ಸಂಸತ್ತಿನ ಲೋಪದೋಷ ಇಡೀ ವಿಶ್ವವೇ ನೋಡಿದೆ

  • shivaraj bandigi
  • 15 Jan 2024 , 1:17 AM
  • Belagavi
  • 408

ಬೆಳಗಾವಿ

ಸಂಸತ್ತಿನ ಐತಿಹಾಸದಲ್ಲಿ ಆಗದೇ ಇರುವ ಭದ್ರತಾ ಲೋಪದೋಷವನ್ನು ಇಡೀ ವಿಶ್ವವೇ ನೋಡಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಹೊಸದಾಗಿ ಲೋಕಸಭೆ ಪ್ರಾರಂಭಿಸಿ, ವ್ಯವಸ್ಥಿತ ಹಾಗೂ ವೈಜ್ಞಾನಿಕವಾಗಿ ಮಾಡಿದ್ದೇವೆ ಅಂತ ಹೇಳುವಾಗ ಇಬ್ಬರು ಯುವಕರು ಗ್ಯಾಲರಿಗೆ ಬಂದು, ಅಲ್ಲಿಂದ ಜಂಪ್‌ ಮಾಡಿ ಸದನದ ಒಳಗೆ ಬರುತ್ತಾರೆ ಎಂದರೆ ಯಾರೂ‌ ಸಹ ನಂಬಲು ಸಾಧ್ಯವಿಲ್ಲ. ವಿಶೇಷವಾಗಿ ನಮ್ಮ ರಾಜ್ಯದ ಸಂಸದರಾದ ಪ್ರತಾಪ್ ಸಿಂಹ್ ಪಾಸ್ ಗಳನ್ನ ಕೊಟ್ಟಿದಾರೆ ಅಂತ ಗೊತ್ತಾಗಿದೆ. ಅವರು ಪರಿಚಯ ಇದ್ದು ಯುವಕರಿಗೆ ಪಾಸ್ ಗಳನ್ನ ಕೊಟ್ಟಿದ್ದಾರೆ. ಹೀಗಾಗಿ ಅವರೂ ಸಹ ಹೊಣೆಯಾಗುತ್ತಾರೆ ಎಂದು ಎಲ್ಲರೂ ವಿಶ್ಲೇಷಣೆ ಮಾಡಿದ್ದಾರೆ. ಅವರನ್ನೂ‌ ಕೂಡ ಸಂಸತ್‌ ಹಾಗೂ ಲೋಕಸಭೆಯಿಂದ ಸಸ್ಪೆಂಡ್ ಮಾಡಬೇಕು ಅಂತ ನಮ್ಮ ಪಕ್ಷ ಹಾಗೂ ಬೇರೆ ಪಕ್ಷದವರು ಒತ್ತಾಯ ಮಾಡಿದ್ದಾರೆ ಎಂದರು.

ಆಶ್ಚರ್ಯ ಎಂದರೆ ಈ ಬಗ್ಗೆ ಕೇಂದ್ರದ ಗೃಹಮಂತ್ರಿಗಳಾಗಲಿ, ಪ್ರಧಾನಮಂತ್ರಿಗಳಾಗಲಿ ಒಂದು‌ ಮಾತನ್ನೂ ಸಹ ಆಡಲಿಲ್ಲ. ವಿಷಾದವನ್ನೂ ವ್ಯಕ್ತಪಡಿಸಲಿಲ್ಲ. ಮುಂದೆ ಇಂತಹ ಘಟನೆ ಆಗೋದಿಲ್ಲ, ಆಗೋದಕ್ಕೆ ಬಿಡಲ್ಲ ಅಂತ‌ ಹೇಳಿ ಒಂದು ಹೇಳಿಕೆಯನ್ನೂ ಸಹ ಕೊಟ್ಟಿಲ್ಲ. ಈ ಬಗ್ಗೆ ನಮ್ಮ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಈಗಾಗಲೇ ಪ್ರಸ್ತಾಪ ಮಾಡಿದ್ದಾರೆ. ನಾವೆಲ್ಲರೂ ಸಹ ಅದಕ್ಕೆ ಸಪೋರ್ಟ ಆಗಿದ್ದೇವೆ ಎಂದರು.

