ಸಿ ಎಂ ನಮಗೆ ಮೀಸಲಾತಿ ‌ಕೊಡುತ್ತಾರೆ ಎನ್ನುವ ವಿಶ್ವಾಸ ಇದೆ ವಿಜಯಾನಂದ ಕಾಶಪ್ಪನವರ

  • 15 Jan 2024 , 12:12 PM
  • Belagavi
  • 161

ಬೆಳಗಾವಿ :ಬಸವರಾಜ ಬೊಮ್ಮಾಯಿ‌ ಅವರು ಪಂಚಮಸಾಲಿ ಸಮಾಜಕ್ಕೆ‌ 2 ಎ‌ ಮೀಸಲಾತಿ ನೀಡುವ ಗಡುವು ನೀಡಿದ್ದಾರೆ. ನಮಗೆ ಮೀಸಲಾತಿ ‌ಕೊಡುತ್ತಾರೆ ಎನ್ನುವ ವಿಶ್ವಾಸ ಇದೆ ಎಂದು  ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಬುಧವಾರ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಪಂಚಮಸಾಲಿ ಸಮಾವೇಶ‌ ನಡೆಸುವ ಸ್ಥಳದಲ್ಲಿ ಸುದ್ದಿ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಡಿ.22ರ ವರೆಗೆ ನಮ್ಮ ಸಮಾಜದ ಪರವಾಗಿ ನಿರ್ಣಯ ಬರುವ ವಿಶ್ವಾಸ ನಮ್ಮ‌ ಸಮಾಜಕ್ಕೆ ಇದೆ. ಬೊಮ್ಮಾಯಿ ಅವರು ಪಂಚಮಸಾಲಿ ಸಮಾಜದ ಋಣ ತೀರಿಸಲು ಇದೊಂದು ಸುವರ್ಣಾವಕಾಶ ಇದೆ. ಸಿಎಂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಿದರೆ ಗೌರವ, ಇಲ್ಲದಿದ್ದರೇ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.

Read All News