ರೈತರ ಪಂಪಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಂತೆ ಹೆಸ್ಕಾಂ ಕಚೇರಿಗೆ ಬೀಗ ಜಡಿದ ಗ್ರಾಮಸ್ಥರು

  • Shivaraj Bandigi
  • 14 Jan 2024 , 5:52 AM
  • Belagavi
  • 414

ಬೈಲಹೊಂಗಲ- ರೈತರ ಪಂಪಸೆಟಗಳಿಗೆ ಹಗಲಿನಲ್ಲಿ 7 ಗಂಟೆ  3 ಫೇಸ, ರಾತ್ರಿ ಸಮಯದಲ್ಲಿ  ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ, ತಾಲೂಕಿನ ದೊಡವಾಡ, ನನಗುಂಡಿಕೊಪ್ಪ ಗ್ರಾಮದ ರೈತರು ಬೆಳವಡಿ ಹೆಸ್ಕಾಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. 

ರೈತ ಮುಖಂಡ ನಿಂಗಪ್ಪ ಚೌಡಣ್ಣವರ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಹೆಸ್ಕಾಂ ಅಧಿಕಾರಿಗಳು ಎಪ್ರಿಲ್ ತಿಂಗಳಿನಲ್ಲಿ 7 ಗಂಟೆ ನಿರಂತರ 3 ಪೇಸ್ ವಿದ್ಯುತ್ ಪೂರೈಕೆ ಮಾಡುತ್ತೇವೆ ಅಂತಾ ಹೇಳಿ ಈಗ ಜೂನ ತಿಂಗಳು ಬಂದರು ಕೂಡಾ ಸರಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ.

ಅಲ್ಲದೆ ರಾತ್ರಿ ಸಮಯದಲ್ಲಿ ಬೇಕಾಬಿಟ್ಟಿಯಾಗಿ ವಿದ್ಯುತ್ ಪೂರೈಕೆ ನಿಲ್ಲಿಸುತ್ತಿದ್ದು ಇದರಿಂದ ರೈತರ ಜಮೀನುಗಳಿಗೆ ಮತ್ತು ಮತ್ತು ಕುಟುಂಬಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ.  ಒಂದು ವಾರದೊಳಗೆ ನಮ್ಮೆಲ್ಲ ಬೇಡಿಕೆಗೆ ಸ್ಪಂದಿಸಿದ್ದರೆ ಮುಂದಿನ‌ದ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು. 

ಈ ಸಂದರ್ಭದಲ್ಲಿ ದೊಡವಾಡ, ನನಗುಂಡಿಕೊಪ್ಪ ಗ್ರಾಮದ ರೈತರು ಇದ್ದರು.

Read All News