ಬೆಳಗಾವಿ ಸುವರ್ಣ ಸೌಧದ ಅಧಿವೇಶನದಲ್ಲೂ ಇಂತಹ ಲೋಪ ಆಗದ ಹಾಗೆ ಸೂಚನೆ ನೀಡಿದ್ದೇನೆ. ಅಧಿವೇಶನದ ಒಳಾಂಗಣ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶ ಸ್ಪೀಕರ್ ವ್ಯಾಪ್ತಿಗೆ ಬರುತ್ತೆ. ಸ್ಪೀಕರ್ ಹಾಗೂ ವಿಧಾನಪರಿಷತ್ ಅಧ್ಯಕ್ಷರ ಹತ್ತಿರವೂ‌ ಈ ಬಗ್ಗೆ ಮಾತನಾಡಿ, ಇಂಥಹ ಕರ್ತವ್ಯ ಲೋಪ ಆಗದ ಹಾಗೆ ಎಚ್ಚರಿಕೆ ವಹಿಸಿದ್ದೇವೆ ಎಂದರು.

ಸಂಸತ್ತಿನ ಲೋಪದೋಷದ ಬಗ್ಗೆ ಕೇಂದ್ರದ ಗೃಹ, ಹಾಗೂ ಪೊಲೀಸ್ ಇಲಾಖೆ ತನಿಖೆ ಮಾಡುತ್ತಾರೆ. ಒಂದು ವೇಳೆ ರಾಜ್ಯ‌ ಸರಕಾರ‌, ಪೊಲೀಸ್ ಇಲಾಖೆ ಸಹಾಯ, ಕೇಳಿದರೆ ನಾವು ಮಾಡುವುದಕ್ಕೆ ಸಿದ್ಧರಿದ್ದೇವೆ. ಬೆಂಗಳೂರಿನ ವಿಧಾನಸೌಧದಲ್ಲೂ ಕಟ್ಟುನಿಟ್ಟಿನ ಕ್ರಮ ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಕ್ರಮ‌ ತೆಗೆದುಕೊಳುತ್ತೇವೆ. ಟೆಕ್ನಾಲಜಿ ಅವಶ್ಯ ಬಿದ್ದಲ್ಲಿ ಅದನ್ನೂ ಸಹ ಮಾಡಿಕೊಳ್ತೇವೆ ಎಂದರು.

ಆಡಳಿತ ಪಕ್ಷವಾಗಿ ನಾವು ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಮಾಡಿ ಉತ್ತರ‌ ಕೊಡುವುದಕ್ಕೆ ಸರಕಾರ ರೆಡಿ ಇದೆ. ಆದರೆ ಬಿಜೆಪಿಯವರಿಗೆ ಅದು ಬೇಕಾಗಿಲ್ಲ. ಬಿಜೆಪಿಯವರು ಒಳಗಡೆಯೂ ಕೂಡ ಅದರ ವಿರುದ್ಧವಾಗಿ ಗಲಾಟೆ ಮಾಡಿ ಕಾಲಹರಣ‌ ಮಾಡುತ್ತಿದ್ದಾರೆ. ನಿನ್ನೆ ಸದನ ನಡೆಯೋ ಸಂದರ್ಭದಲ್ಲಿ ಹೊರಗಡೆಯೂ ಅದನ್ನೆ ಮಾಡಿದರು ಎಂದರು.

ಬೇರೆ ಸಂದರ್ಭದಲ್ಲಿ ನೀವು ರಾಜಕೀಯ ಮಾಡಿಕೊಳ್ಳಬಹುದು. ಆದರೆ ಸದನ ನಡಿಯುತಿರುವಾಗಲೇ ಸರಕಾರವನ್ನು ಪ್ರಶ್ನೆ ಮಾಡೋದಕ್ಕೆ ಒಳಗಡೆಯೇ ನಿಮಗೆ ಅವಕಾಶವಿದೆ.. ಅದನ್ನ ಬಿಟ್ಟು ಹೊರಗಡೆ ಬಂದು ಒಳಗಡೆ ಚರ್ಚೆ ಬಗ್ಗೆ ಭಾಗವಹಿಸದೇ ಇರುವುದನ್ನು ನೋಡಿದರೆ ಬಿಜೆಪಿಯವರು ಉತ್ತರ ಕರ್ನಾಟಕದ ಬಗ್ಗೆ‌ ಕೇವಲ ಮೊಸಳೆ ಕಣ್ಣೀರನ್ನ ಸುರಿಸ್ತಿದ್ದಾರೆ ಎಂದರು.

Read All News