ಇಂದಿನ ರಾಶಿ ಭವಿಷ್ಯ ಏಪ್ರಿಲ್-30-2024 ಶ್ರೀ ವಿವೇಕಾನಂದ ಆಚಾರ್ಯ ಅವರಿಂದ.

  • Prasad Kambar
  • 30 Apr 2024 , 6:35 AM
  • Belagavi
  • 534

ಮೇಷ ರಾಶಿ

ಕೆಲಸ ಕಾರ್ಯಗಳು ನಿರಂತರವಾಗಿ ನಡೆಯಲಿವೆ. ಬಿಡುವಿಲ್ಲದ ಕಾರಣ ಮಾನಸಿಕ ಒತ್ತಡ ಹೆಚ್ಚುತ್ತದೆ. ಉದ್ಯೋಗದಲ್ಲಿ ನಿಮ್ಮ ಮನದಾಳದಂತೆ ಬದಲಾವಣೆಗಳು ಉಂಟಾಗಲಿವೆ. ಕುಟುಂಬ ಸದಸ್ಯರಲ್ಲಿ ಹಣಕಾಸಿನ ಸಂಬಂಧಿತ ಭಿನ್ನಾಭಿಪ್ರಾಯ ಇರುತ್ತದೆ. ಕುಟುಂಬದ ಹಿರಿಯರ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. 

ಅದೃಷ್ಟದ ದಿಕ್ಕು:ಪೂರ್ವ

ಅದೃಷ್ಟದ ಸಂಖ್ಯೆ:5

ಅದೃಷ್ಟದ ಬಣ್ಣ:ಬೂದು

ವೃಷಭ ರಾಶಿ

ಪರಿಸ್ಥಿತಿಗೆ ಅನುಗುಣವಾಗಿ ವರ್ತಿಸುವ ಕಾರಣವಿವಾದಗಳು ಇರುವುದಿಲ್ಲ. ಆತ್ಮವಿಶ್ವಾಸದಿಂದ ಹೊಸ ವ್ಯಾಪಾರವನ್ನು ಆರಂಭಿಸುವಿರಿ. ಆದಾಯದ ವಿಚಾರದಲ್ಲಿ ಅದೃಷ್ಟವಿದೆ. ಆದರೆ ಅನಾವಶ್ಯಕ ಖರ್ಚುವೆಚ್ಚಗಳನ್ನು ನಿಯಂತ್ರಿಸಿ. ಹಠದ ಗುಣಕ್ಕೆ ಬೇಸರಗೊಂಡು ಆತ್ಮೀಯರೊಬ್ಬರು ದೂರವಾಗಲಿದ್ದಾರೆ. 

ಅದೃಷ್ಟದ ದಿಕ್ಕು:ಉತ್ತರ

ಅದೃಷ್ಟದ ಸಂಖ್ಯೆ:4

ಅದೃಷ್ಟದ ಬಣ್ಣ:ಹಸಿರು

ಮಿಥುನ ರಾಶಿ

ಉದ್ಯೋಗದಲ್ಲಿ ಆಂತರಿಕ ಬದಲಾವಣೆಗಳು ಕಂಡುಬರಲಿವೆ. ವಿದ್ಯಾರ್ಥಿಗಳು ಕೋಪವನ್ನು ನಿಯಂತ್ರಿಸಿಕೊಂಡಲ್ಲಿ ಯಶಸ್ಸುಗಳಿಸುತ್ತಾರೆ. ಮಕ್ಕಳ ಆರೋಗ್ಯದ ವಿಚಾರದಲ್ಲಿ ಆತಂಕಕ್ಕೆ ಒಳಗಾಗುವಿರಿ. ವಿದೇಶದಲ್ಲಿ ಅಧ್ಯಯನ ಮುಂದುವರೆಸುವ ಆಶಯ ಇರಲಿದೆ.

ಅದೃಷ್ಟದ ದಿಕ್ಕು:ವಾಯುವ್ಯ

ಅದೃಷ್ಟದ ಸಂಖ್ಯೆ:9

ಅದೃಷ್ಟದ ಬಣ್ಣ:ನೀಲಿ

ಕರ್ಕ ರಾಶಿ

ಉದ್ಯೋಗದಲ್ಲಿ ನಿಮ್ಮ ಆದೇಶವನ್ನು ಒಪ್ಪಿ ನಡೆದು ಕೊಳ್ಳುತ್ತಾರೆ. ವಿದ್ಯಾರ್ಥಿಗಳು ಅಭ್ಯಾಸಕ್ಕೆ ಹೆಚ್ಚಿನ ಸಮಯವನ್ನು ನೀಡುತ್ತಾರೆ. ನಿಷ್ಕಲ್ಮಶ ಮನಸ್ಸಿನ ಕಾರಣ ಎಲ್ಲರ ಪ್ರೀತಿ ಮತ್ತು ಹೊಗಳಿಕೆಗೆ ಪಾತ್ರರಾಗುವಿರಿ. ದೂರದ ಸಂಬಂಧಿಯೊಬ್ಬರ ಸಹಾಯದಿಂದ ವಿವಾಹ ನಿಶ್ಚಯವಾಗಬಹುದು.   

