ಇಂದಿನ ರಾಶಿ ಭವಿಷ್ಯ ಜೂನ 19-2023 ಶ್ರೀ ವಿವೇಕಾನಂದ ಆಚಾರ್ಯ ಅವರಿಂದ

  • Prasad Kambar
  • 15 Jan 2024 , 4:43 AM
  • Belagavi
  • 215

ಮೇಷ ರಾಶಿ
ಸ್ಥಿರಾಸ್ತಿ ಖರೀದಿಸುತ್ತೀರಿ. ವ್ಯಾಪಾರದಲ್ಲಿ ಅವಕಾಶಗಳು ದೊರೆಯತ್ತವೆ. ಬಂಧುಗಳೊಂದಿಗೆ ಸಮಯ ಕಳೆಯುತ್ತೀರಿ. ಉದ್ಯೋಗಿಗಳಿಗೆ ಉತ್ತಮ ಮನ್ನಣೆ ದೊರೆಯುತ್ತದೆ. ನ್ಯಾಯಾಲಯದ ವ್ಯವಹಾರಗಳು ಅನುಕೂಲಕರವಾಗಿ ಬದಲಾಗುತ್ತವೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಶ್ರದ್ಧೆ ಹೆಚ್ಚುತ್ತದೆ. ಆಕಸ್ಮಿಕ ಧನ ಲಾಭವಾಗಲಿದೆ.

ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:6
ಅದೃಷ್ಟದ ಬಣ್ಣ:ಹಳದಿ 

ವೃಷಭ ರಾಶಿ
ದಿಢೀರ್ ಪ್ರಯಾಣದ ಸೂಚನೆಗಳಿವೆ. ಖರ್ಚು ವೆಚ್ಚಗಳನ್ನು ನಿಯಂತ್ರಣದಲ್ಲಿರಿಸುವುದು ಒಳ್ಳೆಯದು. ಪ್ರಮುಖ ವಿಷಯಗಳಲ್ಲಿ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಮಾರಾಟದಲ್ಲಿ ಅಲ್ಪ ನಷ್ಟ ಉಂಟಾಗುತ್ತದೆ. ವೃತ್ತಿ ಮತ್ತು ಉದ್ಯೋಗಗಳು ಸೂಕ್ತವಾಗಿರುವುದಿಲ್ಲ. ವ್ಯವಹಾರಗಳು ಸುಗಮವಾಗಿ ಸಾಗುತ್ತವೆ.

ಅದೃಷ್ಟದ ಸಂಖ್ಯೆ :8
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ: ನೀಲಿ

ಮಿಥುನ ರಾಶಿ
ಸಮಾಜದಲ್ಲಿ ವಿಶೇಷ ಗೌರವ ಹೆಚ್ಚಾಗುತ್ತದೆ. ಭೂಮಿಗೆ ಸಂಬಂಧಿಸಿದ ವ್ಯವಹಾರಗಳು ಕೂಡಿ ಬರುತ್ತವೆ. ಎಲ್ಲಾ ಕ್ಷೇತ್ರಗಳಿಗೆ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ದೈವಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ವ್ಯವಹಾರಗಳಲ್ಲಿನ ಹೂಡಿಕೆಗಳು ಲಾಭದಾಯಕವಾಗಿರುತ್ತವೆ. ಉದ್ಯೋಗಗಳಲ್ಲಿ ಉನ್ನತ ಸ್ಥಾನಗಳನ್ನು ಪಡೆಯುತ್ತೀರಿ.

ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:4
ಅದೃಷ್ಟದ ಬಣ್ಣ:ಬೂದು

ಕಟಕ ರಾಶಿ
ಬಂಧು ಮಿತ್ರರೊಂದಿಗೆ ಅನಿರೀಕ್ಷಿತ ವಾದ ವಿವಾದಗಳು ಉಂಟಾಗುತ್ತವೆ. ಹಣಕಾಸಿನ ಪರಿಸ್ಥಿತಿ ನಿರಾಶಾದಾಯಕವಾಗಿರುತ್ತದೆ. ದೂರ ಪ್ರಯಾಣಗಳು ಕೂಡಿಬರುವುದಿಲ್ಲ. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಸಮಸ್ಯೆಗಳಿರುತ್ತವೆ. ವೃತ್ತಿ, ಉದ್ಯೋಗಗಳಲ್ಲಿ ಅಧಿಕಾರಿಗಳಿಂದ ಒತ್ತಡಗಳು ಹೆಚ್ಚಾಗುತ್ತವೆ.

