ಬೆಳಗಾವಿ : ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ಗುರುವಾರ ಸುವರ್ಣ ಸೌಧದ ಎದುರಿನ ಪ್ರತಿಭಟನಾ ವೇದಿಕೆಯಲ್ಲಿ ಗ್ರಾಮ ಪಂಚಾಯತ ಗ್ರಂಥಪಾಲಕರು ಹಾಗೂ ಮೇಲ್ವಿಚಾರಕ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು.
ಗ್ರಂಥಪಾಲಕರಿಗೆ ಸೇವಾ ಭದ್ರತೆ, ದಿನಪತ್ರಿಕೆಗಳ ಬಿಲ್ಲ ಹೆಚ್ಚಿಸುವುದು ಹಾಗೂ ನಗರ ಗ್ರಂಥಾಲಯಗಳಂತೆ ಎಲ್ಲ ದಿನಪತ್ರಿಕೆಗಳನ್ನು, ನಿಯತಕಾಲಿಕೆಗಳನ್ನು ಪೂರೈಕೆ ಮಾಡಬೇಕು. ಶುಚಿಗಾರ ಭತ್ಯೆಯನ್ನು ಹೆಚ್ಚಿಸಬೇಕೆಂದು ಪ್ರತಿಭಟನಾಕಾರರು ಸರ್ಕಾರವನ್ನು ಆಗ್ರಹಿಸಿದರು.