ತಿರುಪತಿ ವೆಂಕಟೇಶ್ವರನ ದರ್ಶನ ಮಾಡಿಸಿದ ಭಗವಂತನಿಗೆ ಇಲ್ಲ ನಿತ್ಯ ಪೂಜೆ

  • shivaraj B
  • 28 Jul 2024 , 8:57 PM
  • Koppal
  • 19244

ಗೃಹಬಂಧನದಲ್ಲಿ ಲಿಂಗನಬಂಡಿಯ ಜಗದ್ಗುರು ಮೌನೇಶ್ವರರು

ಕೊಪ್ಪಳ : ಜಿಲ್ಲೆಯ ಯಲಬುರ್ಗಾ ತಾಲೂಕಿನ ಶರಣರ ತಪೋಭೂಮಿ ಇರುವ ಜಾಗವೇ ಅದು ಲಿಂಗನಬಂಡಿ ಗ್ರಾಮ, ಈ ಗ್ರಾಮಕ್ಕೆ ಸಾಕ್ಷಾತ್ ಪರಮಾತ್ಮನೇ ಜಗದ್ಗುರು ಮೌನೇಶ್ವರರಾಗಿ 12ನೇ ಶತಮಾನದಲ್ಲಿ ಲಿಂಗನಬಂಡಿ ಗ್ರಾಮಕ್ಕೆ ಬಂದು ವೆಂಕಟೇಶ್ವರನ ಭಕ್ತರಿಗೆ ದರ್ಶನ ಮಾಡಿಸಾದ ಪ್ರತೀತಿ. ಇಂಥ ಜಗದ್ಗುರು ಮೌನೇಶ್ವರರ ದೇವಸ್ಥಾನದಲ್ಲಿ ನಿತ್ಯ ಪೂಜೆನೇ ಇಲ್ಲವಾಗಿದೆ ಎಂದು ಭಕ್ತರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

"ಯಾರಿವರೂ ಮೌನೇಶ್ವರರು..?" 

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವರ ಗೋನಾಳ ಗ್ರಾಮದ ವಿಶ್ವಕರ್ಮ ಸಮಾಜದ ದಂಪತಿಗಳಾದ ಶೇಷಪ್ಪ ಆಚಾರ್ಯ ಮತ್ತು ಶೇಷಮ್ಮರೆಂಬ ದಂಪತಿಗಳಿದ್ದರು. ಅವರಿಗೆ ಬಹಳಕಾಲ ಮಕ್ಕಳಾಗಿರಲಿಲ್ಲ. ಶೇಷಮ್ಮಳು ಆ ಊರಿನ ಆದಿಲಿಂಗೇಶ್ವರ ದೈವಕ್ಕೆ 12 ವರ್ಷಗಳ ಕಾಲ ದಿನನಿತ್ಯವೂ ಬೆಳಗ್ಗೆ ಪೂಜೆಗೈದು ಬರುತ್ತಿದ್ದಳು. ಕೊನೆಗೊಂದುದಿನ ಶೇಷಮ್ಮಳು ಆದಿಲಿಂಗೇಶ್ವರನಿಗೆ ಎಂದಿನಂತೆ ಪೂಜೆಗೈದು 'ತಂದೆ ಹನ್ನೆರಡು ವರ್ಷಗಳ ಕಾಲ ನಿನ್ನ ಪೂಜೆಗೈದಿರುವೆ ಈಗಲಾದರೂ ಮಕ್ಕಳ ಭಾಗ್ಯವನೀತ್ತು ಸಲಹು ತಂದೆ' ಎಂದಾಗ ಸಾಕ್ಷಾತ್ ಶಿವನೇ ಪ್ರತ್ಯಕ್ಷವಾಗಿ "ಮಗಳೇ ಶೇಷಮ್ಮ ನಾನೇ ನಿನ್ನ ಮಗನಾಗಿ ನಾಳೆಯ ಉಷಾ ಕಾಲದಲ್ಲಿ ನಿನ್ನ ಮಗ್ಗುಲಲ್ಲಿ ಮಲಗಿರುವೆ" ಎಂದು ಹೇಳಿ ಪರಮಾತ್ಮನು ಅದೃಶ್ಯನಾದ. ಸಾಕ್ಷಾತ್ ಶಿವನೇ ಕೊಟ್ಟ ಮಾತಿನಂತೆ ಬಾಲಕನಾಗಿ ಜನ್ಮತಾಳಿದನು. ಜಗದ್ಗುರು ಮೌನೇಶ್ವರರು ಬಾಲ್ಯದಲ್ಲಿಯೇ ಅನೇಕ ಪವಾಡಗಳನ್ನ ಮಾಡಿ, ನಂತರ ಲೋಕ ಸಂಚಾರದ ಅಂಗವಾಗಿ ವರವಿ, ಲಿಂಗನಬಂಡಿ, ಗೋನಾಳ ಮತ್ತು ತಿಂಥಿಣಿಗಳ ಪೈಕಿ ತಿಂಥಿಣಿ ಪ್ರಮುಖವಾಗಿವೆ.

