ಅಥಣಿ : ತಾಲೂಕಿನ ಜನವಾಡ ಗ್ರಾಮದ ರಸ್ತೆ ಮಧ್ಯದಲ್ಲಿ ಆಯತಪ್ಪಿ ಡಾಕ್ಟರ್ ಸುಮಾರು 20 ಅಡಿ ಆಳಕ್ಕೆ ಉರುಳಿದ ದುರ್ಘಟನೆ ಸಂಭವಿಸಿದೆ.
ಹಿಪ್ಪರಗಿ ಬ್ರಿಜ್ ನಿಂದ ಜನವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯ ಮಾರ್ಗದಲ್ಲಿ ಮಳೆಯಾದ ಕಾರಣ ಟೈರ್ ಜಾರಿ ಈ ದುರ್ಘಟನೆ ಸಂಭವಿಸಿದೆ.
ಜನವಾಡ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ವ್ಯವಸ್ಥಿತ ರಸ್ತೆ ಇಲ್ಲದ ಕಾರಣ ವಾರಕ್ಕೊಂದು ಅವಾಂತರ ಸೃಷ್ಟಿಯಾಗುತ್ತಿದ್ದು ಈ ಕುರಿತು ಜನಪ್ರತಿಗಳ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ.
ಅಥಣಿ ಶಾಸಕ ಲಕ್ಷ್ಮಣ ಸವದಿ ತವರು ಕ್ಷೇತ್ರದಲ್ಲಿ ಅವೆವಸ್ಥೆ ಕಂಡು ಬಂದಿದ್ದು 6000 ವಾಸಿಸೊ ಜನರಿರುವ ಈ ಗ್ರಾಮಕ್ಕೆ ಒಂದು ಬಸ್ ಬರಲ್ಲ ಅನ್ನೋದು ನಿಜಕ್ಕೂ ದುರಂತ. ಗ್ರಾಮದಲ್ಲಿ ಆಸ್ಪತ್ರೆ, ಪಶು ಆಸ್ಪತ್ರೆಯು ಇಲ್ಲದೆ ಇರುವ ಕಾರಣ ಜನರು ಪ್ರತಿ ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ. ಆದಷ್ಟು ಬೇಗ ಜನಪ್ರತಿನಿಧಿಗಳು ಜನವಾಡ ಗ್ರಾಮಕ್ಕೆ ವ್ಯವಸ್ಥಿತ ರಸ್ತೆ ಕಲ್ಪಿಸಿ ಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ವರದಿ : ರಾಹುಲ್ ಮಾದರ