ವೀರಶೈವ, ಬ್ರಾಹ್ಮಣ ಮಠಗಳು ಜಾತಿ ಮೀರಿ ಕಾರ್ಯ ಮಾಡುತ್ತಿವೆ : ಹುಕ್ಕೇರಿ ಶ್ರೀ

  • shivaraj bandigi
  • 15 Jan 2024 , 10:35 AM
  • Belagavi
  • 602

ಬೆಳಗಾವಿ :

ವೀರಶೈವ ಮಠ ಹಾಗೂ ಬ್ರಾಹ್ಮಣ ‌ಮಠ ಜಾತಿಯನ್ನು‌ ಮೀರಿ ಕಾರ್ಯವನ್ನು ಮಾಡುತ್ತಿವೆ. ಇಂಥ ಸಂದರ್ಭದಲ್ಲಿ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಮಠಾಧೀಶ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗೆ ಗೀತಾಭಿಯಾನಾರ್ಣವ ಪ್ರಶಸ್ತಿ ನೀಡುತ್ತಿರುವುದು ಅಭಿಮಾನದ ಸಂಗತಿ ಎಂದು ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಮಂಗಳವಾರ ಇಲ್ಲಿನ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಗುರುಶಾಂತೇಶ್ವರ ಸಂಸ್ಥಾನದಲ್ಲಿ ಶ್ರೀಮಠದಿಂದ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಮಠಾಧೀಶ ಶ್ರೀಮದ್ 

ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರಿಗೆ ಗೀತಾಭಿಯಾರ್ಣವ ಬಿರುದಾಂಕಿತ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು. 

ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಮಠಾಧೀಶ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ಭಗವದ್ಗೀತೆಯ ಅಭಿಯಾನ ಕರ್ನಾಟಕದ ತುಂಬ ಅಭಿಮಾನ ಮಾಡುವ ಮೂಲಕ ಮನೆ ಮಾತಾಗಿದ್ದಾರೆ. ಶ್ರೀಗಳು ನಮ್ಮ ಸನಾತನ ಧರ್ಮದ ಬಗ್ಗೆ ಸಮಾಜಕ್ಕೆ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದರು.

ಸಾಗರೋಪಾದಿಯಲ್ಲಿ ಕಳೆದ 2007 ರಲ್ಲಿ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದರು. ಈಗ ಮತ್ತೆ ಆ ಕಾರ್ಯವನ್ನು ಮಾಡುತ್ತಿದ್ದಾರೆ. ಹಿಂದು ಧರ್ಮದಲ್ಲಿರುವ ಎಲ್ಲ ಸಂಪ್ರದಾಯ ಮಠ, ಮಾನ್ಯಗಳು ಒಂದಾಗಿ ಸನಾತನ ಸಂಸ್ಕೃತಿ ಎತ್ತಿ ಹಿಡಿದಾಗ ಮಾತ್ರ ಭಾರತಕ್ಕೆ ಭವಿಷ್ಯ ಇದೆ. ಈ ನಿಟ್ಟಿನಲ್ಲಿ ನಮ್ಮದ್ದು ವೀರಶೈವ ಮಠ, ರೇಣುಕಾಚಾರ್ಯರ ಪರಂಪರೆಯ ಮಠ, ಸ್ವರ್ಣವಲ್ಲಿ ಜಗದ್ಗುರುಗಳು ಶಂಕರಾಚಾರ್ಯರ ಪಂರಪರೆಯ ಮಠವಾಗಿದೆ. ಇತಿಹಾಸದಲ್ಲಿ ಜಗದ್ಗುರು ರೇಣುಕಾಚಾರ್ಯರು ಮತ್ತು ಶಂಕರಾಚಾರ್ಯರು ಕೂಡಿದ್ದರು ಎನ್ನುವುದು ಇದೆ ಎಂದರು.

ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಮಠಾಧೀಶ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, ಎಲ್ಲ ಸಂಪ್ರದಾಯ ಮಠಗಳು ಒಂದಾಗಬೇಕು. ಇದನ್ನೆ ನಾವು ಸಮನ್ವಯ ಎಂದು ಕರೆಯುತ್ತೇವೆ. ವಿಭಿನ್ನ ಮತ್ತು ಸಂಪ್ರದಾಯಗಳು ನಮ್ಮ ದೇಶಕ್ಕೆ ಭೂಷಣ. ಅವುಗಳನ್ನು ಇಟ್ಟುಕೊಂಡು ಹೋಗಬೇಕು. ಹಿಂದೂಗಳು ಎಲ್ಲರೂ ಒಗ್ಗಟ್ಟಾಗಿ ಹೋಗಬೇಕೆಂದು ಕರೆ ನೀಡಿದರು.