ಲಿಂಗನಬಂಡಿ ಗ್ರಾಮಕ್ಕೂ ಜಗದ್ಗುರು ಮೌನೇಶ್ವರರಿಗೂ ಏನು ಸಂಬಂಧ

ಲೋಕ ಸಂಚಾರಿ ಆದ ಜಗದ್ಗುರು ಮೌನೇಶ್ವರರು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಪಭೂಮಿ ಲಿಂಗನಬಂಡಿಗೆ ಮನಸೋತು ಆಗಮಿಸಿದ್ದಾರೆ. ಲಿಂಗನಬಂಡಿಯ ಗುಡ್ಡದಲ್ಲಿ ಮೌನೇಶ್ವರರು ಒಂದು ದಿನ ಕುಳಿತಿರುವಾಗ ಕೆಲವು ಭಕ್ತರು.

ಆಂಧ್ರ ಪ್ರದೇಶದ ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಹೋಗುವುದನ್ನ ಗಮನಿಸಿದ ಮೌನೇಶ್ವರರು ಅವರನ್ನು ಕರೆದು ವಿಚಾರಿಸಿದಾಗ ನಾವು ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಹೋಗುತ್ತೇವೆ ಎಂದು ಶ್ರೀಗಳ ಬಳಿ ಹೇಳುತ್ತಾರೆ. ತಕ್ಷಣ ಮೌನೇಶ್ವರರು ತಿರುಪತಿ ವೆಂಕಟೇಶ್ವರ ಇಲ್ಲೇ ಇದ್ದಾನಲ್ಲ, ಅಲ್ಲಿಗೆ ಹೋಗುತ್ತೀರಿ ಎಂದು ಹೇಳಿದಾಗ ಕೆಲವು ಭಕ್ತರು ಇವರು ಹುಚ್ಚರಿರಬೇಕು ಎಂದು ನಗುತ್ತಾರೆ ಅಂತೆ, ಆಗ ಸಾಕ್ಷಾತ್ ಶಿವನ ಅವತಾರದ ಶ್ರೀ ಮೌನೇಶ್ವರರು ತಮ್ಮ ಎರಡನೇ ರೂಪವಾದ ಶ್ರೀ ವೆಂಕಟೇಶ್ವರ ರೂಪವನ ತಾಳಿ ಲಿಂಗನಬಂಡಿಯಲ್ಲಿ ವೆಂಕಟೇಶ್ವರನ ದರ್ಶನ ಮಾಡಿಸಿದ ಕೀರ್ತಿ ಮೌನೇಶ್ವರರಿಗೆ ಸಲ್ಲುತ್ತದೆ. ವೆಂಕಟೇಶ್ವರನ ಭಕ್ತರು ಮೌನೇಶ್ವರ ಪವಾಡವನ್ನ ಕಂಡು ನೀವು ಸಾಕ್ಷಾತ್ ಶಿವನ ಅವತಾರವಿರಬೇಕು ಎಂದು ಮೌನೇಶ್ವರರಿಗೆ ನಮಸ್ಕರಿಸಿದ ಪವಾಡವು ಲಿಂಗನಬಂಡಿ ಗ್ರಾಮಕ್ಕೆ ಇದೆ. ಸಾಕ್ಷಾತ್ ಮೌನೇಶ್ವರರು ದೇವಾನ್ ದೇವತೆಗಳನ್ನು ಲಿಂಗನಬಂಡಿ ಗ್ರಾಮಕ್ಕೆ ಕರೆಸಿ ಅಕ್ಷಯ ಪಾತ್ರೆಯಲ್ಲಿ ಪ್ರಸಾದ ಉಣಿಸಿದ ಪವಾಡವುಂಟು, ಇಂಥ ಪವಾಡ ಪುರುಷನ ಗರ್ಭಗುಡಿಗೆ ಬೀಗ ಬಿದ್ದಿದೆ. ಭಾರತ ದೇಶವು ದೇವರಗಳ ನಾಡು ಎಂದು ಕರೆಯುತ್ತೇವೆ. ಸಾಕ್ಷಾತ್ ಶಿವ ಮೌನೇಶ್ವರನ ರೂಪದಲ್ಲಿ ಧರೆಗಿಳಿದು ಬಂದ ಭಗವಂತನಿಗೆ ನಿತ್ಯ ಪೂಜೆ ಸಲ್ಲಿಸಲಿ ಎನ್ನುವುದೇ ನಮ್ಮ  ಉದ್ದೇಶವಾಗಿದೆ.