ಅದೃಷ್ಟದ ದಿಕ್ಕು:ಆಗ್ನೇಯ
ಅದೃಷ್ಟದ ಸಂಖ್ಯೆ:6
ಅದೃಷ್ಟದ ಬಣ್ಣ:ಬಿಳಿ

ಸಿಂಹ ರಾಶಿ
ಪ್ರಮುಖ ಕೆಲಸಗಳು ನಿಧಾನವಾಗಿ ನೆರವೇರಲಿವೆ. ಆಪ್ತ ಸ್ನೇಹಿತರ ಸಲಹೆಗಳು ಕೂಡಿ ಬರುತ್ತವೆ. ವಸ್ತ್ರ ಮತ್ತು ಆಭರಣಗಳನ್ನು ಖರೀದಿ ಮಾಡುತ್ತೀರಿ. ಹಳೆಯ ಸ್ನೇಹಿತರೊಂದಿಗೆ ಭೋಜನ ಮನೋರಂಜನ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಉದ್ಯೋಗ, ವ್ಯಾಪಾರಗಳಲ್ಲಿ ಧೀರ್ಘ ಕಾಲದ ಸಮಸ್ಯೆಗಳಿಂದ ಹೊರಬರುತ್ತೀರಿ.

ಅದೃಷ್ಟದ ದಿಕ್ಕು:ಈಶಾನ್ಯ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ: ಗುಲಾಬಿ

ಕನ್ಯಾ ರಾಶಿ
ನಿರುದ್ಯೋಗಿಗಳಿಗೆ ಶುಭ ವಾರ್ತೆ ದೊರೆಯುತ್ತವೆ. ಕೈಗೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳಿಸುತ್ತೀರಿ. ಪ್ರಸಿದ್ಧ ವ್ಯಕ್ತಿಗಳ ಪರಿಚಯದಿಂದ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವೃತ್ತಿ ಮತ್ತು ಉದ್ಯೋಗಗಳಲ್ಲಿನ ವಿವಾದಗಳು ಅಧಿಕಾರಿಗಳ ಸಹಾಯದಿಂದ ಇತ್ಯರ್ಥಗೊಳ್ಳುತ್ತವೆ.

ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:6
ಅದೃಷ್ಟದ ಬಣ್ಣ:ಹಸಿರು

ತುಲಾ ರಾಶಿ
ಪ್ರಮುಖ ಕೆಲಸಗಳನ್ನು ಮುಂದೂಡುವುದು ಒಳ್ಳೆಯದು. ಸಾಲದ ಪ್ರಯತ್ನಗಳು ಅನುಕೂಲಕರವಾಗಿರುವುದಿಲ್ಲ. ದೂರದ ಸಂಬಂಧಿಕರನ್ನು ಭೇಟಿ ಮಾಡುತ್ತೀರಿ. ವ್ಯಾಪಾರದಲ್ಲಿ ಹೂಡಿಕೆಗಳು ಲಾಭದಾಯಕ ವಾಗಿರುವುದಿಲ್ಲ. ಮತ್ತು ವೃತ್ತಿ ಮತ್ತು ಉದ್ಯೋಗಗಳಲ್ಲಿನ ಆಲೋಚನೆಗಳು ಸಮಸ್ಯೆಗಳನ್ನು ಉಂಟುಮಾಡುತ್ತವೆ. ಅನಾರೋಗ್ಯದ ಸೂಚನೆಗಳಿವೆ.

ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:4
ಅದೃಷ್ಟದ ಬಣ್ಣ:ಕೆಂಪು

ವೃಶ್ಚಿಕ ರಾಶಿ
ಪ್ರಯಾಣದಲ್ಲಿ ವಾಹನ ಅಪಾಯದ ಸೂಚನೆಗಳಿವೆ. ಪ್ರಮುಖ ನಿರ್ಧಾರಗಳಲ್ಲಿ ಆತುರ ಕೆಲಸ ಮಾಡುವುದಿಲ್ಲ. ಕೈಗೊಂಡ ಕೆಲಸದಲ್ಲಿ ವಿಘ್ನಗಳು ಎದುರಾಗುತ್ತವೆ. ವೃತ್ತಿ ವ್ಯಾಪಾರದಲ್ಲಿ ಕಿರಿಕಿರಿಯ ವಾತಾವರಣ ಉಂಟಾಗುತ್ತದೆ. ಉದ್ಯೋಗ ವಿಚಾರದಲ್ಲಿ ಅಧಿಕಾರಿಗಳಿಂದ ಒತ್ತಡ ಹೆಚ್ಚಾಗುತ್ತದೆ.

ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ:ಬಿಳಿ

ಧನಸ್ಸು ರಾಶಿ
ವ್ಯರ್ಥ ಖರ್ಚುಗಳನ್ನು ಮಾಡುತ್ತೀರಿ.ಸಂಗಾತಿಯೊಂದಿಗೆ ಭಿನ್ನಭಿಪ್ರಾಯಗಳು ಉಂಟಾಗುತ್ತವೆ.ಶಿಕ್ಷಣ ವರ್ಗದವರಿಗೆ ಕಠಿಣ ಪರಿಶ್ರಮಕ್ಕೆ ಮನ್ನಣೆ ದೊರೆಯುತ್ತದೆ.ವಾಹನ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ವೃತ್ತಿಪರ ಉದ್ಯೋಗಗಳಲ್ಲಿ ಹೆಚ್ಚು ಜಾಗರೂಕರಾಗಿರಿ. ವ್ಯಾಪಾರ-ವ್ಯವಹಾರಗಳು ಸುಗಮವಾಗಿ ನಡೆಯುತ್ತವೆ.

ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:8
ಅದೃಷ್ಟದ ಬಣ್ಣ:ನೀಲಿ 

ಮಕರ ರಾಶಿ
ವೃತ್ತಿಪರ ಉದ್ಯೋಗಗಳಲ್ಲಿ ಹೆಚ್ಚು ಉತ್ಸಾಹದಿಂದ ಕೆಲಸ ಮಾಡಿ ಅಧಿಕಾರಿಗಳಿಂದ ಮೆಚ್ಚುಗೆ ಪಡೆಯುತ್ತೀರಿ. ಸೇವಾ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತೀರಿ, ಸಮಾಜದಲ್ಲಿ ಕೀರ್ತಿ ಹೆಚ್ಚುತ್ತದೆ, ಸಾಲಗಳನ್ನು ತೀರುಸುತ್ತೀರಿ, ವ್ಯಾಪಾರಗಳನ್ನು ವಿಸ್ತರಣೆ ಮಾಡುತ್ತೀರಿ, ಧನ ಆದಾಯ ಉತ್ತಮವಾಗಿರುತ್ತದೆ.

ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:7
ಅದೃಷ್ಟದ ಬಣ್ಣ:ಕಂದು

ಕುಂಭ ರಾಶಿ
ಮಕ್ಕಳ ವಿಚಾರದಲ್ಲಿ ಸಣ್ಣ ಪುಟ್ಟ ವಿವಾದಗಳು ಉಂಟಾಗುತ್ತವೆ. ಕೆಲಸಗಳು ವಿಳಂಬವಾದರೂ ನಿಗದಿತ ಸಮಯಕ್ಕೆ ಪೂರ್ಣಗೊಳಿಸುತ್ತೀರಿ. ಸ್ಥಿರಾಸ್ತಿ ಮಾರಾಟಕ್ಕೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ವೃತ್ತಿ ಮತ್ತು ವ್ಯವಹಾರದಲ್ಲಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ನಿರುದ್ಯೋಗಿಗಳ ಶ್ರಮಕ್ಕೆ ಫಲ ದೊರೆಯುತ್ತದೆ.

ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:3 
ಅದೃಷ್ಟದ ಬಣ್ಣ: ಕೆಂಪು

ಮೀನ ರಾಶಿ
ಎಲ್ಲಾ ಕ್ಷೇತ್ರದವರಿಗೂ ಸಮಸ್ಯಾತ್ಮಕ ವಾತಾವರಣವಿರುತ್ತದೆ. ಕೆಲವು ವಿಚಾರಗಳಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮರುಚಿಂತನೆ ಮಾಡುವುದು ಒಳ್ಳೆಯದು. ಬಂಧುಗಳಿಂದ ಸಿಗುವ ಶುಭವಾರ್ತೆ ಸಮಾಧಾನ ನೀಡುತ್ತದೆ. ವ್ಯಾಪಾರದಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯುವುದಿಲ್ಲ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಋಣಾತ್ಮಕ ವಾತಾವರಣವಿರುತ್ತದೆ.

ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:4
ಅದೃಷ್ಟದ ಬಣ್ಣ:ನೀಲಿ

Read All News