ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ರಾಯಣ್ಣ ಮೂರ್ತಿ ಸ್ಥಾಪಿಸುವಂತೆ ಒತ್ತಾಯ

  • shivaraj bandigi
  • 15 Jan 2024 , 7:02 AM
  • Belagavi
  • 435

ಬೆಳಗಾವಿ

ಪ್ರಾದೇಶಿಕ ಆಯುಕ್ತರ ಕಚೇರಿ ಮುಂಭಾಗದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸುವಂತೆ ಒತ್ತಾಯಿಸಿ ಸೋಮವಾರ ಬೆಳಗಾವಿ ಕನ್ನಡ ಸಂಘಟನೆಗಳ ಒಕ್ಕೂಟ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬೆಳಗಾವಿಯಲ್ಲಿ ಹಳೆ ಜಿಪಂ ಕಚೇರಿಯ ಮುಂಭಾಗದಲ್ಲಿ ದಶಕಳ ಹಿಂದೆಯೇ ಏಕೈಕ ಸಂಗೊಳ್ಳಿ ರಾಯಣ್ಣನ ಪ್ರತಿನೆ ಸ್ಥಾಪನೆಯಾಗಿದೆ. ಈಗ ಅದು ಪ್ರಾಮುಖ್ಯತೆಯನ್ನು ಕಳೆದುಕೊಂಡಿದೆ. ಸರಕಾರ, ಗಣ್ಯರಿಂದ ಹಾಗೂ ಸಂಘ, ಸಂಸ್ಥೆಗಳಿಂದ ರಾಯಣ್ಣನ ಮೂರ್ತಿಗೆ ಗೌರವ ಸಿಗುತ್ತಿಲ್ಲ ಎಂದು ದೂರಿದ್ದಾರೆ.

ಚನ್ನಮ್ಮ ವೃತ್ತದಿಂದ ಸಂಗೊಯ ರಾಯಣ್ಣನ ವೃತ್ತದ ವರೆಗೆ‌ ಸಂಗೊಳ್ಳಿ ರಾಯಣ್ಣನ ರಸ್ತೆ ಎಂದು ನಾಮಕರಣಗೊಂಡು ಹಲವಾರು ದಶಕಗಳೇ ಕಳೆದಿವೆ. ಈ ರಸ್ತೆಯ ಪಕ್ಕದಲ್ಲಿ ರಾಯಣ್ಣನ ಪ್ರತಿಮೆಯನ್ನು ಜಿಲ್ಲಾಡಳಿತ ಕಚೇರಿಯ ಹಿಂಬದಿಯಲ್ಲಿ ಸ್ಥಾಪಿಸಿರುವುದು ಖಂಡನೀಯ ಎಂದರು.

Read All News