ಮೇಷ ರಾಶಿ: ಆರ್ಥಿಕ ಪರಿಸ್ಥಿತಿ ನಿಧಾನವಾಗಿರುತ್ತದೆ. ಮನೆಯ ಹೊರಗೆ ಮಾನಸಿಕ ಸಮಸ್ಯೆಗಳು ಹೆಚ್ಚಾಗುತ್ತವೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಸ್ವಂತ ಆಲೋಚನೆಗಳು ಕೂಡಿ ಬರುವುದಿಲ್ಲ. ಆರೋಗ್ಯದ ವಿಚಾರದಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕು. ಉದ್ಯೋಗಿಗಳಿಗೆ ಕೆಲಸದ ಹೊರೆ ಹೆಚ್ಚಾಗುವುದು. ನಿರುದ್ಯೋಗ ಪ್ರಯತ್ನಗಳು ನೀರುತ್ಸಾಹದಾಯಕವಾಗಿರುತ್ತದೆ.
ಅದೃಷ್ಟದ ದಿಕ್ಕು:ಆಗ್ನೇಯ
ಅದೃಷ್ಟದ ಸಂಖ್ಯೆ:4
ಅದೃಷ್ಟದ ಬಣ್ಣ:ನೀಲಿ
ವೃಷಭ ರಾಶಿ: ದೂರದ ಬಂಧುಗಳಿಂದ ಶುಭ ಸುದ್ದಿ ಸಿಗಲಿದೆ. ಹಠಾತ್ ಧನಲಾಭ ಉಂಟಾಗಲಿದೆ. ಕೈಗೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳಲಿದೆ. ನಿರುದ್ಯೋಗದ ಪ್ರಯತ್ನಗಳು ಸಫಲವಾಗಲಿವೆ. ವೃತ್ತಿಪರ ವ್ಯವಹಾರಗಳು ವಿಸ್ತರಣೆಯಾಗುತ್ತವೆ. ಉದ್ಯೋಗದಲ್ಲಿ ಬಡ್ತಿಗಳು ಹೆಚ್ಚಾಗುತ್ತವೆ. ಸಾಲದ ಒತ್ತಡ ನಿವಾರಣೆಯಾಗುತ್ತದೆ.
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:2
ಅದೃಷ್ಟದ ಬಣ್ಣ:ಬಿಳಿ
ಮಿಥುನ ರಾಶಿ: ಮಿತ್ರರೊಂದಿಗೆ ಕಲಹ ಉಂಟಾಗುವುದು. ಅಂದುಕೊಂಡ ಕೆಲಸಗಳು ನಡೆಯದೇ ನಿರಾಸೆ ಹೆಚ್ಚಾಗುವುದು. ಮನೆಯ ಹೊರಗೆ ಕಿರಿಕಿರಿಗಳು ಹೆಚ್ಚಾಗುತ್ತವೆ. ಮಾನಸಿಕ ಅನಾರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತವೆ. ವ್ಯಾಪಾರಗಳು ನಿಧಾನವಾಗುತ್ತವೆ ಮತ್ತು ಉದ್ಯೋಗಗಳಲ್ಲಿ ಕಾರ್ಮಿಕರಿಗೆ ಸರಿಯಾದ ಮನ್ನಣೆ ಸಿಗುವುದಿಲ್ಲ.
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:6
ಅದೃಷ್ಟದ ಬಣ್ಣ:ಹಸಿರು
ಕರ್ಕ ರಾಶಿ: ಆಪ್ತ ಸ್ನೇಹಿತರಿಂದ ಅಚ್ಚರಿಯ ವಿಷಯಗಳು ತಿಳಿದು ಬರುತ್ತವೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಪ್ರತಿಭೆಯನ್ನು ಗುರುತಿಸಲಾಗುತ್ತದೆ ಮತ್ತು ಸ್ಥಿರಾಸ್ತಿಯನ್ನು ಖರೀದಿಸುವಿರಿ. ವೃತ್ತಿ ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ.
ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ:ಬಿಳಿ
ಸಿಂಹ ರಾಶಿ: ಬಾಲ್ಯದ ಗೆಳೆಯರ ಮಿಲನ ಸಂತಸ ತರಲಿದೆ. ಭೋಜನ ಮನರಂಜನೆಯಲ್ಲಿ ಪಾಲ್ಗೊಳ್ಳುವಿರಿ. ಬಂಧು ಮಿತ್ರರ ನೆರವಿನಿಂದ ಕೆಲವು ಕಾರ್ಯಗಳು ಪೂರ್ಣಗೊಳ್ಳುತ್ತವೆ.
