ಅಥಣಿ : ತಾಲೂಕಿನ ಸಂಬರಗಿ ಗ್ರಾಮದಲ್ಲಿ ನಡೆದ ಅದ್ದೂರಿ ಆಚರಣೆಗೆ ನೂರಾರು ಸಂಖ್ಯೆಯಲ್ಲಿ ಭಾಗಿಯಾದ ಮಹಿಳಾ ಮಣಿಗಳ ಕುಂಭಮೇಳ ಸಾಕ್ಷಿಯಾಯಿತು.
ಸುಮಾರು ಎರಡು ದಿನಗಳಿಂದ ನಡೆದ ಶ್ರೀ ರೇಣುಕಾ ಎಲ್ಲಮ್ಮ ದೇವಿ ಮೂರ್ತಿ ಪ್ರಾಣ ಪ್ರತಿಷ್ಠಾನ ಹಾಗೂ ಕಳಸಾರೋಹಣ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತಘನ ಆಗಮಿಸಿ ತಾಯಿಯ ಆಶೀರ್ವಾದ ಪಡೆದು ಪುನೀತರಾದರು.
ಇಪ್ಪತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ದೇವಸ್ಥಾನದ ಮಹಾಕಾರ್ಯಕ್ಕೆ ಕಟ್ಟಡ ಸಹಾಯಾರ್ಥವಾಗಿ ದೇಣಿಗೆ ನೀಡಿದ ಸದ್ಭಕ್ತರಿಗೆ ಶ್ರೀ ಎಲ್ಲಮ್ಮ ದೇವಿ ಜಾತ್ರಾ ಕಮಿಟಿ ವೇದಿಕೆ ನಿರ್ಮಿಸಿ ಸನ್ಮಾನಿಸಲಾಯಿತು.