ಮೇಷ ರಾಶಿ
ದೂರದ ಬಂಧುಗಳಿಂದ ವಿವಾದಗಳಿಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿ ದೊರೆಯುತ್ತದೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬವಾದರೂ ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ಆರ್ಥಿಕ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಅನುಕೂಲಕರವಾಗಿರುತ್ತದೆ. ಉದ್ಯೋಗದ ವಿಚಾರಗಳಲ್ಲಿ ಅಧಿಕಾರಿಗಳೊಂದಿಗೆ ಚರ್ಚೆಗಳು ಯಶಸ್ವಿಯಾಗುತ್ತದೆ ಮತ್ತು ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ.
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:2
ಅದೃಷ್ಟದ ಬಣ್ಣ:ಹಸಿರು
ವೃಷಭ ರಾಶಿ
ಅನ್ಯರೊಂದಿಗೆ ಅನಿರೀಕ್ಷಿತ ವಿವಾದಗಳು ಉಂಟಾಗುತ್ತವೆ, ಕುಟುಂಬ ಸದಸ್ಯರು ನಿಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿರುತ್ತಾರೆ. ಮಕ್ಕಳ ಆರೋಗ್ಯಕ್ಕೆ ವೈದ್ಯಕೀಯ ಸಮಾಲೋಚನೆ ಅಗತ್ಯವಿದೆ. ವೃತ್ತಿ ಉದ್ಯೋಗಗಳಲ್ಲಿ ಕೆಲಸದ ಒತ್ತಡ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಬೆಲೆಬಾಳುವ ವಸ್ತುಗಳ ವ್ಯವಹಾರದಲ್ಲಿ ಹೆಚ್ಚಿನ ಕಾಳಜಿ ಅಗತ್ಯ. ದೈವಿಕ ಚಿಂತನೆ ಹೆಚ್ಚಾಗುತ್ತದೆ.
ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ:ಬಿಳಿ
ಮಿಥುನ ರಾಶಿ
ದೈಹಿಕ ಮಾನಸಿಕ ಸಮಸ್ಯೆಗಳು ಬಾಧಿಸುತ್ತವೆ. ಮಾತೃ ಬಂಧುಗಳೊಂದಿಗೆ ವಿವಾದ ಉಂಟಾಗುತ್ತದೆ. ಸಾಲಗಾರರಿಂದ ಒತ್ತಡ ಹೆಚ್ಚಾಗುತ್ತದೆ. ಕೈಗೊಳ್ಳುವ ಪ್ರತಿಯೊಂದು ಕೆಲಸದಲ್ಲೂ ಅಡೆತಡೆಗಳು ಉಂಟಾಗುತ್ತದೆ. ವೃತ್ತಿಪರ ವ್ಯವಹಾರಗಳು ಮಿಶ್ರಮ ಫಲಿತಾಂಶಗಳಿರುತ್ತವೆ. ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.
ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ:ಹಳದಿ
ಕಟಕ ರಾಶಿ
ಹೊಸ ವಸ್ತ್ರಗಳನ್ನು ಖರೀದಿಸುತ್ತೀರಿ ಮತ್ತು ಎಲ್ಲಾ ಕಡೆಯಿಂದ ಅನುಕೂಲತೆ ಹೆಚ್ಚಾಗುತ್ತದೆ. ಕೌಟುಂಬಿಕ ವಿಚಾರದಲ್ಲಿ ನಿಮ್ಮ ನಿರ್ಧಾರಗಳು ಎಲ್ಲರಿಗೂ ಇಷ್ಟವಾಗುವಂತೆ ಇರುತ್ತದೆ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಕೂಡಿಬರುತ್ತವೆ. ವೃತ್ತಿಪರ ವ್ಯವಹಾರಗಳು ಸುಗಮವಾಗಿ ಸಾಗುತ್ತವೆ. ಸಹೋದರರೊಂದಿಗಿನ ಸ್ಥಿರಾಸ್ತಿ ವಿವಾದಗಳು ಬಗೆಹರಿಯುತ್ತವೆ.
ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:3
ಅದೃಷ್ಟದ ಬಣ್ಣ:ಕೆಂಪು
ಸಿಂಹ ರಾಶಿ
ಪ್ರಾರಂಭಿಸಿದ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ. ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ. ಮನೆಯ ಹೊರಗಿನ ದೀರ್ಘಕಾಲದ ಸಮಸ್ಯೆಗಳು ಕಿರಿಕಿರಿಯನ್ನುಂಟು ಮಾಡುತ್ತವೆ. ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯಗಳಿರುತ್ತವೆ. ವೃತ್ತಿಪರ ವ್ಯವಹಾರಗಳಲ್ಲಿ ಸ್ವಂತ ಆಲೋಚನೆಗಳು ಕೂಡಿ ಬರುವುದಿಲ್ಲ. ದೈವಿಕ ಚಿಂತನೆ ಹೆಚ್ಚಾಗುತ್ತದೆ.
ಅದೃಷ್ಟದ ದಿಕ್ಕು:ವಾಯುವ್ಯ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ:ಕೆಂಪು
ಕನ್ಯಾ ರಾಶಿ
ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಮನೆಯ ಹೊರಗೆ ಸಮಸ್ಯೆಗಳನ್ನು ನಿಧಾನವಾಗಿ ಪರಿಹರಿಸುತ್ತೀರಿ. ವೃತ್ತಿಪರ ವ್ಯವಹಾರಗಳಲ್ಲಿ ನಷ್ಟವನ್ನು ನಿವಾರಿಸಿ ಲಾಭವನ್ನು ಗಳಿಸುತ್ತೀರಿ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಸ್ಥಿರಾಸ್ತಿ ಖರೀದಿಯ ಪ್ರಯತ್ನಗಳು ಫಲ ನೀಡುತ್ತವೆ.
ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:2
ಅದೃಷ್ಟದ ಬಣ್ಣ:ಹಳದಿ
ತುಲಾ ರಾಶಿ
ಪ್ರಮುಖ ವ್ಯವಹಾರಗಳಲ್ಲಿ ಅನಿರೀಕ್ಷಿತ ತೊಂದರೆಗಳು ಎದುರಾಗುತ್ತವೆ. ದೂರದೇಶಕ್ಕೆ ಪ್ರಯಾಣ ಮಾಡಬೇಕಾಗುತ್ತದೆ. ಅನಿರೀಕ್ಷಿತವಾಗಿ ಖರ್ಚುಗಳು ಹೆಚ್ಚಾಗುತ್ತವೆ. ನಿರುದ್ಯೋಗಿಗಳ ಪ್ರಯತ್ನಗಳು ನಿರಾಸೆ ಉಂಟುಮಾಡುತ್ತವೆ. ಉದ್ಯೋಗಗಳಲ್ಲಿ ಆತುರದಲ್ಲಿ ಇತರರೊಂದಿಗೆ ಮಾತನಾಡುವುದು ಒಳ್ಳೆಯದಲ್ಲ. ವ್ಯಾಪಾರದಲ್ಲಿ ಸಣ್ಣಪುಟ್ಟ ನಷ್ಟಗಳು ಎದುರಾಗುತ್ತವೆ.
ಅದೃಷ್ಟದ ದಿಕ್ಕು:ಈಶಾನ್ಯ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ:ಕಿತ್ತಳೆ
ವೃಶ್ಚಿಕ ರಾಶಿ
ಆದಾಯದ ಮೂಲಗಳು ಹೆಚ್ಚಾಗುತ್ತವೆ. ಇತರರ ಸಹಾಯದಿಂದ ಕೆಲವು ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ದೀರ್ಘಕಾಲದ ಸಾಲಗಳನ್ನು ಇತ್ಯರ್ಥಗೊಳಿಸುತ್ತೀರಿ. ಮಕ್ಕಳಿಗೆ ಹೊಸ ಶೈಕ್ಷಣಿಕ ಉದ್ಯೋಗಾವಕಾಶಗಳು ದೊರೆಯುತ್ತವೆ. ದೈಹಿಕ ಮತ್ತು ಮಾನಸಿಕ ಪ್ರಶಾಂತತೆ ದೊರೆಯುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಅಧಿಕಾರಿಗಬೆಂಬಲ ದೊರೆಯುತ್ತದೆ.
ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:2
ಅದೃಷ್ಟದ ಬಣ್ಣ:ಹಸಿರು
ಧನಸ್ಸು ರಾಶಿ
ಸುತ್ತಮುತ್ತಲಿನವರೊಂದಿಗೆ ಸ್ಥಿರಾಸ್ತಿ ವಿವಾದಗಳು ಉಂಟಾಗುತ್ತವೆ. ಉದ್ಯೋಗಿಗಳು ಕೆಲವು ವ್ಯವಹಾರಗಳಲ್ಲಿ ಉನ್ನತ ಹುದ್ದೆಗಳನ್ನು ಪಡೆಯುತ್ತಾರೆ, ಆತ್ಮಸ್ಥೈರ್ಯ ದಿಂದ ದೃಢ ನಿರ್ಧಾರಗಳನ್ನು ತೆಗೆದುಕೊಂಡು ಲಾಭವನ್ನು ಪಡೆಯುತ್ತೀರಿ. ನಿರುದ್ಯೋಗೀಗಳು ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ:ಹಳದಿ
ಮಕರ ರಾಶಿ
ಸಮಾಜದಲ್ಲಿ ಕೀರ್ತಿ, ಪ್ರತಿಷ್ಠೆ ಹೆಚ್ಚಾಗುತ್ತದೆ. ಗೃಹ ನಿರ್ಮಾಣ ಕಾರ್ಯಗಳಿಗೆ ಚಾಲನೆ ದೊರೆಯುತ್ತದೆ. ವೃತ್ತಿ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ಮಕ್ಕಳ ವಿವಾಹ ಉದ್ಯೋಗ ಪ್ರಯತ್ನಗಳು ಫಲ ನೀಡುತ್ತವೆ. ಆರ್ಥಿಕ ವಾತಾವರಣ ಅನುಕೂಲಕರವಾಗಿ ಇರುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಒಳ್ಳೆಯ ಸುದ್ದಿ ಸಿಗುತ್ತದೆ.
ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:2
ಅದೃಷ್ಟದ ಬಣ್ಣ:ಹಸಿರು
ಕುಂಭ ರಾಶಿ
ನಿರೀಕ್ಷಿತ ಸಮಯದಲ್ಲಿ ನಿರೀಕ್ಷಿತ ಸೌಲಭ್ಯಗಳು ಸಿಗದೇ ತೊಂದರೆ ಅನುಭವಿಸುತ್ತೀರಿ. ದೂರದ ಪ್ರಯಾಣಗಳು ಮುಂದೂಡಲ್ಪಡುತ್ತವೆ. ಹಣದ ವಿಚಾರದಲ್ಲಿ ಇತರರಿಗೆ ಮಾತು ಕೊಡುವುದು ಒಳ್ಳೆಯದಲ್ಲ. ವೃತ್ತಿಪರ ಉದ್ಯೋಗಗಳಲ್ಲಿ ಸ್ಥಿರತೆಯ ಕೊರತೆ ಇರುತ್ತದೆ. ಕೆಲವರ ವರ್ತನೆಯಿಂದ ಮಾನಸಿಕ ಕಿರಿಕಿರಿ ಉಂಟಾಗುತ್ತದೆ.
ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ:ನೇರಳೆ
ಮೀನ ರಾಶಿ
ಕುಟುಂಬ ಸದಸ್ಯರಿಂದ ಶುಭ ಸುದ್ದಿ ದೊರೆಯುತ್ತದೆ. ಹೊಸ ವಾಹನ ಖರೀದಿ ನಡೆಯಲಿದೆ. ಮನೆಯ ಹೊರಗೆ ನಿಮ್ಮ ಮಾತಿಗೆ ಮೌಲ್ಯ ಹೆಚ್ಚಾಗುತ್ತದೆ. ಕೈಗೆತ್ತಿಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಮನೆಗೆ ಬಂಧುಗಳ ಆಗಮನ ಸಂತಸ ತರಲಿದೆ. ವೃತ್ತಿಪರ ಉದ್ಯೋಗಗಳಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಕೆಲವು ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ.
ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:1
ಅದೃಷ್ಟದ ಬಣ್ಣ:ಗುಲಾಬಿ