ದಕ್ಷಿಣದ ಕಮಲ ಟಿಕೆಟ್ ಗೆ ಬಾರಿ ಪೈಪೋಟಿ

  • 6 Aug 2022 , 7:14 PM
  • Belagavi
  • 96

ಬೆಳಗಾವಿ: ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಕಲ ತಯಾರಿ ನಡೆಸಿರುವ ವಿವಿಧ ಆಕಾಂಕ್ಷೆಗಳು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಮೇಲೆ ಕಣ್ಣೀದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಂಇಎಸ್ ಅಭ್ಯರ್ಥಿಯಾಗಿದ್ದ ಸಂಭಾಜಿ ಪಾಟೀಲರನ್ನು ಸೋಲಿಸಿ ಗೆಲವು ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಅಭಯ ಪಾಟೀಲರಿಗೆ ಈ ಬಾರಿ ಬಿಜೆಪಿಯಲ್ಲಿಯೇ ಹೊಸ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ.

ಬೆಳಗಾವಿ ಮರಾಠಿಗರು ಒಂದಾಗಬೇಕು. ನಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಗೆ ಮರಾಠಿ ಸಮುದಾಯದ ವ್ಯಕ್ತಿಯನ್ನು ಶಾಕರನ್ನಾಗಿ ಮಾಡಬೇಕೆಂದು ಈ ಹಿಂದೆ ಮರಾಠರ ಗುರುವಂದನಾ ಕಾರ್ಯಕ್ರಮದಲ್ಲಿ ಮರಾಠಿಗರು ಒಗ್ಗಟ್ಟಿನ ಮಂತ್ರ ಪಠಿಸಿದ್ದರು.

ಅಲ್ಲದೆ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಒಂದ ಲಕ್ಷಕ್ಕೂ ಅಧಿಕ ಮತ ಪಡೆದಿದ್ದ ಎಂಇಎಸ್ ಅಭ್ಯರ್ಥಿ ಸೇಳಕೆ ಎಂಇಎಸ್ ರಾಜಕೀಯಕ್ಕೆ ಮರುಜೀವ ನೀಡಿದ್ದರು. ಮಿಸ್ಟರ್ ಡೆವಲಪ್ಮೆಂಟ್ ಎಂದು ಖ್ಯಾತಿಯನ್ನು ಪಡೆದಿರುವ ಶಾಸಕ ಅಭಯ ಪಾಟೀಲ ಬೆಳಗಾವಿ ‌ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಭಾವುಟ ಹಾರಿಸುವುದರ ಜೊತೆಗೆ ಎಂಇಎಸ್ ನಿರ್ಣಾಮ ಮಾಡಿದ್ದು ಇತಿಹಾಸವಾಗಿದೆ.

ಆದರೆ ಶಾಸಕ ಅಭಯ ಪಾಟೀಲರಿಗೆ ಈಗ ಸ್ವಪಕ್ಷದವರು ತೆರೆಮರೆಯಲ್ಲಿ ಅವರಿಗೆ ಟಿಕೆಟ್ ನೀಡದಂತೆ ಕೆಲಸ ಆರಂಭಿಸಿದ್ದಾರೆ. ಆ ಅಡೆತಡೆಗಳನ್ನು ನಿವಾರಿಸಿ ಮತ್ತೇ ಅಭಯ ಪಾಟೀಲ ಅವರಿಗೆಯೇ ಹೈಕಮಾಂಡ್ ಟಿಕೇಟ್ ನೀಡುತ್ತಾ ಅಥವಾ ಹೊಸಬರಿಗೆ ಮಣೆ ಹಾಕುತ್ತದೆಯಾ ಎನ್ನುವುದು ಗೌಪ್ಯವಾಗಿದೆ.

Read All News