ಬೆಳಗಾವಿ : ಬೆಳಗಾವಿ ಜಿಲ್ಲಾಡಳಿತದ ಆದೇಶಕ್ಕೆ ಸೆಡ್ಡು ಹೊಡೆದಿರುವ ಮಹಾರಾಷ್ಟ್ರದ ಶಿವಸೇನೆಯ ನಾಯಕರು ಬೆಳಗಾವಿಯಲ್ಲಿ ಎಂಇಎಸ್ ಆಚರಿಸುವ ಕರಾಳ ದಿನಾಚರಣೆಯಲ್ಲಿ ಭಾಗವಹಿಸಲು ಬುಧವಾರ ಆಗಮಿಸಿದ್ದಾರೆ.
ಬೆಳಗಾವಿಯ ಗಡಿ ಭಾಗದಲ್ಲಿಯೇ ಶಿವಸೇನೆಯ ನಾಯಕರನ್ನು ವಶಕ್ಕೆ ಪಡೆಸಲು ಬೆಳಗಾವಿ ಜಿಲ್ಲಾ ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಕರ್ನಾಟಕದ ಪೊಲೀಸರಿಗೆ ಸವಾಲ್ ಹಾಕಿರುವ ಶಿವಸೇನೆ ಕರಾಳ ದಿನಾಚರಣೆಯಲ್ಲಿ ಭಾಗಿಯಾಗಿಯೇ ತೀರುವುದಾಗಿ ಜಿದ್ದಿಗೆ ಬಿದ್ದು ಬೆಳಗಾವಿಯತ್ತ ಆಗಮಿಸುತ್ತಿದ್ದಾರೆ.