ಬೈಲಹೊಂಗಲ : ನಾಡಿನ ಮಹಾತಪಸ್ವಿಗಳಲ್ಲಿ ಶ್ರೀಗುರು ಮಡಿವಾಳೇಶ್ವರರು ತಮ್ಮ ಪವಾಡಗಳ ಮೂಲಕ ಸಮಾಜ ಉದ್ಧರಿಸಿದ ಮಹಾಯೋಗಿಗಳು ಪಟ್ಟಣದ ಶ್ರೀ ಗುರು ಮಡಿವಾಳೇಶ್ವರ ಮಠದಲ್ಲಿ ಅವರ ವೈಭವವನ್ನು ಧಾರ್ಮಿಕ ಕಾರ್ಯಗಳ ಮೂಲಕ ಜನತೆಗೆ ಮುಟ್ಟಿಸಲಾಗುತ್ತಿದ್ದು, ಮಡಿವಾಳೇಶ್ವರ 33ನೇ ಜಾತ್ರಾ ಮಹೋತ್ಸವ ಅಂಗವಾಗಿ ಇಂದು ಜ.8 ರಂದು ಮಹಾರಥೋತ್ಸವ ಸಂಜೆ 4 ಕ್ಕೆ ಪಟ್ಟಣದ ಜವಳಿಖೂಟದಿಂದ ಗಜಪಡೆಯೊಂದಿಗೆ ಜರುಗಲಿದ್ದು, ನಾಡಿನ ವಿವಿಧ ಮಠಾಧೀಶರು, ಸಹಸ್ರಾರು ಭಕ್ತರು ಸಾಕ್ಷಿಯಾಗಲ್ಲಿದ್ದಾರೆ.
ಬೈಲಹೊಂಗಲ ಮಠದ ಶಿವಶರಣೆ, ಮಡಿವಾಳೇಶ್ವರರ ಆರಾದಕರಾದ ತಂಗೆಮ್ಮಾ ತಾಯಿ ಸುಮಾರು 50 ವರ್ಷಗಳ ಕಾಲ ಧಾರ್ಮಿಕ ಕಾರ್ಯಗಳನ್ನು ಮಾಡಿದ್ದು ಇತಿಹಾಸವೆ ಸರಿ. ಜೂನ 15 1987 ರಂದು ಶ್ರೀ ಗುರು ಮಡಿವಾಳೇಶ್ವರರ ಮಠವನ್ನು ಸ್ಥಾಪಿಸಿ, ಈ ಭಾಗದಲ್ಲಿ ಧರ್ಮದ ತಿರುಳನ್ನು
ತಿಳಿಸಿಕೊಟ್ಟಿದ್ದಾರೆ. ನಿತ್ಯ ಪ್ರವಚನ, ಧಾರ್ಮಿಕ ಕಾರ್ಯಗಳಿಂದ ಜನರನ್ನು ಅಧ್ಯಾತ್ಮದತ್ತ ತಿರುಗಿಸಿದ್ದರು. ಶ್ರೀಮಠದಲ್ಲಿ ಮಡಿವಾಳೇಶ್ವರನ ಗದ್ದುಗೆಗೆ ನಿತ್ಯ ಅಭಿಷೇಕ, ಜಾತ್ರಾ ಅಂಗವಾಗಿ ಗಜ ಪಡೆಯೊಂದಿಗೆ ರಥೋತ್ಸವ, ಪುರವಂತರಿಂದ ವೀರಭದ್ರೇಶ್ವರರ
ಸೇವೆ, ಉಚಿತ ವಿವಾಹ, ಧಾರ್ಮಿಕ ಸಮಾರಂಭಗಳು, ಮಹಾ ಪ್ರಸಾದ ಅದ್ದೂರಿಯಾಗಿ ನಡೆಯುತ್ತವೆ. ಅವರ ಧಾರ್ಮಿಕ ಕಾರ್ಯಗಳನ್ನು ಕಂಡ ಪಟ್ಟಣದ ಪುರಸಭೆ ಆಡಳಿತ ಮಂಡಳಿ ಸುಮಾರು 9 ಗುಂಟೆ ಜಾಗೆಯನ್ನು ನೀಡಿದ್ದು, ಆ ಸ್ಥಳದಲ್ಲೂ ಈಗ ಶಂಭೋಲಿಂಗ
ದೇವಸ್ಥಾನ ನಿರ್ಮಾಣವಾಗಿದ್ದು, ಶಂಭೋಲಿಂಗ, ಗಂಗಾಮಾತಾ, ಈಶ್ವರ, ನಾಗದೇವರ ವಿಗ್ರಹಗಳನ್ನು ನಿರ್ಮಿಸಲಾಗಿದೆ. ಶ್ರೀ ಮಠದಲ್ಲಿಮಡಿವಾಳೇಶ್ವರರ ಗದ್ದುಗೆ, ಬಸವೇಶ್ವರರ, ಚನ್ನಬಸವೇಶ್ವರರ ಮೂರ್ತಿ, ಆಂಜನೆಯ, ಅಕ್ಕಮಹಾದೇವಿ, ಲಿಂ. ತಂಗೇಮ್ಮಾ ತಾಯಿಯ ಮೂರ್ತಿಗಳು ದಿನನಿತ್ಯ ಭಕ್ತರಿಂದ ಪೂಜೆಗೊಳಪಡುತ್ತಿವೆ.
