ಕನ್ನಡ ನಾಡು, ನುಡಿಗಾಗಿ ಶ್ರಮಿಸಿದವರಿಗೆ ಸಿಗಬೇಕು ರಾಜ್ಯೋತ್ಸವ ಪ್ರಶಸ್ತಿ

  • Shivaraj
  • 31 Oct 2026 , 12:11 AM
  • Bailhongal
  • 39

ಬೈಲಹೊಂಗಲ:

ರಾಜ್ಯ ಸರ್ಕಾರ ಪ್ರತಿ ವರ್ಷ ಕೊಡಮಾಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕನ್ನಡ ನಾಡು, ನುಡಿಗಾಗಿ ದುಡಿದವರಿಗೆ ದೊರೆಯಬೇಕು. ನವೆಂಬರ್ 1 ರಂದು ಕೊಡಮಾಡುವ ಈ ಪ್ರಶಸ್ತಿಗೆ ಸಮಿತಿ ರಚನೆ ಮಾಡಿ ಆಯ್ಕೆ ಮಾಡುವ ಪದ್ದತಿ ಸರ್ಕಾರಗಳು ಅಳವಡಿಸಿಕೊಳ್ಳಬೇಕಾಗಿದೆ.

ಪರಭಾಷೆಯ ಜನರು ಕೂಡಾ ಕನ್ನಡ ಭಾಷೆಗೆ ಮಾರುಹೋಗಿ ಅದರ ಕುರಿತಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು ಅಂತಹವರನ್ನು ಗುರುತಿಸುವ ಕಾರ್ಯವಾಗಬೇಕು ಅಲ್ಲದೆ ಅವರ ಸಾಧನೆ ಪರಿಗಣನೆಗೆ ಬರಬೇಕು ಎನ್ನುವದು ಕನ್ನಡಾಭಿಮನಿಗಳ ಆಶಯವಾಗಿದೆ. ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎನ್ನುವಂತೆ ಕನ್ನಡತನವನ್ನು ಮೈಗೂಡಿಸಿಕೊಂಡು ಬಂದಿರುವ, ಕನ್ನಡಕ್ಕಾಗಿ ಹೋರಾಟ ಮಾಡುತ್ತಿರುವವರ ಕೈ ಸೇರಬೇಕಾದ ಈ ಪ್ರಶಸ್ತಿಯ ಆಯ್ಕೆಗಾಗಿ ಸಮಿತಿ ರಚನೆಯ ಅವಶ್ಯಕತೆ ಇದೆ. ಕನ್ನಡದ ಪ್ರಚಾರ, ಪ್ರಸಾರದ ಹೊಣೆ ಹೊತ್ತಿರುವ ಸಾಕಷ್ಟು ಜನರು ಯಾವುದೇ ಫಲಾಪೇಕ್ಷೆಗೆ ನೋಡುತ್ತಿಲ್ಲ ಅಂತಹವರನ್ನು ಗುರುತಿಸುವ ಕಾರ್ಯ ಸರ್ಕಾರದಿಂದ ಆಗಬೇಕೆನ್ನುವ ಅಭಿಲಾಷೆ ಕನ್ನಡಿಗರದ್ದಾಗಿದೆ.

ವರದಿಗಾರ: ರವಿಕಿರಣ್ ಯಾತಗೇರಿ

Read All News