ಇದು ಸರ್ವೇಸಾಮನ್ಯರ ಬಜೆಟ್ : ಪ್ರವೀಣ್ ಹಿರೇಮಠ

  • Krishna Shinde
  • 15 Jan 2024 , 1:30 PM
  • Bengaluru
  • 301

ಬೆಂಗಳೂರು : ಕರ್ನಾಟಕ ಸರಕಾರ ತನ್ನ ಬಜೆಟ್ ಮಂಡನೆ ಮಾಡಿದ್ದು ಗಣ್ಯಾಧಿ ಗಣ್ಯರ ಮನ ಗೆದ್ದಿದೆ , ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಮಂಡಿಸಿರುವ ಬಜೆಟ್ ಗುಣಗಾನ ಮಾಡಿ ಮಾತನಾಡಿರುವ ಪ್ರವೀಣ ಇದು ಸರ್ವೇಸಾಮನ್ಯರ ಜನಸ್ನೇಹಿ ಬಜೆಟ್ ಎಂದು ಹೇಳಿದ್ದಾರೆ.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಬೆಳಗಾವಿಯ ಅಭ್ಯರ್ಥಿ ಪ್ರವೀಣ್ ಹಿರೇಮಠ ಬಜೆಟ ಕುರಿತು  ಮಾತನಾಡಿ ನಿನ್ನೆ ನಡೆದ ಬಜೆಟ್ ಇದು ಸರ್ವೇಸಾಮನ್ಯರ ಪೂರಕವಾದ ಬಜೆಟ್ ಆಗಿದೆ ಎಂದು ಹೇಳಿದ್ದಾರೆ.

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಅವರ ಸರ್ವರಿಗೂ ಸಮ ಬಾಳು ಸರ್ವರಿಗೂ ಸಮ ಪಾಲು ವಿಚಾರ ಧಾರೆಯನ್ನು ಈ ಬಜೆಟ್ ಎತ್ತಿ ಹಿಡಿದಿದೆ ಎಂದು ಪ್ರವೀಣ್ ಹೇಳಿದ್ದಾರೆ.

ಇದು ಕನ್ನಡ ನಾಡಿನ ಸಮಸ್ತ ರೈತ ಬಂದವರಿಗೆ ಪೂರಕವಾಗಿರುವ ಬಜೆಟ್ ಆಗಿದೆ ಈ ಬಜೆಟನಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಕೊಪ್ಪಳ ಜಿಲ್ಲೆಯ ನವಲಿ ಬಳಿ ಇರುವ ಸಮಾನಂತರ ಜಲಾಶಯ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದ್ದಕ್ಕೆ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಡಿ ಸಿ ಎಂ ಡಿ ಕೆ ಶಿವಕುಮಾರ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.

Read All News