ಅಥಣಿ : ಇದೇ ತಿಂಗಳಿನ 21 ರಿಂದ ಸುಮಾರು 09 ದಿನಗಳ ಕಾಲ ವಿಜಯ ಸಂಕಲ್ಪ ಯಾತ್ರೆ ಜರುಗಲೊದ್ದು ಪ್ರತಿ ಮನೆ ಮನೆಗೆ ಕರಪತ್ರ ಕೊಡಲಾಗುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರಕಾರದ ಯೋಜನೆ ಹಾಗೂ ಅಭಿವೃದ್ದಿ ಕಾರ್ಯಗಳ ಮಾಹಿತಿ ಕೊಡಲಾಗಿದೆ, ಸ್ಟಿಕರ್ ಪ್ರತಿ ಮನೆ ಮನೆಗೆ ಹಚ್ಚಿ ಬಿಜೆಪಿ ಅಭಿಯಾನ ಉಂಟು ಮಾಡಬೇಕು, ಗೋಡೆ ಬರಹ ಬರೆಯಬೇಕು, ಪ್ರತಿ ಭೂತಮಟ್ಟದಲ್ಲಿ ಕನಿಷ್ಠ 10 ಗೋಡೆ ಬರಹ ಬರೆಯಬೇಕು, 29 ರಂದು ಪ್ರಧಾನಿಯವರ ಮನ್ ಕಿ ಬಾತ್ ಕಾರ್ಯಕ್ರಮವಿದೆ ಆ ಮನ್ ಕೀ ಬಾತ್ ಕಾರ್ಯಕ್ರಮ ವೀಕ್ಷಣೆ ಮಾಡುವಂತೆ ಪ್ರೇರೆಪಿಸಲಾಗುವುದು ಎಂದು ಬಿಜೆಪಿ ಅಥಣಿ ಮಂಡಳ ವಿಸ್ತಾರಕ ಅರ್ಜುನ ಪವಾರ ಅವರು ಹೇಳಿದರು.
ಅವರು ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಲೋಕಲವಿವ ನ್ಯೂಸ್ ವರದಿಗಾರರಾಗಲು 8310635736 ಕರೆಮಾಡಿ
ಅನಂತರ ಶಾಸಕ ಮಹೇಶ ಕುಮಠಳ್ಳಿ ಅವರು ಮಾತನಾಡುತ್ತಾ ಬರುವ 29 ರ ಪ್ರಧಾನಿಯವ ಕಾರ್ಯಕ್ರಮ ವೀಕ್ಷಿಸಿ , ಜೊತೆಹೆ ಬಿಜೆಪಿಯ ಕಾರ್ಯಸಾಧನೆಗಳನ್ನು ಪ್ರತಿಯೋರ್ವ ಜನರಿಗೆ ತಿಳಿಸಿಕೊಡುವ ಕಾರ್ಯ ಎಲ್ಲ ಕಾರ್ಯಕರ್ತರು ನಡೆಸಿಕೊಡಬೇಕು, ಈ ಮೂಲಕ ದೇಶವನ್ನು ಸುಬಧ್ರವಾಗಿ ಕಟ್ಟಿಕೊಡುವುದನ್ನು ಕಾರ್ಯಕರ್ತರು ಮಾಡಬೇಕು, 2023 ರ ಚುನಾವಣೆಯ ಪೂರ್ವಭಾವಿಯಾಗಿ ಹಲವಾರು ಯೋಜಮೆ ಹಾಕಿಕೊಂಡಿದ್ದು ಅವೆಲ್ಲವುಗಳ ಮಾಹಿತಿ ಜನರಿಗೆ ಮುಟ್ಟಿಸುವುದಾಗಿದೆ ಎಂದರು.
ಲೋಕಲವಿವ ನ್ಯೂಸನಲ್ಲಿ ಜಾಹಿರಾತುಗಳಿಗಾಗಿ 8904752259 ಕರೆಮಾಡಿ
ಈ ವೇಳೆ ನಿಂಗಪ್ಪ ನಂದೇಶ್ವರ, ಕಲ್ಮೇಶ ಯಲಡಗಿ, ಶಿವಪುತ್ರ ನಾಯಿಕ, ರಾಜು ಮರಡಿ, ಬಸವರಾಜ ಮಗದುಮ್, ವಿವೇಕ ನಾರಗೊಂಡ, ಕುಮಾರ ಸತ್ತಿಗೌಡರ, ಲಕ್ಷ್ಮಣ ಆಲೂರ, ಅಶೋಕ ಅಮ್ಮಣಗಿ, ವೆಂಕಟೇಶ ದೇಶಪಾಂಡೆ ಸೇರಿದಂತೆ ಇತರರಿದ್ದರು.
ವರದಿ ಅಜೀತ ಕಾಂಬಳೆ ಲೋಕವಿವ ನ್ಯೂಸ