ಬೆಳಗಾವಿಯಲ್ಲಿ ಪುನೀತ್ ರಾಜ್‍ಕುಮಾರವರಿಗೆ ನಮನ

  • 26 Dec 2023 , 12:59 AM
  • Belagavi
  • 137

ಬೆಳಗಾವಿ : ಡಾ. ಪುನೀತ್ ರಾಜಕುಮಾರ ಇಂದಿಗೆ ಅಗಲಿ ಬರೋಬರಿ ಒಂದು ವರ್ಷವಾಗಿದೆ. ಈ‌ ಹಿನ್ನೆಲೆಯಲ್ಲಿ ಅವರ ಪ್ರಥಮ ಪುಣ್ಯ ಸ್ಮರಣೆಯ‌ ಅಂಗವಾಗಿ ಬೆಳಗಾವಿ ನಗರದ ಮಠಗಲ್ಲಿಯ ಚಾಣಕ್ಯ ಯುವಕ‌ ಮಂಡಳದಿಂದ ಚನ್ನಮ್ಮ ವೃತ್ತದಲ್ಲಿ ತೆರೆದ ವಾಹನದಲ್ಲಿ ಶೃದ್ಧಾಂಜಲಿ ಸಲ್ಲಿಸಲಾಯಿತು.
ಡಾ.ರಾಜಕುಮಾರ ಅಭಿಮಾನಿಗಳ ಸಂಘ ಮತ್ತು ಚಾಣಕ್ಯ ಯುವಕ ಮಂಡಳದಿಂದ ನಗರದ ಮಠಗಲ್ಲಿಯಿಂದ ತೆರೆದ ವಾಹನದಲ್ಲಿ ಡಾ. ಪುನೀತ್ ರಾಜಕುಮಾರ ಭಾವ ಚಿತ್ರವಿಟ್ಟು ಪುನೀತ್ ರಾಜಕುಮಾರ ಅಭಿನಯದ ಚಲನಚಿತ್ರದ ಹಾಡುಗಳನ್ನು ಹಾಕಿ ಪುನೀತ್ ರಾಜಕುಮಾರ ಅವರಿಗೆ ಗೌರವ ಸೂಚಿಸಿದರು.

ನಗರದ ಚನ್ನಮ್ಮ ವೃತ್ತದಲ್ಲಿ ಬಿಜೆಪಿ ಗ್ರಾಮೀಣ‌ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಪುನೀತ್ ಭಾವಚಿತ್ರಕ್ಕೆ ಶೃದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಜಯ ಪಾಟೀಲ, ಒಂದು ವರ್ಷದ ಹಿಂದೆ ಕರುನಾಡಿನ ಹೆಮ್ಮೆಯ ನಾಯಕ, ಚಲನ‌ ಚಿತ್ರ ನಟ ಪುನೀತ್ ರಾಜಕುಮಾರ ಅಗಲಿ ಇಂದಿಗೆ ಒಂದು ವರ್ಷವಾಗಿದೆ. ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲಿಯೂ ಸಾಮಾಜಿಕ ಸೇವೆ ಸಲ್ಲಿಸಿ ಮನೆ ಮನೆಯಲ್ಲಿಯೂ ಎಲ್ಲರ ಮನದಲ್ಲಿ ಹಚ್ಚು ಹಸಿರಾಗಿ ಉಳಿದಿದ್ದಾರೆ ಎಂದರು.

ಪುನೀತ್ ರಾಜಕುಮಾರ ಅವರು ಮೃತಪಟ್ಟ ಬಳಿಕ ಅವರು ಮಾಡಿರುವ ಸಾಮಾಜಿಕ ಕಳಕಳಿಯ ಕೆಲಸ ಕಂಡು ಬಂತು. ಮಾನವ ಜಾತಿಗೆ ಆದರ್ಶ ಅವರು. ಬೆಳಗಾವಿಯ ಹಳೆಯ ಕನ್ನಡ ಸಂಘಟನೆ ಚಾಣಕ್ಯ ಯುವಕ ಮಂಡಳದ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

Read All News