ಹಿಂದುತ್ವದ ಹೆಸರಿನಲ್ಲಿ ಸರ್ಕಾರಿ ಆಸ್ತಿ ಕಬಳಿಸುವ ಕಳ್ಳರಿದ್ದಾರೆ ಎಚ್ಚರ..ಎಚ್ಚರ..

  • shivaraj bandigi
  • 15 Jan 2024 , 1:57 AM
  • Belagavi
  • 523

ಬೆಳಗಾವಿ :

ಬೆಳಗಾವಿಯ ಜಗಜ್ಯೋತಿ ಬಸವೇಶ್ವರ ಸರ್ಕಲ್ ದಲ್ಲಿರುವ ತಿನುಸು ಕಟ್ಟೆಯ ಮಳಿಗೆಗಳ ಹಂಚಿಕೆಯಲ್ಲಿ ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಸಿ ಸರ್ಕಾರಿ ಆಸ್ತಿಯನ್ನು ದುರುಪಯೋಗ ಪಡಿಸಿಕೊಂಡವರಿಗೆ ಈಗ ನಡುಕ ಶುರುವಾಗಿದ್ದು,ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ತನಿಖೆ ಸರ್ಕಾರಿ ಆಸ್ತಿ ನುಂಗಿದವರ ಬಣ್ಣ ಬಯಲು ಮಾಡಲಿದೆ ಎಂದು ರಾಜಕುಮಾರ ಟೋಪಣ್ಣವರ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟನೆಯನ್ನು ಹೊರಡಿಸಿರುವ ರಾಜೀವ ಟೋಪಣ್ಣವರ,ತಿನಿಸು ಕಟ್ಟೆಯನ್ನು ಕಾಲುವೆ ಪಕ್ಕದಲ್ಲಿ ನಿರ್ಮಿಸಿ ಮಾನ್ಯ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲಾಗಿದೆ.ಇಲ್ಲಿಯ ಮಳಿಗೆಗಳನ್ನು ಬಿಜೆಪಿ ಕಾರ್ಯಕರ್ತರಿಗೆ ಹೆಸರಿಗೆ ಮಾತ್ರ ಮಂಜೂರು ಮಾಡಿ,ಅಂಗಡೀಕಾರರಿಂದ ಬಾಡಿಗೆ ವಸೂಲಿ ಮಾಡುತ್ತಿರುವವರು ಯಾರು ? ಯಾರಿಗೆ ಅಂಗಡಿ ಮಂಜೂರಾಗಿದೆ.ಈಗ ಅಂಗಡಿಗಳನ್ನು ನಡೆಸುತ್ತಿರುವವರು ಯಾರು ? ಅನ್ನೋದು ಬೆಳಗಾವಿಗೆಯ ಜನರಿಗೆ ಗೊತ್ತಾಗುತ್ತದೆ ಎಂದು ಅಧಿಕಾರಿಗಳು ತನಿಖೆಗೆ ಬಂದಾಗ ತಿನಿಸು ಕಟ್ಟೆಯ ಅಂಗಡಿಗಳಿಂದ QR ಕೋಡಗಳನ್ನು ಮಾಯ ಮಾಡಿಸಿದ್ದು ಯಾರು ? ಅನ್ನೋದು ಬೆಳಗಾವಿಯ ಜನರಿಗೆ ಗೊತ್ತಿದೆ ಎಂದು ಟೋಪಣ್ಣವರ ಶಾಸಕ ಅಭಯ ಪಾಟೀಲ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. 

ಅಧಿಕಾರಿಗಳು ತನಿಖೆಗೆ ಬಂದಾಗ ತಿನಿಸು ಕಟ್ಟೆಯ ಮಳಿಗೆಗಳಲ್ಲಿ QR ಕೋಡ್ ಇದ್ದಿದ್ದರೆ ಅಂಗಡಿಗಳು ಮಂಜೂರಾಗಿದ್ದು ಯಾರಿಗೆ, ಈಗ ಅಂಗಡಿಗಳನ್ನು ನಡೆಸುತ್ತಿರುವವರು ಯಾರು ಅನ್ನೋದು ಗೊತ್ತಾಗುತ್ತದೆ ಎಂದು ಹೆದರಿ QR ಕೋಡ್ ಗಳನ್ನು ಮಾಯ ಮಾಡಿಸಿದವರು, ಈಗ ಸಾರ್ವಜನಿಕರ ಹೋರಾಟಕ್ಕೆ ಜಾತಿಯ ಬಣ್ಣ ಬಳಿಯುತ್ತಿದ್ದಾರೆ ಎಂದು ಟೋಪಣ್ಣವರ ಆರೋಪಿಸಿದ್ದಾರೆ.