ಅದೃಷ್ಟದ ದಿಕ್ಕು:ಪಶ್ಚಿಮ

ಅದೃಷ್ಟದ ಸಂಖ್ಯೆ:8

ಅದೃಷ್ಟದ ಬಣ್ಣ:ನೀಲಿ

ಸಿಂಹ ರಾಶಿ

ಸ್ನೇಹಿತರ ಸಹಾಯದಿಂದ ವಿದೇಶಿ ಸಂಸ್ಥೆಯಲ್ಲಿ. ಉದ್ಯೋಗ ದೊರೆಯುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಆತಂಕದ ಛಾಯೆ ಇದ್ದರೂ ವರಮಾನದಲ್ಲಿ ತೊಂದರೆ ಕಂಡುಬಾರದು. ಉನ್ನತ ವಿದ್ಯಾಭ್ಯಾಸಕ್ಕೆ ಹೊರದೇಶಕ್ಕೆ ತೆರಳುವಿರಿ. ಹಣದ ಕೊರತೆ ಕ್ರಮೇಣವಾಗಿ ಕಡಿಮೆ ಯಾಗುತ್ತದೆ. 

ಅದೃಷ್ಟದ ದಿಕ್ಕು:ಪೂರ್ವ

ಅದೃಷ್ಟದ ಸಂಖ್ಯೆ:6

ಅದೃಷ್ಟದ ಬಣ್ಣ:ಹಸಿರು

ಕನ್ಯಾ ರಾಶಿ

ಕುಟುಂಬದಲ್ಲಿ ಹಣಕಾಸಿನ ವಿಚಾರದಲ್ಲಿ ವಾದ ವಿವಾದ ಕಂಡುಬರುತ್ತದೆ. ವಿದ್ಯಾರ್ಥಿಗಳು ಸುಲಭವಾಗಿ ಸಹಪಾಠಿಗಳ ಪ್ರಭಾವಕ್ಕೆ ಮಣಿಯುತ್ತಾರೆ. ಕಂತಿನ ವ್ಯಾಪಾರದಲ್ಲಿ ಉತ್ತಮ ಲಾಭಗಳಿಸುವಿರಿ. ಆತ್ಮೀಯರೊ ಬ್ಬರಿಂದ ಹಣದ ಸಹಾಯ ದೊರೆಯಲಿದೆ. 

ಅದೃಷ್ಟದ ದಿಕ್ಕು:ಆಗ್ನೇಯ

ಅದೃಷ್ಟದ ಸಂಖ್ಯೆ:9

ಅದೃಷ್ಟದ ಬಣ್ಣ:ಕಿತ್ತಳೆ

ತುಲಾ ರಾಶಿ

ಉದ್ಯೋಗದಲ್ಲಿ ಎಲ್ಲರ ಸಹಮತದಿಂದ ಬದಲಾವಣೆ ಮಾಡುವಿರಿ. ವಿದ್ಯಾರ್ಥಿಗಳು ಕ್ರಿಯಾಶೀಲತೆಯಿಂದ ಜವಾಬ್ದಾರಿಯಿಂದ ಮುಂದುವರೆಯುವಿರಿ. ಸಮಾಜದಲ್ಲಿ ನಾಯಕತ್ವದ ಸ್ಥಾನಮಾನ ದೊರೆಯುತ್ತದೆ. ಸೋಲುಗೆಲುವನ್ನು ಸಮಾನವಾಗಿ ಸ್ವೀಕರಿಸುವಿರಿ. 

ಅದೃಷ್ಟದ ದಿಕ್ಕು:ಈಶಾನ್ಯ

ಅದೃಷ್ಟದ ಸಂಖ್ಯೆ:4

ಅದೃಷ್ಟದ ಬಣ್ಣ:ಬೂದು

ವೃಶ್ಚಿಕ ರಾಶಿ

ಕೌಟುಂಬಿಕ ಜೀವನದಲ್ಲಿ ಬೇಸರವಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಯಾವುದೇ ಬದಲಾವಣೆಗಳು ಕಾಣುವುದಿಲ್ಲ. ಹಗಲುಗನಸು ಕಾಣದೆ ಕೆಲಸ ಕಾರ್ಯಗಳಲ್ಲಿ ಮುಂದುವರೆಯುವಿರಿ. ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಹಣದ ಅವಶ್ಯಕತೆ ಇರುತ್ತದೆ. ಮಾನಸಿಕ ಒತ್ತಡದಿಂದ ಅನಾರೋಗ್ಯ ಉಂಟಾಗುತ್ತದೆ.

