ಮೇಷ ರಾಶಿ
ಪ್ರಯಾಣದ ಸಮಯದಲ್ಲಿ ಹೊಸ ಪರಿಚಯಗಳು ಉಂಟಾಗುತ್ತವೆ. ಹೊಸ ವ್ಯವಹಾರಗಳಲ್ಲಿ ಸ್ಥಿರವಾದ ಲಾಭವನ್ನು ಪಡೆಯುತ್ತೀರಿ. ಇತರರ ವ್ಯವಹಾರಗಳಿಂದ ದೂರವಿರುವುದು ಉತ್ತಮ. ಉದ್ಯೋಗದಲ್ಲಿ ಅಧಿಕಾರಿಗಳ ಸಹಾಯ ದೊರೆಯುತ್ತದೆ. ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರುತ್ದೆ. ನಿರುದ್ಯೋಗ ಪ್ರಯತ್ನಗಳು ಅನುಕೂಲಕರವಾಗಿರುತ್ತದೆ.
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಸಂಖ್ಯೆ:1
ಅದೃಷ್ಟದ ಬಣ್ಣ:ಕಂದು
ವೃಷಭ ರಾಶಿ
ಆರ್ಥಿಕ ವಾತವರಣ ತುಂಬಾ ಕಳಪೆಯಾಗಿರುತ್ತದೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಮನೆಯ ಹೊರಗೆ ಕೆಲವುಗೊಂದಲ ಮಯ ಪರಿಸ್ಥಿತಿಗಳಿರುತ್ತವೆ. ಬಾಲ್ಯದ ಗೆಳೆಯರೊಂದಿಗೆ ವಿವಾದಗಳು ಉಂಟಾಗುತ್ತವೆ. ವೃತ್ತಿಪರ ಉದ್ಯೋಗದಲ್ಲಿ ಇತರರಿಂದ ಟೀಕೆಗಳನ್ನು ಎದುರಿಸ ಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಮಿಶ್ರ ಫಲಿತಾಂಶಗಳಿರುತ್ತವೆ.
ಅದೃಷ್ಟದ ದಿಕ್ಕು:ಆಗ್ನೇಯ
ಅದೃಷ್ಟದ ಸಂಖ್ಯೆ:7
ಅದೃಷ್ಟದ ಬಣ್ಣ:ನೀಲಿ
ಮಿಥುನ ರಾಶಿ
ಬೆಲೆಬಾಳುವವಸ್ತ್ರಆಭರಣಗಳನ್ನು ಖರೀದಿಸುತ್ತೀರಿ. ವೃತ್ತಿಪರ ವ್ಯಾಪಾರಗಳಲ್ಲಿ ಶ್ರಮಕ್ಕೆ ಪ್ರತಿಫಲ ದೊರೆಯುತ್ತದೆ. ದೂರದ ಸಂಬಂಧಿಕರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಮಕ್ಕಳ ಶಿಕ್ಷಣ ವಿಷಯಗಳಲ್ಲಿ ಹೊಸ ಅವಕಾಶಗಳು ದೊರೆಯುತ್ತವೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ.
ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:4
ಅದೃಷ್ಟದ ಬಣ್ಣ:ಕಂದು
ಕರ್ಕ ರಾಶಿ
ಸಹೋದರರೊಂದಿಗೆ ಆಸ್ತಿ ವಿವಾದ ಉಂಟಾಗುತ್ತವೆ. ಬಂಧು ಮಿತ್ರರೊಂದಿಗಿನ ವಿವಾದಗಳು ಬಗೆಹರಿಯುತ್ತವೆ. ಪ್ರಮುಖ ವಿಷಯಗಳಲ್ಲಿ ಕಠಿಣ ಪರಿಶ್ರಮಕ್ಕೆ ತಕ್ಕ ಯಾವುದೇ ಫಲಿತಾಂಶ ದೊರೆಯುವುದಿಲ್ಲ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ವಾಹನ ಪ್ರಯಾಣದಲ್ಲಿ ನಿರ್ಲಕ್ಷ್ಯ ಒಳ್ಳೆಯದಲ್ಲ. ವೃತ್ತಿಪರ ಉದ್ಯೋಗಗಳಲ್ಲಿ ಹೆಚ್ಚುವರಿ ಕೆಲಸದ ಹೊರೆ ಇರುತ್ತದೆ.
