ಇಂದಿನ ರಾಶಿ ಭವಿಷ್ಯ ನವೆಂಬರ್ 18-2023 ಶ್ರೀ ವಿವೇಕಾನಂದ ಆಚಾರ್ಯ ಅವರಿಂದ

  • Prasad Kambar
  • 15 Jan 2024 , 11:18 AM
  • Belagavi
  • 469

ಮೇಷ ರಾಶಿ 
ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ಚರ್ಚೆಗೆ ಅನುಕೂಲಕರ ದಿನವಾಗಿದೆ. ವೃತ್ತಿ ವ್ಯವಹಾರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಅನುಕೂಲಕರ ವಾಗಿರುತ್ತವೆ ಮತ್ತು ಆಲೋಚನೆಗಳು ಅನುಕೂಲಕರ ವಾಗಿರುತ್ತವೆ. ಕೈಗೆತ್ತಿಕೊಂಡ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಭೂಮಿ ಮಾರಾಟಗಳು ಲಾಭದಾಯಕವಾಗಿರುತ್ತವೆ. ಉದ್ಯೋಗದಲ್ಲಿ ಸಮಸ್ಯೆಗಳನ್ನು ನಿವಾರಿಸಲಾಗುತ್ತದೆ.

ಅದೃಷ್ಟದ ದಿಕ್ಕು:ದಕ್ಷಿಣ
ಅದೃಷ್ಟದ ಸಂಖ್ಯೆ:2
ಅದೃಷ್ಟದ ಬಣ್ಣ:ಬಿಳಿ

ವೃಷಭ ರಾಶಿ 
ಕೈಗೆತ್ತಿಕೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ಪ್ರಯಾಣದಲ್ಲಿ ಹಠಾತ್ ಬದಲಾವಣೆಗಳು ಉಂಟಾಗುತ್ತವೆ. ಆರೋಗ್ಯದ ವಿಷಯದಲ್ಲಿ ಸ್ವಲ್ಪ ಗಮನ ಅಗತ್ಯ. ಆಕಸ್ಮಿಕ ಧನ ವ್ಯಯದ ಸೂಚನೆಗಲೈವ್. ಆಧ್ಯಾತ್ಮಿಕ ಚಿಂತನೆ ಹೆಚ್ಚಾಗುತ್ತದೆ. ವೃತ್ತಿ ಮತ್ತು ಉದ್ಯೋಗಗಳು ಸರಿಯಾಗಿ ನಡೆಯುವುದಿಲ್ಲ. ವ್ಯಾಪಾರದಲ್ಲಿ ನಿರ್ಣಾಯಕ ಸಮಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:3
ಅದೃಷ್ಟದ ಬಣ್ಣ:ಹಳದಿ

ಮಿಥುನ ರಾಶಿ 
ಆರ್ಥಿಕ ಸಮಸ್ಯೆಗಳು ಬಾಧಿಸುತ್ತವೆ. ದೀರ್ಘಾವಧಿ ಸಾಲದ ಒತ್ತಡ ಹೆಚ್ಚಾಗುತ್ತದೆ. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚು ಕಿರಿಕಿರಿಯುಂಟು ಮಾಡುತ್ತವೆ. ಬಂಧುಗಳೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತವೆ. ನಿರುದ್ಯೋಗಿಗಳಿಗೆ ನಿರುತ್ಸಾಹ ವಾತಾವರಣವಿರುತ್ತದೆ. ಉದ್ಯೋಗದಲ್ಲಿ ಸ್ವಲ್ಪ ಗೊಂದಮಯ ವಾತವಾರಣವಿರುತ್ತದೆ. ದೈವಿಕ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ:ಕೆಂಪು

ಕಟಕ ರಾಶಿ 
ಬಂಧು ಮಿತ್ರರ ಭೇಟಿ ಸಂತಸ ತರುತ್ತದೆ, ಪ್ರಮುಖ ಕೆಲಸಗಳಲ್ಲಿ ಅಡೆತಡೆಗಳನ್ನು ನಿವಾರಿಸಿ ಮುನ್ನಡೆಯುತ್ತೀರಿ. ಆಕಸ್ಮಿಕ ಧನಲಾಭ ಉಂಟಾಗುತ್ತದೆ. ಸಮಾಜದ ಪ್ರಮುಖ ವ್ಯಕ್ತಿಗಳ ಸಂಪರ್ಕವು ಲಾಭದಾಯಕವಾಗಿರುತ್ತವೆ. ಕುಟುಂಬ ಸದಸ್ಯರ ಬೆಂಬಲ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಯೋಚಿಸಿ ಮುಂದುವರಿಯುವುದು ಉತ್ತಮ.

ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ:ಹಳದಿ 

ಸಿಂಹ ರಾಶಿ 
ಬಂಧುಗಳು ಮತ್ತು ಸ್ನೇಹಿತರಿಂದ ನಿರ್ಣಾಯಕ ಸಮಯದಲ್ಲಿ ಸಹಾಯ ಮತ್ತು ಬೆಂಬಲ ದೊರೆಯುತ್ತದೆ. ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ವೃತ್ತಿಪರ ವ್ಯವಹಾರದಲ್ಲಿನ ಪರಿಸ್ಥಿತಿಗಳು ಅನುಕೂಲಕರವಾಗಿ ಬದಲಾಗುತ್ತವೆ, ಬಾಲ್ಯದ ಸ್ನೇಹಿತರೊಂದಿಗೆ ಭೋಜನ ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತೀರಿ. ವೃತ್ತಿ ಮತ್ತು ವ್ಯವಹಾರಗಳನ್ನು ವಿಸ್ತರಿಸುವ ಪ್ರಯತ್ನಗಳು ಫಲ ನೀಡುತ್ತವೆ. ಉದ್ಯೋಗಗಳಲ್ಲಿ ಅನುಕೂಲತೆ ಹೆಚ್ಚಾಗುತ್ತದೆ.

ಅದೃಷ್ಟದ ದಿಕ್ಕು:ವಾಯುವ್ಯ
ಅದೃಷ್ಟದ ಸಂಖ್ಯೆ:7
ಅದೃಷ್ಟದ ಬಣ್ಣ:ಹಳದಿ

ಕನ್ಯಾ ರಾಶಿ 
ದೀರ್ಘಕಾಲದ ಸಾಲಗಳು ನಿವಾರಣೆಯಾಗುತ್ತವೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುತ್ತವೆ. ಕುಟುಂಬದಲ್ಲಿ ಅಗತ್ಯಕ್ಕೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಕೈಗೊಂಡ ಕಾರ್ಯಗಳು ಅನುಕೂಲಕರವಾಗಿ ಸಾಗುತ್ತವೆ. ವ್ಯಾಪಾರಗಳು ಹೂಡಿಕೆಗಳನ್ನು ಪಡೆಯುತ್ತವೆ. ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲ ದೊರೆಯುತ್ತದೆ.

ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:2
ಅದೃಷ್ಟದ ಬಣ್ಣ:ಹಳದಿ

ತುಲಾ ರಾಶಿ 
ಸಾಲಗಾರರಿಂದ ಒತ್ತಡ ಹೆಚ್ಚಾಗುತ್ತದೆ. ಮಾನಸಿಕ ಸಮಸ್ಯೆಗಳು ಕಿರಿಕಿರಿಯುಂಟು ಮಾಡುತ್ತವೆ. ಹಠಾತ್ ಪ್ರಯಾಣದ ಸೂಚನೆಗಳಿವೆ. ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ಜಾಗರೂಕರಾಗಿರ ಬೇಕು. ಪ್ರಮುಖ ವ್ಯವಹಾರಗಳನ್ನು ಮುಂದೂಡುವುದು ಉತ್ತಮ, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ.

ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:5
ಅದೃಷ್ಟದ ಬಣ್ಣ:ಹಳದಿ

ವೃಶ್ಚಿಕ ರಾಶಿ
ಕೈಗೊಂಡ ಕೆಲಸಗಳು ಶ್ರಮದಾಯಕವಾಗಿದ್ದರೂ ಪೂರ್ಣಗೊಳ್ಳುವುದಿಲ್ಲ. ದೂರ ಪ್ರಯಾಣಗಳು ಲಾಭದಾಯಕವಾಗಿರುತ್ತವೆ. ವ್ಯಾಪಾರ-ವ್ಯವಹಾರದಲ್ಲಿ ತೊಂದರೆಗಳು ಎದುರಾದರೂ ಅವುಗಳನ್ನು ನಿವಾರಿಸಿ ಲಾಭವನ್ನು ಪಡೆಯುತ್ತೀರಿ ಮತ್ತು ಉದ್ಯೋಗದಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಆದಾಯ ಚೆನ್ನಾಗಿರಲಿದೆ.