ಹುಕ್ಕೇರಿ ಮಠದ ಸ್ವಾಮಿಗಳವರು ನೀಡಿದ ಈ ವಿಶೇಷ ಸನ್ಮಾನ ಸ್ವೀಕರಿಸಿದ ಶ್ರೀ ಶ್ರೀಗಳವರು ಈ ಸನ್ಮಾನನವು ವಾಸ್ತವಿಕವಾಗಿ ಗೀತಾಚಾರ್ಯ ಶ್ರೀಕೃಷ್ಣನಿಗೆ ಸಮರ್ಪಣೆ, ಅವನಿಗೆ ಸಲ್ಲಬೇಕು ಎಂದರು. ಗೀತೆಯನ್ನು ನಮಗೆ ಕೊಟ್ಟವನು ಶ್ರೀಕೃಷ್ಣ ಪರಮಾತ್ಮ. ಆ ಮಹತ್ತಾದ ಕೊಡುಗೆ ಶ್ರೀಕೃಷ್ಣನದ್ದು. ಭಗವದ್ಗೀತೆಯು ಅವನದ್ದಾದ್ದರಿಂದ ಈ ಅಭಿಯಾನವೂ ಅವನದ್ದೇ. ಆದ್ದರಿಂದ ಈ ಸನ್ಮಾನ ಅವನಿಗೇ ಅರ್ಪಣೆ, ಅವನಿಗೇ ಸಲ್ಲಬೇಕಾದದ್ದು. ಹಾಗೆಯೇ ಅದನ್ನು ಮೊಟ್ಟಮೊದಲು ಮಹಾಭಾರತದಿಂದ ಹೊರತಂದಂತಹ ಪರಶಿವನ ಅವತಾರಿ ಶಂಕರಾಚಾರ್ಯರು. ಅದಕ್ಕಾಗಿ ಈ ಸನ್ಮಾನವು ಇವರಿಬ್ಬರಿಗೆ ಸಲ್ಲಲಿ ಎಂದರು.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಸಾಮಾಜಿಕ, ಧಾರ್ಮಿಕ ಕಾರ್ಯದಲ್ಲಿ ಇತಿಹಾಸವನ್ನೆ ಸೃಷ್ಟಿಸಿದ್ದಾರೆ. ಅವರಿಂದ ನನಗೆ ನೀಡಿರುವ ಗೀತಾಭಿಯಾನಾರ್ಣವ ಪ್ರಶಸ್ತಿ ನೀಡಿರುವುದು ಇದು ಶಂಕರಾಚಾರ್ಯರಿಗೆ ಸಲ್ಲಬೇಕು ಎಂದರು.

ಭಗವದ್ಗೀತೆ ಬಗ್ಗೆ ಎಲ್ಲ ಕಡೆ ಪ್ರಚಾರ ಮಾಡಲಾಗುತ್ತಿದೆ. ಕಳೆದ 17 ವರ್ಷಗಳಿಂದ ವೀರಶೈವ ‌ಮಠಗಳ ಸಹಕಾರ ಹೆಚ್ಚಿನ ಸಂಖ್ಯೆಯ ನೀಡಿವೆ. ಈಗ ಹುಕ್ಕೇರಿ ಹಿರೇಮಠದ ಸಹಾಕರ ನೀಡುತ್ತಿರುವುದು ಅಭಿಮಾನದ ಸಂಗತಿ ಎಂದರು.

ಭಗವದ್ಗೀತೆ ಬಗ್ಗೆ ಹೇಳುವಂಥವರ ಹೆಚ್ಚಿದ್ದಾರೆ. ಆದರೆ ಭಗವದ್ಗೀತೆಯನ್ನು ಜನರ ಬಾಯಿಂದ ಹೇಳಿಸಬೇಕು. ಅವರಿಗೆ ತಿಳಿಸಬೇಕು ಎನ್ನುವುದೇ ಭಗವದ್ಗೀತೆ ಅಭಿಯಾನ ಹಾಗೂ ಇದರ ಉದ್ದೇಶವಾಗಿದೆ ಎಂದರು‌.

ಭಗವದ್ಗೀತೆಯ ಕೈಗನ್ನಡಿಯಂತೆ ಇದೆ. ಮಠಗಳಲ್ಲಿ ಪರಸ್ಪರ ಅನ್ಯೋನ್ಯತೆ ಇರಬೇಕು. ಎಲ್ಲಾ ಸ್ವಾಮೀಜಿಗಳು ಒಂದಾಗಬೇಕು. ಈ ನಿಟ್ಟಿನಲ್ಲಿ ನೀವು ಒಂದು ಮಾಡಬೇಕೆಂದು ಮಹಿಳೆ ಒಬ್ಬರು ನನಗೆ ಪತ್ರ ಬರೆದಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಶ್ರೀ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠ ಗುರುಕುಲದ ಸುಮಾರು 150 ವೇಧ ವಟುಗಳು ಹಾಗೂ 50 ಜನ ಮಹಿಳೆಯರು ಒಟ್ಟಿಗೆ ಗೀತಾ ಪಾರಾಯಣ ಮಾಡಿದರು.ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಹುಕ್ಕೇರಿ ಹಿರೇಮಠದ ಸಂಪತಕುಮಾರ ಶಾಸ್ತ್ರೀಗಳು ಗೀತಾಪಾರಾಯಣ ಮಾಡಿದರು.

Read All News