ಬೈಲಹೊಂಗಲ : ಅತೀವ ವಿಶ್ವಾಸ ನಂಬಿಕೆ, ನಿಸ್ವಾರ್ಥದ ಸಾರ್ಥಕ ಬದುಕು ಸಿಗುವದು ಗೆಳೆತನದಲ್ಲಿ ಮಾತ್ರ. ಭೇದ ಭಾವವಿಲ್ಲದ ಜಾತಿ ಜಗಳವಿಲ್ಲದ ಜೀವನ ಅಂದ್ರೆ ಅದು ಸಿಗುವದು ಗೆಳೆಯ ಗೆಳೆತಿಯರಲ್ಲಿ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಸಮಾನ ವಿದ್ಯಾಭ್ಯಾಸ ಪಡೆದು ಒಂದೇ ತರಗತಿಯಲ್ಲಿ ವ್ಯಾಸಂಗ ಮಾಡಿ ಕಾಲ ಕಳೆದಂತೆ ದೂರವಾಗುವದು ಸಹಜ.
ಆದರೆ ಕೆಲವೊಂದು ಇದಕ್ಕೆ ವ್ಯತಿರಿಕ್ತವಾಗುವ ಸನ್ನಿವೇಶ ಎನ್ನುವಂತೆ ಕಳೆದ 20 ವರ್ಷಗಳ ಹಿಂದೆ ಪದವಿ ಪೂರೈಸಿ ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಇರುವ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ಶಿಕ್ಷಣ ಸಂಸ್ಥೆಯ ಸನ್ 2004-05 ನೇ ಸಾಲಿನ ಅಂತಿಮ ವರ್ಷ ಬಿಕಾಂ ಕೆಲ ಸ್ನೇಹಿತರು ಅಂದಿನಿಂದ ಇಂದಿನವರೆಗೂ ಸಮೂಹ ಮಾಧ್ಯಮದ ಸಹಾಯದಿಂದ ಪ್ರತಿಯೊಬ್ಬರೂ ಒಟ್ಟಿಗೆ ಇದ್ದು ಪ್ರತಿದಿನ ತಮ್ಮ ಕುಷಲೋಪರಿ, ದಿನದನಿತ್ಯದ ಚಟುವಟಿಕೆಗಳ ಕುರಿತು ಚರ್ಚೆ ಮಾಡುತ್ತಾರೆ.
ಸುಮಾರು 15 ಕ್ಕೂ ಹೆಚ್ಚು ಸ್ನೇಹಿತರ ಬಳಗವಿರುವ ವಾಟ್ಸಾಪ್ ಗ್ರುಪದ ಮುಕಾಂತರ ಚರ್ಚೆ ನಡೆಸುವ ಇವರು ತಾವಿರುವ ಪ್ರದೇಶಗಳಲ್ಲಿ ದೇಶಿಯ ಹಬ್ಬಗಳನ್ನು ಆಚರಿಸುವ ಬಗೆ, ವಿದೇಶದಲ್ಲಿ ಭಾರತೀಯ ಹಬ್ಬ ಹರಿದಿನಗಳ ಕುರಿತು ಸಂಭಾಷಣೆ ನಡೆಸುತ್ತಾರೆ.
ವರ್ಷದ ಕೊನೆಯ ತಿಂಗಳಲ್ಲಿ ಸೇರುವ ಈ ಸ್ನೇಹಿತರ ಬಳಗ ಗೆಟ್ ಟು ಗೆದರ್ ಹೆಸರಿನಲ್ಲಿ ಒಂದು ಜಾಗದಲ್ಲಿ ಸೇರಿ ಸಂಭ್ರಮಿಸುತ್ತಾರೆ.
ಇಂತಹ ಶಿಷ್ಯ ಬಳಗ ಕಂಡ ಇವರ ಪ್ರಾಧ್ಯಾಪಕರು ಕೂಡಾ ಹಲವು ಸಲ ಹಿಂಗ ಹೇಳಿದಾರ "ಇದ್ದರೆ ನಿಮ್ಮಂತಹ ಗೆಳ್ಯಾರ ಗೆಳತ್ಯಾರ ಇರಬೇಕ ನೋಡ್ರಿಪಾ" ಅಂತ
ಅನುರಾಧಾ, ಸುನೀಲ, ಕವಿತ, ಕಿರಣ, ಪ್ರವೀಣ್, ಸತೀಶ, ಬಸವರಾಜ, ಪವಿತ್ರ, ಹೇಮಾ, ತೇಜಸ್ವಿನಿ, ರವಿಕಿರಣ್, ಸುವರ್ಣ, ಶ್ರೀದೇವಿ, ಅಶ್ವಿನಿ, ರವೀಂದ್ರ, ರಶ್ಮೀ, ದೀಪಾ ಈ ತರಾ ಗ್ರುಪ್ ಮಾಡಿಕೊಂಡಿದ್ದು ಇವರ ಸ್ನೇಹ ಬಳಗಕ್ಕೆ ಒಂದು ಸೆಲ್ಯೂಟ್ ಇರಲಿ...
ನಾವ ದೂರದ ದೇಶದಾಗ ಇದ್ರೂ ನಮ್ಮ ದೇಶಿಯ ಸಂಸ್ಕೃತಿ ಬಿಟ್ಟು ಕೊಡಾಂಗಿಲ್ಲ, ನಾವ ಕಲಿತ ಶಾಲೆ, ನಮ್ಮ ಕಾಲೇಜು ಅದರಾಗಿನ ಗೆಳೆಯ ಗೆಳತಿಯರ ಅನುಬಂಧ ಮರಿಯೋಕೆ ಸಾಧ್ಯವಿಲ್ಲ. ನಾವು ಎಲ್ಲೆ ಇದ್ದರೂ ನಮ್ಮ ಪರಂಪರೆ ನಮಗೆ ಹೆಮ್ಮೆ .
ಕವಿತಾ ಮತ್ತು ಅನುರಾಧಾ ವಿದೇಶದಲ್ಲಿ ನೆಲೆಸಿರುವ ಸ್ನೇಹಿತರು.
ವರದಿ : ರವಿಕಿರಣ್ ಯಾತಗೇರಿ