ಜೀವವನ್ನೇ ಪಣಕ್ಕಿಟ್ಟು ಚಿರತೆ ರಕ್ಷಣೆ ಮಾಡಿದ ಪಶುವೈದ್ಯೆ

  • Krishna Shinde
  • 14 Jan 2024 , 9:32 PM
  • Bengaluru
  • 162

13-02-2023 ರಂದು ಸುಮಾರು 1 ವರ್ಷದ ಚಿರತೆಯೊಂದು ನಿಡ್ಡೋಡಿಯಲ್ಲಿ (ಕಟೀಲು ಸಮೀಪದ) ಬಾವಿಯೊಳಗೆ ಬಿದ್ದಿದ್ದು ಅರಣ್ಯ ಇಲಾಖೆಯು ಬೋನಿನೊಳಗೆ ಆಮಿಷವೊಡ್ಡಿ ಚಿರತೆಯನ್ನು ಹಿಡಿಯುವ ಪ್ರಯತ್ನ ವಿಫಲವಾಗಿತ್ತು.

ಡಾ.ಮೇಘನಾ ಮತ್ತು ತಂಡ  ಚಿರತೆ ರಕ್ಷಣೆಗೆ ಮುಂದಾಗಿ ಅದು ಅಡಗಿ ಕುಳಿತಿದ್ದ ಬಾವಿಯೊಳಗೆ ಡಾರ್ಟ್‌ ಮತ್ತು ಗನ್‌ನೊಂದಿಗೆ ಬಾವಿಯಲ್ಲಿ  ಇಳಿಯಲು ನಿರ್ಧರಿಸಿದರು ನಂತರ ಡಾ.ಮೇಘನಾ ಪಂಜರದಲ್ಲಿ  ಕುಳಿತು ಬಾವಿಯೊಳಗೆ ಇಳಿದಿದ್ದಾರೆ.

ಚಿರತೆಯು ಸಂಪೂರ್ಣ್ ನಿದ್ದೆಗೆ ಜಾರಿದನಂತರ ಅದನ್ನು ಬೋನಿನೊಳಗೆ ಎಳೆದು ಸಂಪೂರ್ಣ ಬೋನನ್ನು ಮೇಲೆತ್ತಲಾಯಿತು,ಚಿರತೆಯನ್ನು ಮತ್ತೆ ಕಾಡಿಗೆ ಬಿಡಲಾಗಿದೆ.  ಡಾ ಮೇಘನಾ, ಡಾ ಪೃಥ್ವಿ ಮತ್ತು ಡಾ ನಫೀಸಾ ರಕ್ಷಣೆಯ ಭಾಗವಾಗಿದ್ದರು ಎಂದು ಅರಣ್ಯ ಇಲಾಖೆ ತಿಳಿಸಿದೆ.

Read All News