ಶಿರಗೂರ ಗ್ರಾಮದ ನೆರೆ ಸಂತ್ರಸ್ಥರ ಗೋಳು ಕೇಳದ ತಾಲೂಕಾಡಳಿತ‌

  • shivaraj B
  • 8 Aug 2024 , 12:27 PM
  • Chikodi
  • 349

ಚಿಕ್ಕೋಡಿ : ಮಹಾರಾಷ್ಟ್ರದ ಮಳೆಯಿಂದ ಗಡಿಭಾಗದ ಜನತೆ ತತ್ತರಿಸಿ ಹೋಗಿದೆ. 

ಕೃಷ್ಣಾ ನದಿ  ಒಂದು ವಾರದಿಂದ ಯತಾವತ್ತಗಿ ಒಳ ಹರಿವು ಕಾಯ್ದುಕೊಂಡಿದ್ದು, ಒಳ ಹರಿವಿನಿಂದ ತೊಂದರೆ ಅನುಭವಿಸುತ್ತಿರುವ ನದಿ ತೀರದ ಜನ.ಯಾವುದೇ  ತೊಂದರೆಯಾಗದಂತೆ ಈಗಾಗಲೇ ಸರ್ಕಾರ ಅದೇಶ ಹೊರಡಿಸಿದೆ.

ಆದರೆ, ಸರ್ಕಾರದ ಆದೇಶಕ್ಕೆ  ಕವಡೆ ಕಾಸಿನ‌ ಕಿಮ್ಮತ್ತು ಇಲ್ಲದಂತಾಗಿದೆ. 

ನೆರೆ ಬಂದರು ಗಂಜಿ‌ ಕೇಂದ್ರ ತೆಗೆಯದ ತಾಲೂಕಾಡಳಿತದ ಬಗ್ಗೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಶಿರಗೂರ ಗ್ರಾಮದ ನೆರೆ ಸಂತ್ರಸ್ಥರ ಗೋಳು ತಾಲೂಕಾಡಳಿತ ಕೇಳುತ್ತಿಲ್ಲ.  ನೆರೆ ಸಂತ್ರಸ್ಥರಿಗೆ ಕೇವಲ ಕಾಟಾಚಾರಕ್ಕೆ ಮಾತ್ರ ಬೇಟಿ ನೀಡುತ್ತಿರುವ ತಾಲೂಕಾಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ನೆರೆ ಬಂದರೂ ಕೂಡಾ ಕೇವಲ ಒಂದು ದಿನ ಮಾತ್ರ ಗಂಜಿ ಕೇಂದ್ರ ತೆಗೆದ ತಾಲೂಕಾಡಳಿತ ಎಂದು ನೆರೆ ಸಂತ್ರಸ್ಥರು ಆರೋಪ ಮಾಡುತ್ತಿದ್ದಾರೆ. 

ದನಗಳಿಗೆ ಮೇವಿಲ್ಲ, ಇರಲು ಜಾಗ ಇಲ್ಲ ಹೀಗಾದರೆ ಹೇಗೆ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡುತ್ತಿದ್ದಾರೆ.

Read All News