ಬೈಲಹೊಂಗಲ : ಅಂಗವೈಕಲ್ಯ ಮುಕ್ತ, ಸದೃಢ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಪ್ರತಿವರ್ಷ ಪೋಲಿಯೋ ಹನಿ ಮಕ್ಕಳಿಗೆ ನೀಡುತ್ತಾ ಬಂದಿದ್ದು ಪಟ್ಟಣದ ವಿವಿದೆಡೆ ಬೂತಗಳನ್ನು ಸ್ಥಾಪಿಸುವ ಮೂಲಕ ತಾಲೂಕಾ ಆರೋಗ್ಯ ಇಲಾಖೆ 5 ವರ್ಷ ಒಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ವ್ಯವಸ್ಥೆ ಕಲ್ಪಿಸಿದೆ.
ಪಟ್ಟಣದ ತುಂಬೆಲ್ಲಾ ಚಿಕ್ಕಮಕ್ಕಳಿಗೆ ಅವರ ತಂದೆ ತಾಯಂದಿರು ಪೋಲಿಯೋ ಹಾಕಿಸುವ ದೃಶ್ಯ ಸಾಮಾನ್ಯವಾಗಿತ್ತು.
ಗೃಹಿಣಿ ಅಕ್ಷತಾ ತನ್ನ ಮಗ ಆರ್ಯನಗೆ ಪೋಲಿಯೋ ಹಾಕಿಸಿ, ಮಾಧ್ಯಮದೊಂದಿಗೆ ಮಾತನಾಡಿ, ಆರೋಗ್ಯ ಇಲಾಖೆ ಪೋಲಿಯೋ ಮುಕ್ತ ಭಾರತ ನಿರ್ಮಾಣ ಮಾಡಲು ಹಗಲಿರುಳು ಶ್ರಮಿಸುತ್ತಿದ್ದು, ಯಾವದೇ ಭಯ ಪಡದೆ ಪ್ರತಿಯೊಬ್ಬರು ತಮ್ಮ ಐದು ವರ್ಷ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಹಾಕಿಸುವ ಮೂಲಕ ಆರೋಗ್ಯವಂತ ಭಾರತ ನಿರ್ಮಾಣಕ್ಕೆ ಸಹಕರಿಸಬೇಕೆಂದರು.
ವರದಿ : ರವಿಕಿರಣ್ ಯಾತಗೇರಿ