಪುರ ಕೃಷ್ಣ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಂಗಾವತಿ ತಾಲೂಕು ಅಧ್ಯಕ್ಷ ನಾಗರಾಜ್ ಇಂಗಳಗಿ, ಕಸಾಪ ಅಧ್ಯಕ್ಷ ಶ್ರೀನಿವಾಸ್ ಅಂಗಡಿ, ಮುಖಂಡರಾದ ಶರಣಪ್ಪ ಉಪ್ಪಾರ, ಸಾಹಿತಿ ಶರಣಪ್ಪ ಮೆಟ್ರಿ ಇದ್ದರು.

ವರದಿ  : ರವಿಚಂದ್ರ   ಬಡಿಗೇರ 

Read All News