ರಾಜ್ಯದಲ್ಲಿರುವದು ತುಘಲಕ ಸರ್ಕಾರ, ಹಾಲಿನ ದರ ಹೆಚ್ಚಳ ಪ್ರತಿಪಕ್ಷ ನಾಯಕ ಆರ್. ಅಶೋಕ ಆಕ್ರೋಶ

  • shivaraj bandigi
  • 25 Jun 2024 , 12:40 PM
  • Belagavi
  • 7166

ಬೆಳಗಾವಿ : ಲೋಕಸಭೆ ‌ಚುನಾವಣೆಯಲ್ಲಿ ಕಾಂಗ್ರೆಸ್ ಒಂದಂಕಿ ಸ್ಥಾನ ಪಡೆದದಿದ್ದರಿಂದ 

 ಕೋಪಗೊಂಡ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮನ ಬಂದಂತೆ ಬೆಲೆ ಏರಿಕೆ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದರು. 

ಬೆಲೆ ಏರಿಕೆಯ ವಿರುದ್ದ ಮಾಧ್ಯಮದೊಂದಿಗೆ ಅವರು ಮಾತನಾಡಿ, ರಾಜ್ಯದಲ್ಲಿ ಇನ್ನು ಮುಂದೆ ಅಭಿವೃದ್ಧಿ ಆಗುವ ಲಕ್ಷಣಗಳು ಕಾಣಸುತ್ತಿಲ್ಲ. ಕೇವಲ ಬೆಲೆ ಏರಿಕೆ ಮಾತ್ರ ಇರುತ್ತದೆ. 

ಇತ್ತಿಚೆಗೆಷ್ಟೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡಿ ಬಡ ಜನರಿಗೆ ದ್ರೋಹ ಮಾಡಿರುವ ಸರ್ಕಾರ 

ಈಗ ಹಾಲಿನ ದರವನ್ನು 2 ರೂ ಹೆಚ್ಚಳ ಮಾಡಿದೆ, 

ಕಳೆದ ವರ್ಷವೂ ಕೂಡಾ ಹಾಲಿನ ದರವನ್ನು 3 ರೂ ಏರಿಕೆ ಮಾಡಿದ್ದರು. ಮಕ್ಕಳು ಕುಡಿಯುವ ಹಾಲಿನ ದರವನ್ನೂ ಈ ಸರ್ಕಾರ ಹೆಚ್ಚಿಸಿದೆ ಎಂದು ಗಂಭೀರವಾಗಿ ಆರೋಪಿಸಿದರು. 

ಹಗಲು ರಾತ್ರಿ ಕಷ್ಟಪಟ್ಟು ದುಡಿಯುವ ಮನೆ ಯಜಮಾನ ಕುಡಿಯುವ ಆಲ್ಕೊಹಾಲ್ ದರವನ್ನೂ ಹೆಚ್ಚಿಸಲಾಗಿದೆ ಈ ರೀತಿ ಪ್ರತಿಯೊಂದರ ಬೆಲೆ ಏರಿಕೆ ಮಾಡಿ ಸರ್ಕಾರ ಯಾವ ಸಾಧನೆ ಮಾಡಲು ಹೊರಟಿದೆ ಎಂದರು.

ನಾವು ಅಧಿಕಾರಕ್ಕೆ ಬಂದ್ರೆ ಎಲ್ಲ ದರಗಳನ್ನು ಇಳಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳ್ತಿದ್ರು ಈಗ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವೇ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಸಿದ್ದರಾಮಯ್ಯ ನಿನಗೆ ಎಷ್ಟು ನಾಲಿಗೆ ಇವೆ ಎಂದು ಏಕವಚನದಲ್ಲೇ ಹರಿಹಾಯ್ದ ಅವರು ಸಿದ್ದರಾಮಯ್ಯನವರೇ ನಿನಗೆ ಮಾನಮರ್ಯಾದೆ ಇದೆಯೇ? ಎಂದು ಪ್ರಶ್ನಿಸಿ, ಮಕ್ಕಳು ಕುಡಿಯುವ ಹಾಲಿನ ದರ ಹೆಚ್ಚಳ ಮಾಡಿದ್ದೀರಿ, ಜನರ ಶಾಪ ಸರ್ಕಾರಕ್ಕೆ ತಟ್ಟುತ್ತೆ ಎಂದರು. 

ಕೆಲವೇ ದಿನಗಳಲ್ಲಿ ನಾಲ್ಕು ರಾಜ್ಯಗಳ ಚುನಾವಣೆ ನಡೆಯಲಿದೆ ಚುನಾವಣೆಗಾಗಿ ರಾಹುಲ್ ಗಾಂಧಿಗೆ ಕಪ್ಪ ಕಾಣಿಕೆ ಕೋಡಲು ಯೋಜನೆ ರೂಪಿಸಿ ರಾಜ್ಯದಲ್ಲಿ ಈ ರೀತಿ ಬೆಲೆ ಏರಿಕೆ ಮಾಡಿ ಲೂಟಿ ಮಾಡುತ್ತಿದ್ದಾರೆ ಎಂದು ಅಪಾದಿಸಿದರು. 

ರಾಜ್ಯದಲ್ಲಿರುವುದು ಅಲಿಬಾಬಾ ಮತ್ತು 40 ಕಳ್ಳರ ಸರ್ಕಾರ ಜನರ ಶಾಪ ನಿಮಗೆ ತಟ್ಟುತ್ತೆ, ನೀವೆಲ್ಲರೂ ಸರ್ವನಾಶ ಆಗ್ತಿರಿ, ನುಡಿದಂತೆ ನಡೆದಿದ್ದೇವೆ ಎನ್ನುತ್ತಿರಿ, ಈಗ ಬೆಲೆ ಏರಿಕೆ ಮಾಡುತ್ತಿದ್ದೀರಿ ಎಲ್ಲಿ ನುಡಿದಂತೆ ನಡಿತಾ ಇದಿರಿ ಎಂದರು. 

ಸರ್ಕಾರದ ಬೆಲೆ ಏರಿಕೆ ನೀತಿ ಖಂಡಿಸಿ, ಜುಲೈ ಮೂರು ಇಲ್ಲವೇ ನಾಲ್ಕಕ್ಕೆ ವಿಧಾನಸಭೆಯಿಂದ ಸಿಎಂ ಮನೆಗೆ ಮುತ್ತಿಗೆ ಹಾಕಿ, ಸಿದ್ದರಾಮಯ್ಯ ಮನೆಯಿಂದ ಆಚೆಗೆ ಬರಬಾರದು, ಹಾಗೆ ದಿಗ್ಭಂಧನ ಹಾಕತೇವಿ ಎಂದರು. 

ಬಡವರಿಗೆ 2 ಸಾವಿರ ಕೊಟ್ಟು, ತೆರಿಗೆ ರೂಪದಲ್ಲಿ ನಾಲ್ಕು ಸಾವಿರ ವಸೂಲಿ ಮಾಡ್ತಿದ್ದಾರೆ

ಬಡವರ ರಕ್ತವನ್ನು ತಿಗಣಿ, ಸೊಳ್ಳೆ ಸಿದ್ದರಾಮಯ್ಯ, ಡಿಕೆಶಿ ಹೀರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Read All News