ಬೈಲಹೊಂಗಲ : ಕರ್ನಾಟಕ ಪರಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ(ರಿ) ದಿಂದ ಶುಕ್ರವಾರ ಬೈಲಹೊಂಗಲ ತಹಶೀಲ್ದಾರ ಕಚೇರಿಗೆ ಸಂಘಟನೆಯ ಪದಾಧಿಕಾರಿಗಳು ತಹಶೀಲ್ದಾರ ರವರಿಗೆ ಮನವಿ ಸಲ್ಲಿಸಿದರು.
ಬೈಲಹೊಂಗಲ ತಾಲೂಕಿನ ತಹಶೀಲ್ದಾರ ಕಚೇರಿ ಪಕ್ಕದಲ್ಲಿ ಇರುವ ಖಾಲಿ ಸ್ಥಳದಲ್ಲಿ ರಾಜ ವೀರ ಮದಕರಿ ನಾಯಕರ ವೃತ್ತ ಮತ್ತು ಅಲ್ಲಿ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಮನವಿ ಮಾಡಿ ಕನ್ನಡಿಗ ರಾಜ ವೀರ ಮದಕರಿಯವರ ಇತಿಹಾಸ ಬಹುದೊಡ್ಡದು ಅಂತವರ ಪುತ್ತಳಿ ವೃತ್ತಗಳು ಬೈಲಹೊಂಗಲ ತಾಲೂಕಿನಲ್ಲಿ ಎಲ್ಲಿಯೂ ಇಲ್ಲದಿರುವುದು ಬೇಸರದ ಸಂಗತಿ ಇನ್ನುಮುಂದೆ ಈ ರೀತಿ ಕಡೆಗಣಿಸದೆ ಬೈಲಹೊಂಗಲ ನಲ್ಲಿ ಆದಷ್ಟು ಬೇಗ ರಾಜ ವೀರ ಮದಕರಿ ನಾಯಕರ ವೃತ್ತ ಮತ್ತು ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಮನವಿ ಮಾಡಿದರು.
ವಾಲ್ಮೀಕಿ ಸಮುದಾಯದ ಎಸ್.ಟಿ ಪ್ರಮಾಣ ಪತ್ರಗಳನ್ನು ನಿಜವಾದ ವಾಲ್ಮೀಕಿ ಸಮುದಾಯದ ಜನರಿಗೆ ನೀಡಬೇಕು. ಅದನ್ನು ಬಿಟ್ಟು ಬೇರೆ ಯಾರಿಗೂ ಎಸ್. ಟಿ ಪ್ರಮಾಣ ಪತ್ರವನ್ನು ನಿಡಬಾರದು ಮತ್ತು ಯಾರು ಸುಳ್ಳು ಜಾತಿ/ ನಕಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದಿದ್ದಾರೊ ಅಂತವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ವಾಲ್ಮೀಕಿ ಸಮುದಾಯದ ಜನರಿಗೆ ಶಿಕ್ಷಣದಲ್ಲಿ ಉದ್ಯೋಗದಲ್ಲಿ ಹುದ್ದೆಗಳ ಬಡ್ತಿಯಲ್ಲಿ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಮತ್ತು
ನಕಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದವರು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ . ಇಂತವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಸಮಸ್ತ ವಾಲ್ಮೀಕಿ ಸಮುದಾಯದ ಜನರು ಅಂತಹ ನಕಲಿಗಳ ಮನೆಗೆ ಮತ್ತು ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಕೊಡುತ್ತಿರುವ ಅಧಿಕಾರಿಗಳ ಮನೆಗೆ ನುಗ್ಗಿ ಬುದ್ದಿಕಲಿಸುತ್ತೇವೆ ಎಂದು ರಾಜ್ಯಾಧ್ಯಕ್ಷರಾದ ಮಹೇಶ ಶಿಗೀಹಳ್ಳಿ ರವರು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಬದಲ್ಲಿ ರಾ.ಉಪಾಧ್ಯಕ್ಷ ಶಿವಾ ಮಹೇಶ ನಾಯಕ, ಬೆಳಗಾವಿ ಪದಾಧಿಕಾರಿಗಳು, ಜಿಲ್ಲಾ ಉಪಾಧ್ಯಕ್ಷ ರಾಮ್ ಪುಜಾರಿ, ಗ್ರಾಮೀಣ ಅಧ್ಯಕ್ಷ ಲಕ್ಷ್ಮಣ ಬಾಗಡಿ, ಬೈಲಹೊಂಗಲ್ ತಾಲೂಕಿನ ಪದಾಧಿಕಾರಿಗಳು ತಾಲೂಕು ಅಧ್ಯಕ್ಷ ಮಂಜು ತಳವಾರ, ಪ್ರಧಾನ ಕಾರ್ಯದರ್ಶಿ ದ್ಯಾಮಣ್ಣ, ಉಪಾಧ್ಯಕ್ಷ ಕೃಷ್ಣ ಸಿದ್ರಮಪ್ಪಗೊಳ ತ ಹಲವಾರು ಪದಾಧಿಕಾರಿಗಳು
ಕಾರ್ಯಕರ್ತರು ಸದಸ್ಯರು ಉಪಸ್ಥಿರಿದ್ದರು.