" ವಿಜೃಂಭಣೆಯಿಂದ ಮೌನೇಶ್ವರರ ಜಾತ್ರಾ ಮಹೋತ್ಸವ"

ಅಂದಿನ ಹೈದರಾಬಾದ್ ನಿಜಾಮನ ಕಾಲದಲ್ಲಿ, ಇಂದಿನ ಕೊಪ್ಪಳ ಜಿಲ್ಲೆಯ ಲೇಬಗೇರ ಗ್ರಾಮದ ಶ್ರೀ ಮದ್ದಾನೆಗುಂದಿ ಸರಸ್ವತಿ ಪೀಠದ ಶ್ರೀಗಳನ್ನು ಲಿಂಗನಬಂಡಿ ಗ್ರಾಮದ ಮೌನೇಶ್ವರ, ಎಚ್ಚರೇಶ್ವರ, ವೆಂಕಟೇಶ್ವರ ದೇವಸ್ಥಾನಗಳ ಧರ್ಮದರ್ಶಿಗಳ ನೇತೃತ್ವದಲ್ಲಿ ಲೇಬಗೇರ ಗ್ರಾಮದಿಂದ ಮಹಾರಥೋತ್ಸವದ ಕಳಸ ತೆಗೆದುಕೊಂಡು ಹೋಗಿ ಅದ್ದೂರಿಯಾಗಿ ಶ್ರೀ ಮೌನೇಶ್ವರ ಜಾತ್ರಾ ಮಹೋತ್ಸವವು ಜರಗಿದ್ದು ಮಾತ್ರ ಇತಿಹಾಸ.

" ಅರ್ಚಕರ ಮತ್ತು ಅರ್ಚಕರ ನಡುವೆ ವಿವಾದ"

1975 ರವರೆಗೆ ನಡೆಯುತ್ತಿದ್ದ ಅದ್ದೂರಿ ಮೌನೇಶ್ವರರ ಜಾತ್ರಾ ಮಹೋತ್ಸವಕ್ಕೆ ಅದು ಯಾರ ಕಣ್ಣು ಬಿತ್ತು ಗೊತ್ತಿಲ್ಲ, 1975-76 ರಲ್ಲಿ ನಡೆದ ಗಲಾಟೆಯಿಂದ ಇಲ್ಲಿಯವರೆಗೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಾ ಇಲ್ಲ, ಹಾಗೂ ಲಿಂಗನಬಂಡಿಯಲ್ಲಿ ತಿರುಪತಿ ವೆಂಕಟೇಶ್ವರನ ದರ್ಶನ ಮಾಡಿದ ಭಗವಂತ ಜಗದ್ಗುರು ಶ್ರೀ ಮೌನೇಶ್ವರನಿಗಿಲ್ಲ ನಿತ್ಯ ಪೂಜೆ ಇಲ್ಲದಂತಾಗಿದೆ. ಒಟ್ಟಾರೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ಪೂಜೆ ನಡೆಸಲು ಹಾಗೂ ಜಾತ್ರೆ ನಡೆಸಲು ಅನುಮತಿ ನೀಡುತ್ತಾರೋ ಕಾದುನೋಡಬೇಕಿದೆ.

ವಿಶ್ವಕರ್ಮ ಸಮಾಜದ ಕುಲದಲ್ಲಿ ಹುಟ್ಟಿ ಮಾನವರೆಲ್ಲ ಒಂದೇ ಎಂದು ಸಾರಿದ ಸಂತ ದೈವ ಮಾನವ ಜಗದ್ಗುರು ಮೌನೇಶ್ವರರ ತಪಭೂಮಿ ಲಿಂಗನಬಂಡಿ ಗ್ರಾಮದಲ್ಲಿ ಮತ್ತೆ ಜಗದ್ಗುರು ಮೌನೇಶ್ವರರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಬೇಕು. ಅರ್ಚಕರು ಮತ್ತು ಅರ್ಚಕರ ನಡುವೆ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ, ಅವರು ವಿಶ್ವಕರ್ಮ ಜನಾಂಗದವರೇ ಆದಕಾರಣ ಕೊಪ್ಪಳ ಜಿಲ್ಲಾಧಿಕಾರಿಗಳು ತಕ್ಷಣ ಬೇರೆಯವರನ್ನ ತಾತ್ಕಾಲಿಕವಾಗಿ ದಿನನಿತ್ಯ ಪೂಜೆ ಮಾಡಲು ನೇಮಿಸಬೇಕು ಎಂದು ವಿಶ್ವಕರ್ಮ ಸಮಾಜದ ಮುಖಂಡರಾದ ನಾನು ಮನವಿ ಮಾಡಿಕೊಳ್ಳುತ್ತೇನೆ.

