ಇಂದಿನ ರಾಶಿ ಭವಿಷ್ಯ ಮಾರ್ಚ್-05-2024 ಶ್ರೀ ವಿವೇಕಾನಂದ ಆಚಾರ್ಯ ಅವರಿಂದ

  • Prasad Kambar
  • 5 Mar 2024 , 7:48 AM
  • Belagavi
  • 544

ಮೇಷ ರಾಶಿ

ಕೆಲವು ವ್ಯವಹಾರಗಳಲ್ಲಿ ಬಂಧುಗಳ ಸಲಹೆ ಪಡೆದು ಮುನ್ನಡೆಯುವುದು ಉತ್ತಮ. ಕೈಗೆತ್ತಿಕೊಂಡ ಕೆಲಸ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿನ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ನಿವಾರಿಸುತ್ತೀರಿ. ಅಗತ್ಯಕ್ಕೆ ಆರ್ಥಿಕ ಸಹಾಯ ದೊರೆಯುತ್ತದೆ. ವ್ಯಾಪಾರ ಅಭಿವೃದ್ಧಿಗಾಗಿ ಪಟ್ಟ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ.

ಅದೃಷ್ಟದ ದಿಕ್ಕು:ದಕ್ಷಿಣ

ಅದೃಷ್ಟದ ಸಂಖ್ಯೆ:8

ಅದೃಷ್ಟದ ಬಣ್ಣ:ನೀಲಿ

ವೃಷಭ ರಾಶಿ

ದೀರ್ಘಕಾಲದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮಾನಸಿಕ ಪ್ರಶಾಂತತೆ ದೊರೆಯುತ್ತದೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಸಿಗುತ್ತವೆ. ಉದ್ಯೋಗದಲ್ಲಿ ನಿಮ್ಮ ಮೌಲ್ಯ ಹೆಚ್ಚಾಗುತ್ತದೆ. ಮೌಲ್ಯದ ವಸ್ತ್ರ,ಆಭರಣ ಖರೀದಿಸಲಾಗುತ್ತದೆ. ಬಾಲ್ಯದ ಗೆಳೆಯರೊಂದಿಗೆ ಭೋಜನ ಮನರಂಜನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರಿ. ವ್ಯಾಪಾರಗಳು ಲಾಭದಾಯಕವಾಗಿರುತ್ತವೆ.

ಅದೃಷ್ಟದ ದಿಕ್ಕು: ದಕ್ಷಿಣ 

ಅದೃಷ್ಟದ ಸಂಖ್ಯೆ:5

ಅದೃಷ್ಟದ ಬಣ್ಣ:ಹಸಿರು

ಮಿಥುನ ರಾಶಿ

ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ವೃತ್ತಿಪರ ವ್ಯವಹಾರಗಳಲ್ಲಿ ಸ್ಥಿರತೆಯ ಕೊರತೆ ಉಂಟಾಗುತ್ತದೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಲಿರುತ್ತವೆ. ವ್ಯರ್ಥ ಪ್ರಯಾಣಗಳನ್ನು ಮಾಡಬೇಕಾಗುತ್ತದೆ. ಮನೆಯ ಹೊರಗೆ ಹೊಸ ಸಮಸ್ಯೆಗಳು ಉದ್ಭವಿಸುತ್ತವೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ. ಸಾಲದ ಹೊರೆ ಹೆಚ್ಚಾಗುತ್ತದೆ.

ಅದೃಷ್ಟದ ದಿಕ್ಕು:ದಕ್ಷಿಣ

ಅದೃಷ್ಟದ ಸಂಖ್ಯೆ:7

ಅದೃಷ್ಟದ ಬಣ್ಣ:ಬೂದು

ಕರ್ಕ ರಾಶಿ

ದೈವಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಆಪ್ತರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತದೆ. ಆರೋಗ್ಯದ ಬಗ್ಗೆ ಶ್ರದ್ಧೆ ವಹಿಸಬೇಕು. ಪ್ರಮುಖ ವ್ಯವಹಾರಗಳಲ್ಲಿ ಸ್ಥಿರತೆ, ಇಲ್ಲದ ಆಲೋಚನೆಗಳಿಂದ ನಷ್ಟ ಉಂಟಾಗುತ್ತದೆ. ಕೌಟುಂಬಿಕ ವಾತಾವರಣ ಅಸ್ತವ್ಯಸ್ತವಾಗಿರುತ್ತದೆ. ವೃತ್ತಿಪರ ವ್ಯವಹಾರಗಳು ನಿರುತ್ಸಾಹಗೊಳಿಸುತ್ತವೆ.

