ಭಾರಿ ಮಳೆಗೆ ಹಾರಿದ ಮನೆಯ ಮೇಲ್ಛಾವಣಿ, ಧರೆಗುರುಳಿದ ವಿದ್ಯುತ್ ಕಂಬಗಳು

  • shivaraj bandigi
  • 14 May 2024 , 1:37 PM
  • Belagavi
  • 467

ನಿಪ್ಪಾಣಿ :  ತಾಲೂಕಿನಾದ್ಯಂತ ಗುಡುಗು ಸಹಿತ ಸುರಿಯುತ್ತಿರುವ ಭಾರಿ ಗಾಳಿ ಮಳೆಗೆ ಹತ್ತಕ್ಕೂ ಅಧಿಕ ಮನೆಗಳ ಮೇಲ್ಛಾವಣಿ ಹಾರಿಹೋಗಿ ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೆ ಮಳೆಗೆ ಐದಕ್ಕೂ ಹೆಚ್ಚು 

 ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. 

ವಿದ್ಯುತ್ ಕಂಬ ಬಿದ್ದ ಪರಿಣಾಮ ಎರಡು ಬೈಕ್ ಗಳು ಜಖಂಗೊಂಡಿವೆ. 

ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದರಿಂದ ಕುಟುಂಬಗಳು ಬೀದಿಗೆ ಬಂದಿವೆ. 

ಮಳೆಯ ಅಬ್ಬರಕ್ಕೆ ನಿಪ್ಪಾಣಿ ತಾಲೂಕಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ.

Read All News