-ಶರಣಪ್ಪ ಕಾಮನೂರ

ವಿಶ್ವಕರ್ಮ ಸಮಾಜದ ಮುಖಂಡ

ಲಿಂಗನಬಂಡಿಯಲ್ಲಿರುವ ಜಗದ್ಗುರು ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ನಿತ್ಯ ಪೂಜೆ ಮಾಡದೆ ಇರುವುದು ಬಹಳಷ್ಟು ನೋವಿನ ಸಂಗತಿ. ಜಗದ್ಗುರು ಮೌನೇಶ್ವರರು ಅವರೇ ಹೇಳಿರುವ ಹಾಗೆ ನಾನು ಪಂಚಾಳ ಕುಲದಲ್ಲಿ ಹುಟ್ಟುವುದಕ್ಕಿಂತ ಬೇರೆ ಕುಲದಲ್ಲಿ ಹುಟ್ಟಿದ್ರೆ ಲೇಸು ಎಂದು ಹೇಳಿದ್ದಾರೆ. ಇದರ ಅರ್ಥ ಏನಂದ್ರೆ ನಮ್ಮ ಪಂಚಾಳ ಅಥವಾ ವಿಶ್ವಕರ್ಮ ಸಮಾಜದಲ್ಲಿ ಒಗ್ಗಟ್ಟಿಲ್ಲ ಎಂದು ಅರ್ಥೈಸಬಹುದು,ಈ ಪ್ರಕರಣ ನ್ಯಾಯಾಲಯದಲ್ಲಿ ರುವುದರಿಂದ, ಪ್ರಕರಣ ಇರುವ ಅರ್ಚಕರ ಕುಟುಂಬ ಹೊರತುಪಡಿಸಿ ಬೇರೆಯವರನ್ನಾದರೂ ಅರ್ಚಕರನ್ನ ನೇಮಕ ಮಾಡಿ ಸಾಕ್ಷಾತ್ ಶಿವನ ಅವತಾರವಾದ ಮೌನೇಶ್ವರರಿಗೆ ಪೂಜೆಗೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡುತ್ತೇನೆ.

- ಪ್ರಶಾಂತ್ ವಿಶ್ವಬ್ರಾಹ್ಮಣ.

ವಿಶ್ವಕರ್ಮ ಸಮಾಜದ ಯುವ ಮುಖಂಡ ಕೊಪ್ಪಳ.

1975ರ ವರೆಗೆ ಜಾತ್ರೆ ಅತ್ಯಂತ ವಿಜ್ರಂಬಣೆಯಿಂದ ಜರುಗುತ್ತಿತ್ತು ಅಂತ ನಮ್ಮ ತಂದೆ ತಾಯಿ ಹೇಳುತ್ತಿದ್ದರು.ಯಾರಾ ಕೆಟ್ಟ ಕಣ್ಣು ಬಿತ್ತು ಗೊತ್ತಿಲ್ಲ, ಭಗವಂತ ಶ್ರೀ ಮೌನೇಶ್ವರರು ಶಿವನ ಅವತಾರವಾಗಿ ಲಿಂಗನಬಂಡಿಗೆ ಬಂದಿದ್ದು ನಿಜವಾದರೆ, ಜಾತ್ರೆ ಹಾಗೂ ದೇವಸ್ಥಾನಕ್ಕೆ ಇರುವ ವಿವಾದವನ್ನು ದೇವರೇ ಬಗೆಹರಿಸಿ ಆದಷ್ಟು ಬೇಗನೆ ನಮ್ಮಂತ ಯುವ ಪೀಳಿಗೆಗಳು ಮತ್ತೊಮ್ಮೆ ಮೌನೇಶ್ವರರ ಗತವೈಭವ ಜಾತ್ರಾ ಮಹೋತ್ಸವ ನೋಡುವಂತಾಗಲಿ ಎಂದು ಹೇಳುತ್ತೇನೆ.

ಹೆಸರು ಹೇಳಲು ಇಚ್ಚಿಸದ ಮೌನೇಶ್ವರ ಭಕ್ತ.


ವರದಿ : ರವಿಚಂದ್ರ ಬಿ ಬಡಿಗೇರ

Read All News