ಅದೃಷ್ಟದ ದಿಕ್ಕು:ಪೂರ್ವ

ಅದೃಷ್ಟದ ಸಂಖ್ಯೆ:9

ಅದೃಷ್ಟದ ಬಣ್ಣ:ಕೆಂಪು

ಸಿಂಹ ರಾಶಿ

ಮಕ್ಕಳ ಶೈಕ್ಷಣಿಕ ವಿಷಯಗಳಲ್ಲಿ ಶುಭಸುದ್ದಿ ಕೇಳುತ್ತೀರಿ. ಸಮಾಜದಲ್ಲಿ ಗೌರವಕ್ಕೆ ಕೊರತೆ ಇರುವುದಿಲ್ಲ. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ ಕಂಡುಬರುತ್ತದೆ. ಹಣಕಾಸಿನ ವಿಷಯಗಳು ತೃಪ್ತಿಕರವಾಗಿ ಸಾಗುತ್ತವೆ. ಹೊಸ ವ್ಯವಹಾರಗಳ ಹೂಡಿಕೆಗೆ ಸ್ನೇಹಿತರಿಂದ ಹಣಕಾಸಿನ ಸಹಾಯವನ್ನು ಪಡೆಯುತ್ತೀರಿ.

ಅದೃಷ್ಟದ ದಿಕ್ಕು:ಉತ್ತರ

ಅದೃಷ್ಟದ ಸಂಖ್ಯೆ:3

ಅದೃಷ್ಟದ ಬಣ್ಣ:ನೀಲಿ

ಕನ್ಯಾ ರಾಶಿ

ಹೊಸ ವಾಹನ ಖರೀದಿಗೆ ಇದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗುತ್ತೀರಿ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಫಲ ನೀಡುತ್ತವೆ. ನಿರುದ್ಯೋಗಿಗಳ ಕನಸುಗಳು ನನಸಾಗುತ್ತವೆ ಮತ್ತು ಹಣಕಾಸಿನ ವ್ಯವಹಾರಗಳು ಕೂಡಿಬರುತ್ತವೆ. ಸ್ನೇಹಿತರಿಂದ ಶುಭ ಸುದ್ದಿ ದೊರೆಯುತ್ತದೆ.

ಅದೃಷ್ಟದ ದಿಕ್ಕು:ಆಗ್ನೇಯ

ಅದೃಷ್ಟದ ಸಂಖ್ಯೆ:9

ಅದೃಷ್ಟದ ಬಣ್ಣ:ಕೆಂಪು

ತುಲಾ ರಾಶಿ

ದೂರ ಪ್ರಯಾಣದಲ್ಲಿ ವಾಹನ ತೊಂದರೆ ಎದುರಾಗುತ್ತವೆ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ. ವೃತ್ತಿಪರ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳ ಕೋಪಕ್ಕೆ ಗುರಿಯಾಗ ಬೇಕಾಗುತ್ತದೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದ. ಕುಟುಂಬ ಸದಸ್ಯರೊಂದಿಗೆ ಭಿನ್ನಬಭಿಪ್ರಾಯಗಳಿರುತ್ತವೆ.

ಅದೃಷ್ಟದ ದಿಕ್ಕು:ಪೂರ್ವ

ಅದೃಷ್ಟದ ಸಂಖ್ಯೆ:6

ಅದೃಷ್ಟದ ಬಣ್ಣ:ಹಸಿರು

ವೃಶ್ಚಿಕ ರಾಶಿ

ವ್ಯಾಪಾರ ಪಾಲುದಾರರೊಂದಿಗಿನ ವಿವಾದಗಳು ದೂರವಾಗುತ್ತವೆ. ಪ್ರಮುಖ ವಿಷಯಗಳಲ್ಲಿ ಆತುರ ಪಡುವುದರಿಂದ ಕೆಲಸಗಳು ಸಮಯಕ್ಕೆ ಪೂರ್ಣಗೊಳ್ಳುವುದಿಲ್ಲ. ವೃತ್ತಿಪರ ಉದ್ಯೋಗಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಬಂಧುಗಳಿಂದ ಅನಿರೀಕ್ಷಿತ ಒತ್ತಡ ಉಂಟಾಗುತ್ತವೆ. ಕುಟುಂಬದ ಸದಸ್ಯರ ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸಬೇಕು.