ವ್ಯಾಪಾರದಲ್ಲಿ ಹೊಸ ಆಲೋಚನೆಗಳು ಕಾರ್ಯರೂಪಕ್ಕೆ ಬರಲಿವೆ. ಉದ್ಯೋಗಿಗಳಿಗೆ ಕೆಲಸದ ಒತ್ತಡದಿಂದ ಮುಕ್ತಿ ದೊರೆಯಲಿದೆ. ಆರ್ಥಿಕ ವಾತಾವರಣ ಆಶಾದಾಯಕವಾಗಿರುತ್ತದೆ.
ಅದೃಷ್ಟದ ದಿಕ್ಕು:ಈಶಾನ್ಯ
ಅದೃಷ್ಟದ ಸಂಖ್ಯೆ:6
ಅದೃಷ್ಟದ ಬಣ್ಣ:ಬಿಳಿ
ಕನ್ಯಾ ರಾಶಿ: ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಸಂಬಂಧಿಕರೊಂದಿಗೆ ಅನಿರೀಕ್ಷಿತ ಜಗಳಗಳು ಉಂಟಾಗುತ್ತವೆ. ಕೈಗೊಂಡ ಕೆಲಸದಲ್ಲಿ ಅಡೆತಡೆಗಳು ಎದುರಾಗುತ್ತವೆ. ತಂದೆ-ತಾಯಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ಕೆಲಸದ ವಾತಾವರಣವು ಕಿರಿಕಿರಿಯನ್ನುಂಟು ಮಾಡುತ್ತದೆ. ವ್ಯಾಪಾರ ವ್ಯವಹಾರಗಳು ನಿಧಾನವಾಗಿ ಸಾಗುತ್ತವೆ.
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:7
ಅದೃಷ್ಟದ ಬಣ್ಣ:ಬಿಳಿ
ತುಲಾ ರಾಶಿ: ಪ್ರಮುಖ ವಿಷಯಗಳಲ್ಲಿ ಆಲೋಚನೆಗಳಲ್ಲಿ ಸ್ಥಿರತೆಯ ಕೊರತೆ ಉಂಟಾಗುತ್ತದೆ. ವೃತ್ತಿಪರ ವ್ಯವಹಾರಗಳಲ್ಲಿ ವಿವಾದಗಳು ಉದ್ಭವಿಸುತ್ತವೆ. ಪ್ರಯಾಣವನ್ನು ಮುಂದೂಡುವುದು ಉತ್ತಮ. ಹೊಸ ಸಾಲದ ಪ್ರಯತ್ನಗಳು ನಡೆಯಲಿವೆ. ಆಧ್ಯಾತ್ಮಿಕ ಚಿಂತನೆ ಹೆಚ್ಚುತ್ತದೆ. ನಿರುದ್ಯೋಗಿಗಳಿಗೆ ಪ್ರಯತ್ನಗಳು ಫಲ ನೀಡುವುದಿಲ್ಲ. ಕುಟುಂಬ ಸದಸ್ಯರೊಂದಿಗೆ ವಾದ-ವಿವಾದಗಳು ಉಂಟಾಗುತ್ತವೆ.
ಅದೃಷ್ಟದ ದಿಕ್ಕು:ಈಶಾನ್ಯ
ಅದೃಷ್ಟದ ಸಂಖ್ಯೆ:3
ಅದೃಷ್ಟದ ಬಣ್ಣ:ಹಳದಿ
ವೃಶ್ಚಿಕ ರಾಶಿ: ಕುಟುಂಬ ಸದಸ್ಯರೊಂದಿಗೆ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವಿರಿ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಲಿದೆ. ಕೈಗೆತ್ತಿಕೊಂಡ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ನಿರುದ್ಯೋಗ ಪ್ರಯತ್ನಗಳು ಸಕಾರಾತ್ಮಕವಾಗಿ ಸಾಗುತ್ತವೆ. ವ್ಯಾಪಾರಗಳಲ್ಲಿ ಪ್ರಮುಖ ನಿರ್ಧಾರಗಳು ಕಾರ್ಯಗತಗೊಳ್ಳುತ್ತವೆ. ವೃತ್ತಿಪರ ಉದ್ಯೋಗಗಳು ಅನುಕೂಲಕರವಾಗಿರುತ್ತದೆ.
ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:1
ಅದೃಷ್ಟದ ಬಣ್ಣ:ಕಿತ್ತಳೆ
ಧನು ರಾಶಿ: ಮಾನಸಿಕ ನೆಮ್ಮದಿ ಇರುತ್ತದೆ, ಕೈಗೊಂಡ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಮನೆಯಲ್ಲಿ ಶುಭ ಕಾರ್ಯಗಳನ್ನು ನಿರ್ವಹಿಸುತ್ತೀರಿ. ವೃತ್ತಿ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯಲಿದೆ. ನಿರುದ್ಯೋಗಿಗಳಿಗೆ ಅಧಿಕಾರಿಗಳ ಕೃಪಾಕಟಾಕ್ಷದಿಂದ ಉದ್ಯೋಗಾವಕಾಶ ದೊರೆಯಲಿದೆ.
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:8
ಅದೃಷ್ಟದ ಬಣ್ಣ:ನೀಲಿ
ಮಕರ ರಾಶಿ: ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಿರಿ. ಪ್ರಯಾಣದಲ್ಲಿ ಜಾಗ್ರತೆ ಇರಲಿ. ಬಂಧುಮಿತ್ರರೊಡನೆ ಭಿನ್ನಾಭಿಪ್ರಾಯಗಳು ಉಂಟಾಗುವುದು. ವ್ಯಾಪಾರ ಉದ್ಯೋಗಗಳಲ್ಲಿ ಸ್ವಲ್ಪ ಗೊಂದಲ ಉಂಟಾಗುವುದು. ನಿರೀಕ್ಷಿತ ಸಮಯಕ್ಕೆ ಹಣ ಕೈ ಸೇರದೆ ತೊಂದರೆಯಾಗುತ್ತದೆ.
ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ:ನೀಲಿ
ಕುಂಭ ರಾಶಿ: ಮಾಡುವ ಕೆಲಸದಲ್ಲಿ ಅಡೆತಡೆಗಳು ಎದುರಾಗಲಿವೆ. ಸ್ನೇಹಿತರೊಂದಿಗೆ ಸಣ್ಣ-ಪುಟ್ಟ ವಾದ-ವಿವಾದಗಳು ಉಂಟಾಗುತ್ತವೆ, ಖರ್ಚುವೆಚ್ಚಗಳ ಬಗ್ಗೆ ಯೋಚಿಸಿ ವ್ಯವಹರಿಸುವುದು ಉತ್ತಮ. ಆಕಸ್ಮಿಕ ಪ್ರಯಾಣಳನ್ನು ಮಾಡಬೇಕಾಗುತ್ತದೆ. ವ್ಯಾಪಾರ - ವ್ಯವಹಾರದಲ್ಲಿ ತೆಗೆದುಕೊಂಡ ನಿರ್ಧಾರಗಳು ಕೂಡಿ ಬರುವುದಿಲ್ಲ, ವೃತ್ತಿಪರ ಉದ್ಯೋಗಗಳು ನಿಧಾನವಾಗುತ್ತವೆ, ಸಾಲದ ಒತ್ತಡ ಹೆಚ್ಚಾಗುತ್ತದೆ.
ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ:ಕೆಂಪು
ಮೀನ ರಾಶಿ: ಹಳೆಯ ಸ್ನೇಹಿತರಿಂದ ಶುಭ ಕಾರ್ಯಕ್ಕೆ ಆಹ್ವಾನಗಳು ಸಿಗುತ್ತವೆ. ವೃತ್ತಿ ವ್ಯಾಪಾರಗಳು ಉತ್ಸಾಹದಿಂದ ಕೂಡಿರುತ್ತವೆ. ಸಮಾಜದ ಪ್ರಮುಖ ವ್ಯಕ್ತಿಗಳಿಂದ ವಿಶೇಷ ಒಲವು ಸಿಗುತ್ತದೆ. ಕೈಗೊಂಡ ಕೆಲಸಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು. ಉದ್ಯೋಗದಲ್ಲಿ ಸಂಬಳದ ಬಗ್ಗೆ ಒಳ್ಳೆಯ ಸುದ್ದಿ ಇರುತ್ತದೆ.
ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:4
ಅದೃಷ್ಟದ ಬಣ್ಣ:ಕಂದು