ಬೆಳಗಾವಿ:ದೇಶದ ಈ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ದೇಶದ ಎಲ್ಲ ಜನರೂ ಈ ರಾಷ್ಟ್ರೀಯ ಹಬ್ಬವನ್ನು ಅತೀ ಉತ್ಸಾಹ ಹಾಗೂ ವಿಜೃಂಭಣೆಯಿಂದ ಆಚರಣೆ ಮಾಡಬೇಕೆಂದು ಕರೆಕೊಟ್ಟರು.
ದೇಶದ ಪ್ರಧಾನಿಯವರು ತಿಳಿಸಿದ ಪ್ರಕಾರ ಮೂರು ದಿನಗಳ ಕಾಲ ಹರ ಘರ ತಿರಂಗಾ ಎಂಬ ಆಚರಣೆ ಮೂಲಕ ನಾವು ನಮ್ಮ ಇಡೀ ಕ್ಷೇತ್ರದಲ್ಲಿ ಸುಮಾರು 30 ಸಾವಿರ ದ್ವಜ ವಿತರಣೆ ಮಾಡಿದ್ದೇವೆ, ಪ್ರತಿ ವಾರ್ಡ, ಹಾಗೂ ನ್ಯಾಯಾಲಯದಲ್ಲಿ ಪ್ರತಿ ನ್ಯಾಯವಾದಿಗಳಿಗೂ ದ್ವಜ ನೀಡಿದ್ದೇವೆ ಎಂದರು..
ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂಬ ಆಸೆ, ಪ್ರಯತ್ನ ಎರಡೂ ಇದೆ, ಆದರೆ ಅದು ಪಕ್ಷದ ವರಿಷ್ಠರ ಇಚ್ಛೆ,, ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಕೊಟ್ಟರೂ ಮಾಡುತ್ತೇನೆ, ಬೇರೆಯವರಿಗೆ ಕೊಟ್ಟರೂ ಕೂಡಾ ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡುತ್ತೇನೆ ಎಂದರು .
ಇದೇ ವೇಳೆ ಮುರುಗೇಶ ಗೌಡ ಪಾಟೀಲ ಅವರು ನಾಡಿನ ಎಲ್ಲ ಜನತೆಗೆ ಸ್ವಾಂತಂತ್ರ್ಯ ದಿನದ ಶುಭಾಶಯ ತಿಳಿಸಿದರು..