ಮೂರು ತಿಂಗಳ ಕರು 1.5 ಲಕ್ಷಕ್ಕೆ ಮಾರಾಟ : ರೈತನ ಬದುಕಿಗೆ ಖುಷಿ ತಂದ ಕರು

  • shivaraj B
  • 3 Oct 2024 , 8:26 AM
  • Athani
  • 672

ಅಥಣಿ : ಕೇವಲ 95 ದಿನಗಳ ಖಿಲ್ಲಾರಿ ತಳಿಯ ಕರು ಬರೋಬ್ಬರಿ 1.5 ಲಕ್ಷಕ್ಕೆ ಮಾರಾಟವಾಗಿ ಅಚ್ಚರಿ ಮೂಡಿಸಿದೆ.

ಕಾಗವಾಡ ತಾಲೂಕಿನ ಕೃಷ್ಣ ಕಿತ್ತೂರು ಗ್ರಾಮದ ರೈತ ಅಶೋಕ ಜಂಬಗಿ ಯವರ ಮನೆಯಲ್ಲಿದ್ದ ಕಿಲ್ಲಾರಿ ಆಕಳಿಗೆ ಹುಟ್ಟಿದ ಕರು ಅಲ್ಪಾವಧಿಯಲ್ಲಿ ದುಬಾರಿ ಬೆಲೆಗೆ ಮಾರಟವಾಗಿ ಗಮನ ಸೆಳೆದಿದೆ.

ರಾಯಭಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ ರೈತ ಕರೆಪ್ಪ ಲಾಳಿ 1.5 ಲಕ್ಷ ಹಣ ಕೊಟ್ಟು ಖರೀದಿಸಿ.ಕರುವಿಗೆ ಬಣ್ಣ ಬಳಿದು ಅದ್ದೂರಿ ಮೆರೆವಣಿಗೆ ಮಾಡುವ ಮೂಲಕ ಸ್ವಾಗತ ಕೋರಿದ್ದಾನೆ. ಒಟ್ಟಾರೆ ಅಳಿವಿನಂಚಿನಲ್ಲಿರುವ ಕಿಲ್ಲಾರಿ ತಳಿಗಳ ಅಭಿವೃದ್ಧಿಗೆ ಉತ್ತರ ಕರ್ನಾಟಕದ ರೈತರು ಹೆಚ್ಚಿನ ಒಲವು ತೋರಿದ್ದು ಗಮನಾರ್ಹವಾಗಿದೆ.

ವರದಿ : ರಾಹುಲ್ ಮಾದರ 

Read All News