ಜೈಕಿಸಾನ್ ಮಾರುಕಟ್ಟೆ ನಿರ್ಮಾಣಕ್ಕೆ ವಿರೋಧ ಮಾಡಿದವರು,ಈಗ ಜೈಕಿಸಾನ್ ಮಾರುಕಟ್ಟೆಯ ಪರವಾಗಿ ವಕಾಲತ್ತು ವಹಿಸುತ್ತಿರುವದು ಹಾಸ್ಯಾಸ್ಪದ ಹಿಂದುತ್ವದ ಹೆಸರಿನಲ್ಲಿ ಸರ್ಕಾರಿ ಆಸ್ತಿಗಳನ್ನು ದುರುಪಯೋಗ ಪಡೆಸಿಕೊಂಡು ಸ್ವಂತ ಲಾಭ ಮಾಡಿಕೊಳ್ಳುತ್ತಿರುವ ಜನನಾಯಕರು ನೀತಿ ಪಾಠ ಹೇಳುತ್ತಿರುವದು ಹಾಸ್ಯಾಸ್ಪದ ಎಂದು ಟೋಪಣ್ಣವರ ಲೇವಡಿ ಮಾಡಿದ್ದಾರೆ.

ಹಿಂದುತ್ವದ ಮತಗಳ ಮೇಲೆ ಗೆದ್ದು‌ ಬರುವ ಶಾಸಕ‌ ಅಭಯ ಪಾಟೀಲ ರಾಣಿ ಚನ್ನ ಭೈರಾದೇವಿ ಹೆಸರಿಡುವ ಬದಲು ನಮ್ಮ‌ ಜಿಲ್ಲೆಯ ಸಾಕಷ್ಟು ಹಿಂದುಪರ ಹೋರಾಟಗಾರರಿದ್ದಾರೆ. ಆದರೆ ಶಾಸಕ ಅಭಯ ಪಾಟೀಲ ಅವರು ರಾಣಿ‌ ಬೈರಾದೇವಿ ಅವರ ಹೆಸರೇ ಏಕೆ ಇಟ್ಟರು ಎನ್ನುವುದನ್ನು ಹಿಂದುಗಳು ಪ್ರಶ್ನೆ ಮಾಡಬೇಕಿದೆ. ಇಲ್ಲಿನ ಖಾವ್ ಕಟ್ಟಾದಲ್ಲಿ ಶಾಸಕ ಅಭಯ ಪಾಟೀಲ ಎಷ್ಟು ಜನ ಹಿಂದುಗಳಿಗೆ, ದೀನ ದಲಿತರಿಗೆ, ವಿಧವೆಯರಿಗೆ, ಬಡವರಿಗೆ ಮಳಿಗೆಯನ್ನು ಹಂಚಿಕೆ ಮಾಡಿದ್ದಾರೆ ಎಂದು ಟೋಪಣ್ಣವರ ಪ್ರಶ್ನಿಸಿದ್ದಾರೆ.

ಹಿಂದುತ್ವದ ಹೆಸರಿನಲ್ಲಿ ಸರ್ಕಾರಿ ಆಸ್ತಿಗಳನ್ನು ದುರುಪಯೋಗ ಮಾಡಿಕೊಂಡು ಸ್ವಂತ ಲಾಭ ಮಾಡಿಕೊಳ್ಳುವ ನಾಯಕರಿಂದ ಹಿಂದುತ್ವದ ಪಾಠ ಕಲಿಯಬೇಕಾಗಿಲ್ಲ. ತಿನಿಸು ಕಟ್ಟೆಯ ಅವ್ಯವಹಾರ ಮುಚ್ಚಿಹಾಕಲು ಹಿಂದುತ್ವದ ಮಂತ್ರ ಜಪಿಸಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ತನಿಖೆಯ ನಂತರ ನಿಜ ಬಣ್ಣ ಬಯಲಾಗುತ್ತದೆ ಎಂದು ರಾಜೀವ ಟೋಪಣ್ಣವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read All News