ಅದೃಷ್ಟದ ದಿಕ್ಕು:ಪಶ್ಚಿಮ

ಅದೃಷ್ಟದ ಸಂಖ್ಯೆ:9

ಅದೃಷ್ಟದ ಬಣ್ಣ:ಕೆಂಪು

ಧನು ರಾಶಿ 

ಬಂಧು ಮಿತ್ರರಿಂದ ಸಿಗುವ ಮಾಹಿತಿ ಅಚ್ಚರಿ ಮೂಡಿಸುತ್ತದೆ. ದೀರ್ಘಕಾಲ ದಿಂದ ಪೂರ್ಣಗೊಳ್ಳದ ಕೆಲಸಗಳು ಕುಟುಂಬದ ಸದಸ್ಯರ ನೆರವಿನಿಂದ ಪೂರ್ಣಗೊಳ್ಳುತ್ತವೆ. ವೃತ್ತಿಪರ ವ್ಯವಹಾರದಲ್ಲಿನ ಸಮಸ್ಯೆಗಳನ್ನು ನಿವಾರಿಸುತ್ತೀರಿ. ಉದ್ಯೋಗದಲ್ಲಿನ ವಿವಾದಗಳು ಬಗೆ ಹರಿಯುತ್ತವೆ. ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ. ಪ್ರಯಾಣದ ಸಮಯದಲ್ಲಿಹೊಸಪರಿಚಯಗಳು ಹೆಚ್ಚಾಗುತ್ತವೆ.

ಅದೃಷ್ಟದ ದಿಕ್ಕು:ಈಶಾನ್ಯ

ಅದೃಷ್ಟದ ಸಂಖ್ಯೆ:4

ಅದೃಷ್ಟದ ಬಣ್ಣ:ನೇರಳೆ

ಮಕರ ರಾಶಿ

ಆದಾಯ ಸೀಮಿತವಾಗಿರುತ್ತದೆ. ಉದ್ಯೋಗದಲ್ಲಿ ಸ್ಥಾನವಚನೆ ಸೂಚನೆಗಳಿವೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿರುತ್ತವೆ. ದೈವಿಕ ಚಿಂತನೆ ಹೆಚ್ಚುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ಕಠಿಣ ಪರಿಶ್ರಮಕ್ಕೆ ಫಲ ದೊರೆಯುವುದಿಲ್ಲ. ಸಮಯಕ್ಕೆ ಸರಿಯಾಗಿ ವ್ಯವಹಾರಗಳು ಪೂರ್ಣಗೊಳ್ಳದೆ ಕಿರಿಕಿರಿ ಹೆಚ್ಚಾಗುತ್ತದೆ.

ಅದೃಷ್ಟದ ದಿಕ್ಕು:ಈಶಾನ್ಯ

ಅದೃಷ್ಟದ ಸಂಖ್ಯೆ:9

ಅದೃಷ್ಟದ ಬಣ್ಣ:ಹಳದಿ

ಕುಂಭ ರಾಶಿ

ಆರ್ಥಿಕ ಪ್ರಗತಿ ಕಂಡು ಬರುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಅನುಕೂಲಕರ ವಾತಾವರಣವ ಇರುತ್ತದೆ. ಹೊಸ ಉಪಕ್ರಮಗಳನ್ನು ಪ್ರಾರಂಭಿಸಲಾಗುತ್ತದೆ, ಬೆಲೆಬಾಳುವ ವಸ್ತ್ರ ಮತ್ತು ಆಭರಣಗಳನ್ನು ಖರೀದಿಸಲಾಗುತ್ತದೆ, ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ದೊರೆಯುತ್ತವೆ, ಬಂಧುಗಳೊಂದಿಗೆ ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿ. ಔತಣಕೂಟಗಳಿಗೆ ಆಹ್ವಾನಗಳು ಬರುತ್ತವೆ.

ಅದೃಷ್ಟದ ದಿಕ್ಕು:ಪೂರ್ವ

ಅದೃಷ್ಟದ ಸಂಖ್ಯೆ:3

ಅದೃಷ್ಟದ ಬಣ್ಣ:ಕೆಂಪು

ಮೀನ ರಾಶಿ

ಬಂಧು ವರ್ಗದವರಿಂದ ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾಗುತ್ತದೆ. ವ್ಯಾಪಾರಗಳು ಮಂದಗತಿಯಲ್ಲಿ ಸಾಗುತ್ತವೆ. ನಿರುದ್ಯೋಗ ಪ್ರಯತ್ನಗಳು ಕೂಡಿ ಬರುವುದಿಲ್ಲ. ಕೆಲವು ವ್ಯವಹಾರಗಳಲ್ಲಿ ಯೋಚಿಸಿ ಮುಂದುವರಿಯುವುದು ಉತ್ತಮ. ಕೌಟುಂಬಿಕ ವಾತಾವರಣ ಗೊಂದಲಮಯವಾಗಿರುತ್ತದೆ.

ಅದೃಷ್ಟದ ದಿಕ್ಕು:ದಕ್ಷಿಣ

ಅದೃಷ್ಟದ ಸಂಖ್ಯೆ:6

ಅದೃಷ್ಟದ ಬಣ್ಣ:ಬಿಳಿ

Read All News