ಬೈಲಹೊಂಗಲ : ನಮ್ಮ ಸ್ವಾತಂತ್ರ್ಯ ಸುಮ್ಮನೆ ಧಕ್ಕಿದಕ್ಕಲ್ಲ, ಹಲವಾರು ಶರಣರು, ಸಾಧು ಸಂತರು ದೇಶ ಭಕ್ತರ ತ್ಯಾಗದಿಂದ ದೊರೆತ ಸ್ವಾತಂತ್ರ್ಯವನ್ನು ಚಿರಾಯುವಾಗಿ ನೆನಪಿಸಿಕೊಳ್ಳಬೇಕಾಗಿದ್ದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ.
ನಮಗೆ ದೊರೆತ ಸ್ವಾತಂತ್ರ್ಯದ ಉಪಯೋಗದ ಬದಲು ನಿಷ್ಪ್ರಯೋಜಕರಾಗಿ ದೇಶದ ಜನತೆ ನಿಂತಿರುವದು ವಿಪರ್ಯಾಸ ಎಂದರೆ ಸರಿ. ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯ ವಾಸಿಗಳಿಗೆ ದೊರಕಿಸಿಕೊಟ್ಟ ಸವಲತ್ತುಗಳು ಚೆನ್ನಾಗಿತ್ತು ಆನಂತರ ಬಂದ ಪುಕ್ಕಟೆ ಭರವಸೆಯ ದಾಸರಾಗಿ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಯೋಚನೆ ಮಾಡದ ಮನಸ್ಥಿತಿ ನಮ್ಮಲ್ಲಿ ಮನೆ ಮಾಡಿಸಿದ್ದು ರಾಜಕಾರಣ.
ಮನೆಯೊಂದು ಮೂರೂ ಬಾಗಿಲು ಎನ್ನುವಂತಾಗಿದೆ ಇವತ್ತಿನ ರಾಜಕಾರಣ. ಪರದೇಶಗಳಲ್ಲಿ ವಯಸ್ಸಿಗೆ ಬಂದ ಮಕ್ಕಳನ್ನು ಮೊದಲು ದೇಶ ಸೇವೆಗೆ ಕಳುಹಿಸಿ ಆಮೇಲೆ ಮನೆಯ ಮಗನೆಂದು ಹೇಳಿಕೊಳ್ಳುವ ಜಾಯಮಾನ ಬರಬೇಕು. ಅಂದ್ರೆ ಮಾತ್ರ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ನೆನಪು ಅಜರಾಮವಾಗಿ ಉಳಿಯುತ್ತದೆ.
ಸರ್ವರು ಸ್ವಾತಂತ್ರ್ಯರು ಎನ್ನುವ ಈ ದೇಶದಲ್ಲಿ ದೇಶಭಕ್ತಿ ಮರೆತು ಹೋಗಿದೆ.
ವರದಿ : ರವಿಕಿರಣ್ ಯಾತಗೇರಿ