ಬೈಲಹೊಂಗಲ- ರಾಜ್ಯಾದ್ಯಂತ ಇಂದು ನಡೆದ ಪಲ್ಸ್ ಪೋಲಿಯೊ ಕಾರ್ಯಕ್ರಮದಡಿಯಲ್ಲಿ ಐದು ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೊ ಹನಿ ಹಾಕಲಾಯಿತು. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಪೋಲಿಯೊ ಮುಕ್ತ ಸಮಾಜದ ನಿರ್ಮಾಣದ ಸಲುವಾಗಿ ರಾಜ್ಯದ ತುಂಬೆಲ್ಲ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು ಬೈಲಹೊಂಗಲ ಪಟ್ಟಣದ ವಿವಿದೆಡೆ ಪೋಲಿಯೊ ಬೂತಗಳನ್ನು ಸ್ಥಾಪಿಸಿ ಮಕ್ಕಳಿಗೆ ಪೋಲಿಯೊ ಹನಿ ನೀಡುವ ಕಾರ್ಯಕ್ರಮಕ್ಕೆ ಶಾಸಕ ಮಹಾಂತೇಶ ಕೌಜಲಗಿ ಚಾಲನೆ ನೀಡಿದರು.
ಪಟ್ಟಣದ ಬೂತ್ ಒಂದರಲ್ಲಿ ಆರ್ಯನ ಆಯಟ್ಟಿ ಎಂಬ ಬಾಲಕ ಉತ್ಸಾಹದಿಂದ ಪೋಲಿಯೊ ಹನಿಯನ್ನು ತೆಗೆದುಕೊಂಡಿದ್ದು, ಆತನ ತಾಯಿ ಅಕ್ಷತಾ ಆಯಟ್ಟಿ ಮಾತನಾಡಿ, ಯಾವುದೇ ಆತಂಕಕ್ಕೆ ಒಳಗಾಗದೆ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಪೋಲಿಯೊ ಹನಿ ಹಾಕಿಸುವ ಮೂಲಕ ಪೋಲಿಯೊ ಮುಕ್ತ ಸಮಾಜ ನಿರ್ಮಿಸಲು ಸಹಕರಿಸಬೇಕೆಂದರು.