ಅದೃಷ್ಟದ ದಿಕ್ಕು:ಈಶಾನ್ಯ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ:ಬೂದು
ಸಿಂಹ ರಾಶಿ
ಉದ್ಯೋಗಿಗಳಿಗೆ ಹೆಚ್ಚಿನ ಕೆಲಸದ ಒತ್ತಡವಿದ್ದರೂ ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ಹಣಕಾಸಿನ ಸ್ಥಿತಿಯು ತೃಪ್ತಿಕರವಾಗಿರುತ್ತದೆ. ಸಮಾಜದಲ್ಲಿ ಪ್ರಮುಖ ವ್ಯಕ್ತಿಗಳೊಂದಿಗೆ ಸಂಪರ್ಕವು ಹೆಚ್ಚಾಗುತ್ತದೆ ಮತ್ತು ಕುಟುಂಬ ಸದಸ್ಯರೊಂದಿಗೆ ಮನೆಯಲ್ಲಿ ಸಂಭ್ರಮದ ಸಮಯವನ್ನು ಕಳೆಯುತ್ತೀರಿ. ವೃತ್ತಿಪರ ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ನೀವು ದೀರ್ಘಾವಧಿಯ ಸಾಲದ ಸಮಸ್ಯೆಗಳಿಂದ ಸ್ವಲ್ಪ ಮಟ್ಟಿಗೆ ಹೊರಬರುತ್ತೀರಿ.
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ:ಕಿತ್ತಳೆ
ಕನ್ಯಾ ರಾಶಿ
ಸಾಲ ತೀರಿಸುವ ಪ್ರಯತ್ನಗಳು ಫಲನೀಡುತ್ತವೆ. ಮನೆನಿರ್ಮಾಣ ಪ್ರಯತ್ನಗಳು ವೇಗಗೊಳ್ಳುತ್ತವೆ. ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ. ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಬೆಂಬಲ ದೊರೆಯುತ್ತದೆ. ಅಡೆತಡೆಗಳ ನಡುವೆಯೂ ಕೈಗೊಂಡ ಕಾರ್ಯಗಳು ನಿಧಾನವಾಗಿ ಪೂರ್ಣಗೊಳ್ಳುತ್ತವೆ. ಆರ್ಥಿಕ ಸ್ಥಿತಿ ತುಂಬಾ ಸೀಮಿತವಾಗಿದ್ದರೂ ಅಗತ್ಯಕ್ಕೆ ಹಣ ದೊರೆಯುತ್ತದೆ.
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:3
ಅದೃಷ್ಟದ ಬಣ್ಣ:ಹಳದಿ
ತುಲಾ ರಾಶಿ
ಪ್ರಮುಖ ವಿಷಯಗಳಲ್ಲಿ ಜೀವನ ಸಂಗಾತಿ ಸಹಾಯ ಸಹಕಾರಗಳು ದೊರೆಯುತ್ತವೆ. ಕೈಗೆತ್ತಿಕೊಂಡ ಕೆಲಸದಲ್ಲಿ ಅಪ್ರಯತ್ನ ಕಾರ್ಯ ಸಿದ್ಧತೆ ದೊರೆಯುತ್ತದೆ. ಆಪ್ತ ಸ್ನೇಹಿತರಿಂದ ಶುಭ ಸುದ್ದಿ ದೊರೆಯುತ್ತದೆ. ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಸ್ನೇಹಿತರೊಂದಿಗೆ ಭೋಜನ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ. ಮೌಲ್ಯದ ವಸ್ತ್ರಆಭರಣಗಳನ್ನು ಖರೀದಿಸಲಾಗುತ್ತದೆ. ನಿರುದ್ಯೋಗಿಗಳಿಗೆ ಪ್ರಯತ್ನಗಳು ಫಲ ನೀಡುತ್ತವೆ.
ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:6
ಅದೃಷ್ಟದ ಬಣ್ಣ:ಬಿಳಿ
ವೃಶ್ಚಿಕ ರಾಶಿ
ಹಣಕಾಸಿನ ಸ್ಥಿತಿ ನಿರೀಕ್ಷಿತ ಮಟ್ಟದಲ್ಲಿರುವುದಿಲ್ಲ. ನಿರುದ್ಯೋಗಿಗಳು ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಸ್ಥಾನ ಚಲನೆ ಸೂಚನೆಗಳಿವೆ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುವಿರಿ.
ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:8
ಅದೃಷ್ಟದ ಬಣ್ಣ:ನೀಲಿ
ಧನು ರಾಶಿ
ಭೂಮಿಗೆ ಸಂಬಂಧಿಸಿದ ವಿವಾದಗಳಲ್ಲಿ ಹೊಸ ಒಪ್ಪಂದಗಳು ಆಗಲಿವೆ. ಕುಟುಂಬ ಸದಸ್ಯರೊಂದಿಗೆ ಸಂತೋಷದಿಂದ ಕಳೆಯುವಿರಿ. ವೃತ್ತಿಪರ ವ್ಯವಹಾರಗಳು ಲಾಭದಾಯಕವಾಗಿರುತ್ತವೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ಅಡೆತಡೆಗಳಿದ್ದು ನಿಧಾನವಾಗಿ ಪೂರ್ಣಗೊಳ್ಳುತ್ತವೆ. ಹಠಾತ್ ಆರ್ಥಿಕ ಲಾಭ. ಉದ್ಯೋಗದಲ್ಲಿ ನಿಮ್ಮ ಪ್ರತಿಭೆ ಬೆಳಗಲಿದೆ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:7
ಅದೃಷ್ಟದ ಬಣ್ಣ:ಹಸಿರು
ಮಕರ ರಾಶಿ
ಸಮಾಜ ಸೇವಾ ಕಾರ್ಯಗಳಲ್ಲಿ ಭಾಗವಹಿಸಿ ಹಿರಿಯರಿಂದ ಪ್ರಶಂಸೆ ಪಡೆಯುತ್ತೀರಿ. ಹಳೆಯ ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಬರುತ್ತವೆ. ಪ್ರಮುಖ ವ್ಯವಹಾರಗಳು ನಿರಾಯಾಸವಾಗಿ ಪೂರ್ಣಗೊಳ್ಳುತ್ತವೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರೆಯುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಹೊಸ ಅವಕಾಶಗಳು ದೊರೆಯುತ್ತವೆ. ಹೊಸ ವಾಹನ ಖರೀದಿಸುತ್ತೀರಿ.
ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:4
ಅದೃಷ್ಟದ ಬಣ್ಣ:ನೀಲಿ
ಕುಂಭ ರಾಶಿ
ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ವ್ಯರ್ಥ ಖರ್ಚು ನಿಯಂತ್ರಿಸಲು ಕಷ್ಟವಾಗುತ್ತದೆ. ಕೈಗೊಂಡ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ವೃತ್ತಿಪರ ವ್ಯವಹಾರದಲ್ಲಿ ಇತರರೊಂದಿಗೆ ಸಣ್ಣ ವಿವಾದಗಳಿರುತ್ತವೆ. ಉದ್ಯೋಗದಲ್ಲಿ ಸಣ್ಣಪುಟ್ಟ ತೊಂದರೆಗಳು ಎದುರಾಗುತ್ತವೆ. ಮಕ್ಕಳು ಶೈಕ್ಷಣಿಕ ವಿಷಯಗಳತ್ತ ಗಮನ ಹರಿಸುತ್ತಾರೆ.
ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:8
ಅದೃಷ್ಟದ ಬಣ್ಣ:ನೀಲಿ
ಮೀನ ರಾಶಿ
ಮನೆಯ ಹೊರಗೆ ಅನುಕೂಲಕರ ವಾತಾವರಣವಿರುತ್ತದೆ. ಆಪ್ತ ಸ್ನೇಹಿತರಿಂದ ಅಪರೂಪದ ಆಹ್ವಾನಗಳು ಬರುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ಕೆಲಸದ ಹೊರೆಯಿಂದ ಮುಕ್ತಿ ದೊರೆಯುತ್ತದೆ. ಪ್ರಯಾಣದಲ್ಲಿ ಹೊಸ ವ್ಯಕ್ತಿಗಳನ್ನು ಭೇಟಿ ಮಾಡುತ್ತೀರಿ. ಕೈಗೆತ್ತಿಕೊಂಡ ಕೆಲಸಗಳು ಸುಗಮವಾಗಿ ಸಾಗುತ್ತವೆ. ವೃತ್ತಿಪರವ್ಯವಹಾರಗಳು ಲಾಭದಾಯಕವಾಗಿರುತ್ತವೆ.
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ:ಕೆಂಪು