ಅದೃಷ್ಟದ ದಿಕ್ಕು:ಈಶಾನ್ಯ
ಅದೃಷ್ಟದ ಸಂಖ್ಯೆ:9
ಅದೃಷ್ಟದ ಬಣ್ಣ:ಹಳದಿ

ಧನಸ್ಸು ರಾಶಿ 
ಪರರ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದು ಒಳ್ಳೆಯದಲ್ಲ. ನಿಮ್ಮ ಆಲೋಚನೆಗಳು ಕುಟುಂಬದ ಸದಸ್ಯರಿಗೆ ಇಷ್ಟವಾಗುವುದಿಲ್ಲ. ಕೈಗೆತ್ತಿಕೊಂಡ ಕೆಲಸಗಳು ಮಧ್ಯದಲ್ಲಿ ನಿಲ್ಲುತ್ತವೆ, ಆರ್ಥಿಕ ತೊಂದರೆಗಳು ಹೆಚ್ಚು ನೋವುಂಟು ಮಾಡುತ್ತವೆ. ವೃತ್ತಿ ಮತ್ತು ವ್ಯಾಪಾರಗಳು ನಿಧಾನವಾಗಿ ಸಾಗುತ್ತವೆ. ಉದ್ಯೋಗದ ವಾತಾವರಣವು ಸಮಸ್ಯಾತ್ಮಕವಾಗಿರುತ್ತದೆ.

ಅದೃಷ್ಟದ ದಿಕ್ಕು:ಪೂರ್ವ
ಅದೃಷ್ಟದ ಸಂಖ್ಯೆ:4
ಅದೃಷ್ಟದ ಬಣ್ಣ:ಕೆಂಪು

ಮಕರ ರಾಶಿ 
ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಸೋದರ ಸಂಬಂಧಿಗಳೊಂದಿಗೆ ಜಮೀನಿಗೆ ಸಂಬಂಧಿಸಿದ ವಿವಾದಗಳು ಒಂದು ಹಂತಕ್ಕೆ ಬರುತ್ತವೆ. ಬಂಧುಗಳಿಂದ ಶುಭ ಸುದ್ದಿ ದೊರೆಯುತ್ತದೆ. ಆಧ್ಯಾತ್ಮಿಕ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತೀರಿ ಮತ್ತು ಉದ್ಯೋಗದಲ್ಲಿ ವಿವಾದಗಳನ್ನು ಪರಿಹರಿಸಿಕೊಳ್ಳುತ್ತೀರಿ.

ಅದೃಷ್ಟದ ದಿಕ್ಕು:ಪಶ್ಚಿಮ
ಅದೃಷ್ಟದ ಸಂಖ್ಯೆ:3
ಅದೃಷ್ಟದ ಬಣ್ಣ:ಕೆಂಪು

ಕುಂಭ ರಾಶಿ 
ಕೈಗೊಂಡ ಕೆಲಸಗಳು ನಿಧಾನ ಗತಿಯಲ್ಲಿ ಸಾಗುತ್ತವೆ. ಖರ್ಚಿಕೆ ತಕ್ಕ ಆದಾಯ ಇರುವುದಿಲ್ಲ. ವ್ಯರ್ಥ ಖರ್ಚುಗಳ ವಿಚಾರದಲ್ಲಿ ಜಾಗರೂಕರಾಗಿರಿ. ವ್ಯಾಪಾರ ಪಾಲುದಾರರೊಂದಿಗೆ ಸಣ್ಣಪುಟ್ಟ ವಿವಾದಗಳಿಂದ ದೂರವಿರಿ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ವಿವಾದಗಳ ಸೂಚನೆಗಳಿವೆ.

ಅದೃಷ್ಟದ ದಿಕ್ಕು:ನೈಋತ್ಯ
ಅದೃಷ್ಟದ ಸಂಖ್ಯೆ:1
ಅದೃಷ್ಟದ ಬಣ್ಣ:ಕೆಂಪು

ಮೀನ ರಾಶಿ
ಅನಾರೋಗ್ಯದಿಂದ ಮುಕ್ತಿ ದೊರೆಯುತ್ತದೆ. ಕೆಲವು ಸಂದರ್ಭಗಳಲ್ಲಿ ಇತರರ ಸಹಾಯ ದೊರೆಯುತ್ತದೆ. ಧನಾಧಾಯ ಚೆನ್ನಾಗಿರಲಿದೆ. ವೃತ್ತಿಪರ ವ್ಯವಹಾರಗಳು ಲಾಭದಾಯಕ ವಾಗಿರುತ್ತವೆ. ನಿರುದ್ಯೋಗಿಗಳ ಪ್ರಯತ್ನಗಳು ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತವೆ. ಮಕ್ಕಳು ಶೈಕ್ಷಣಿಕ ವಿಷಯಗಳು ತೃಪ್ತಿಕರವಾಗಿರುತ್ತವೆ.

ಅದೃಷ್ಟದ ದಿಕ್ಕು:ಉತ್ತರ
ಅದೃಷ್ಟದ ಸಂಖ್ಯೆ:7
ಅದೃಷ್ಟದ ಬಣ್ಣ:ಹಸಿರು

Read All News