ಅದೃಷ್ಟದ ದಿಕ್ಕು:ದಕ್ಷಿಣ

ಅದೃಷ್ಟದ ಸಂಖ್ಯೆ:5

ಅದೃಷ್ಟದ ಬಣ್ಣ:ಕೆಂಪು

ಧನು ರಾಶಿ

ಉದ್ಯೋಗದಲ್ಲಿ ಸಮಸ್ಯೆಗಳು ಇರುವುದಿಲ್ಲ. ಹಾಗೆಯೇ ಪ್ರಗತಿಯೂ ಇರುವುದಿಲ್ಲ. ಹಣಕಾಸಿನ ವ್ಯವಹಾರದಲ್ಲಿ ಸ್ವಂತ ನಿರ್ಧಾರಗಳಿಗೆ ಬದ್ದರಾಗಿರಿ. ಅನಿರೀಕ್ಷಿತ ಧನ ಲಾಭವಿದೆ. ಅಳುಕಿನ ಮನಸ್ಸಿನಿಂದ ತೆಗೆದುಕೊಳ್ಳುವ ನಿರ್ಧಾರ ತೊಂದರೆಗಳಿಗೆ ದಾರಿಯಾಗುತ್ತದೆ. 

ಅದೃಷ್ಟದ ದಿಕ್ಕು:ವಾಯುವ್ಯ

ಅದೃಷ್ಟದ ಸಂಖ್ಯೆ:3

ಅದೃಷ್ಟದ ಬಣ್ಣ:ಗುಲಾಬಿ ಬಣ್ಣ

ಮಕರ ರಾಶಿ

ಕುಟುಂಬದಲ್ಲಿ ಬೇಸರದ ವಾತಾವರಣ ಇರುತ್ತದೆ. ಕೇಳದೇ ಹೋದರೂ ಸ್ನೇಹಿತರ ಸಹಾಯ ದೊರೆಯಲಿದೆ. ಎಲ್ಲರ ಜೊತೆಯಲ್ಲಿ ಶಾಂತಿ ಸಹನೆಯಿಂದ ವರ್ತಿಸುವಿರಿ. ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ.

ಅದೃಷ್ಟದ ದಿಕ್ಕು:ಈಶಾನ್ಯ

ಅದೃಷ್ಟದ ಸಂಖ್ಯೆ:6

ಅದೃಷ್ಟದ ಬಣ್ಣ:ನೀಲಿ

ಕುಂಭ ರಾಶಿ

ಬೇಸರದ ಕಾರಣ ಕುಟುಂಬದಲ್ಲಿ ಅಸಹಕಾರ ಭಾವನೆ ನೆಲೆಸಿರುತ್ತದೆ. ಉದ್ಯೋಗದಲ್ಲಿ ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸುವಿರಿ. ಆತ್ಮೀಯರ ಒತ್ತಾಯಕ್ಕೆ ಮಣಿದು ಉದ್ಯೋಗ ಬದಲಿಸುವಿರಿ. ವಿದ್ಯಾರ್ಥಿಗಳು ಏಕಾಂಗಿಯಾಗಿ ಕಲಿಕೆಯಲ್ಲಿ ತೊಡಗುತ್ತಾರೆ. ಪ್ರಯೋಜನವಿಲ್ಲದ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ.

ಅದೃಷ್ಟದ ದಿಕ್ಕು:ಉತ್ತರ

ಅದೃಷ್ಟದ ಸಂಖ್ಯೆ:8

ಅದೃಷ್ಟದ ಬಣ್ಣ:ನೀಲಿ

ಮೀನ ರಾಶಿ

ಕುಟುಂಬದಲ್ಲಿ ಸಹಕಾರದ ವಾತಾವರಣವಿರುತ್ತದೆ. ಧೃಡವಾದ ಸಂಕಲ್ಪದಿಂದ ಮಾತ್ರ ಕೆಲಸ ಕಾರ್ಯಗಳಲ್ಲಿ ಜಯಗಳಿಸುವಿರಿ. ವಿದ್ಯಾರ್ಥಿಗಳು ದುಡುಕದೆ ಬುದ್ಧಿವಂತಿಕೆಯಿಂದ ಉನ್ನತ ಅಧ್ಯಯನದಲ್ಲಿ ಮುಂದುವರೆಯುತ್ತಾರೆ. ಒಂಟಿಯಾಗಿ ಎದುರಾಗುವ ಸಮಸ್ಯೆಗಳ ವಿರುದ್ದ ಜಯಗಳಿಸುವಿರಿ.

ಅದೃಷ್ಟದ ದಿಕ್ಕು:ನೈಋತ್ಯ

ಅದೃಷ್ಟದ ಸಂಖ್ಯೆ:7

ಅದೃಷ್ಟದ ಬಣ್ಣ:ಹಸಿರು 

Read All News