ಬೈಲಹೊಂಗಲ : ಇದೊಂದು ವಿಚಿತ್ರವಾದರೂ ಸತ್ಯ ಎನಿಸುವಂತಹ ಕಥೆ. ಬಹಳಷ್ಟು ಜನ ಸನ್ 1980 ರಿಂದ 1989 ರವರೆಗೆ ಜನಿಸಿದ್ದು, ಇನ್ನೂ ವಯಸ್ಸೆ ಆಗಿಲ್ಲ ಅನ್ನೂವ ತರಹ ಇರತಾರೆ. ಆವಾಗಿನ ಆಹಾರ, ಶಾಲಾ ಕಲಿಕೆ ಮತ್ತು ತಂದೆ- ತಾಯಂದಿರ ಆರೈಕೆ ಮಕ್ಕಳ ಮೇಲೆ ಪರಿಣಾಮ ಬೀರಿರಬಹುದೇನೋ ಅನಿಸುತ್ತದೆ.
ಸಾಮಾನ್ಯವಾಗಿ ಸನ್ 1983-84 ಗಮನದಲ್ಲಿಟ್ಟುಕೊಂಡು ವಿಚಾರ ಮಾಡಿದಾಗ ಪ್ರಸ್ತುತ ಅವರಿಗೆ ವಯಸ್ಸು 42,43 ಇರುತ್ತೆ ಆದ್ರೆ ಅವರ ವ್ಯಕ್ತಿತ್ವ ಮಾತ್ರ 30 ವರ್ಷ ವಯಸ್ಸಿನ ಆಸುಪಾಸಿನವರ ತರಹ ಇರುವದಂತೂ ಸುಳ್ಳಲ್ಲ.
ತದನಂತರ ಬಂದತಹ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ನೋಡಿದಾಗ ನಮಗ ಸಿಗುವದೊಂದ ಉತ್ತರ. ಎನಪ್ಪಾ ನಾವೂ ಕೂಡಾ ಇದರಾಗ ಹುಟ್ಟಬೇಕಾಗಿದಂತ.
ಮತ್ತ ಈ ಜನಾ ತಮ್ಮ ಜೀವನದಾಗ ಏನೇನ ಕಾಣಬೇಕೋ ಅದನ್ನೆಲ್ಲಾ ಕಂಡಾರ. .ಐದ ಪೈಸಾ ಹತ್ತು ಪೈಸಾ ಹಿಡಕೊಂಡ ಸಾಲಿ ಒಳಗ ನಾನ ನಾನೇ ಶ್ರೀಮಂತ ಅಂತ ಮೆರೆದ ಮಂದಿ ಇದ. ಅದು ಇಲ್ದೆ ಇದ್ದಾವ್ರ ಕಡೆ ವಿಚಾರಧಾರೆ ಬೇರೆದ ಇರತಿದ್ವು ಒಟ್ಟಾರೆ ಹೇಳಬೇಕಂದ್ರ ಅವತ್ತಿನ ಮಜಾ ಈಗ ಇರಾಕ ಸಾಧ್ಯನೆ ಇಲ್ಲ. ಅವಾಗ ಚಾಲೇಂಜ್ ಅಂದ್ರ ದೊಡ್ಡ ಆಸ್ತಿ ಗಳಿಸಿದಂಗ ಸಾಲಿ ಕಾಲೇಜು ಮೋಜು ಮಸ್ತಿ ಎಲ್ಲಾ ಮಸ್ತ ಇರತಿತ್ತ. ಏನಾರ ಆಗ್ಲಿ ಈ ಅವಧಿ ಒಳಗ ಹುಟ್ಡಿದವ್ರ ಇನ್ನೂ ಸಣ್ಣವರ ತರಹಾ ಕಾಣತಾರ ಆದ್ರ ಅವರ ಕಡೆ ಇರುವ ವಿಚಾರಧಾರೆಗಳು ಮಾತ್ರ ಅದ್ಭುತ.
ವರದಿಗಾರ : ರವಿಕಿರಣ್ ಯಾತಗೇರಿ