ತಂಗೆಮ್ಮಾ ತಾಯಿಯವರು ನವ್ಹಂಬರ 10 2012 ರಂದು ಲಿಂಗೈಕ್ಯರಾದ ನಂತರ ಇಂದಿನ ಗುರು ಮಡಿವಾಳೇಶ್ವರಮಠದ
ಪೀಠಾಧಿಕಾರಿಯಾಗಿರುವ ಮಡಿವಾಳೇಶ್ವರ ಸ್ವಾಮೀಜಿ ಅವರು ಶಿವಯೋಗ ಮಂದಿರದಲ್ಲಿ ವಿದ್ಯಾಭ್ಯಾಸ, ಬೆಂಗಳೂರಿನ ಪ್ರಸಿದ್ದ ಜಯೇಂದ್ರಪುರಿ ಶ್ರೀಗಳ ರಾಜರಾಜೇಶ್ವರಿ ಮಠದಲ್ಲಿ ಸಂಸ್ಕ್ರತ ಅಧ್ಯಯನ ಪೀಠದಲ್ಲಿ ಸಂಸ್ಕ್ರತ ಪಾಂಡಿತ್ಯ ಪಡೆದು ಆದ್ಯಾತ್ಮದ ಮೂಲಕ ಸಮಾಜದ ಸುಧಾರಣೆಗೆ ಶ್ರಮಿಸುತ್ತಿದ್ದಾರೆ.
ತಂಗೆಮ್ಮಾ ತಾಯಿ ಅವರು ಹಾಕಿಕೊಟ್ಟ ಅಡಿಪಾಯದ ಮೇಲೆ ಗರಗದ ಚನ್ನಬಸವ ಸ್ವಾಮೀಜಿ ಹಾಗೂ ನಾಡಿನ ಹಿರಿಯ ಮಠಾಧೀಶರ ಮಾರ್ಗದರ್ಶನದಲ್ಲಿ ಎಲ್ಲ ದಾರ್ಮಿಕ ವಿಧಾಯಕ ಕಾರ್ಯ, ಜಾತ್ರಾ ಮಹೋತ್ಸವ ಅಲ್ಲದೆ ತಂಗೆಮ್ಮಾತಾಯಿಯವರ ಜಯಂತಿ ಕಾರ್ಯಕ್ರಮಗಳನ್ನು ಕೈಕೊಂಡು ಮಠದ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ.
ನೂತನ ಮಠದ ನಿರ್ಮಾಣ- ಭಕ್ತರ ತನು, ಮನ, ಧನದಿಂದ ಅರಬಾಂವಿ ಕಲ್ಲಿನಲ್ಲಿ ವಿಭಿನ್ನ ಆಕರ್ಷಕ ಚಿತ್ತಾರಗಳಲ್ಲಿ ಸುಮಾರು 2 ಕೋಟಿ ವೆಚ್ಚದ ಶ್ರೀ ಮಠದ ಕಟ್ಟಡ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ಮುಂದಿನ ದಿನಮಾನಗಳಲ್ಲಿ ಭಕ್ತರ ಆದ್ಯಾತ್ಮ ಕೇಂದ್ರವಾಗಲಿದೆ.
ವರದಿ : ರವಿಕಿರಣ್ ಯಾತಗೇರಿ