ಅಥಣಿ : ಅಥಣಿ ತಾಲೂಕಿನ ಸುಕ್ಷೇತ್ರ ಹಲ್ಯಾಳ ಗ್ರಾಮದ ಶ್ರೀ ಶಿವರಾಯ ಮುತ್ಯಾ ಜಾತ್ರಾಮಹೋತ್ಸವ ಅತಿ ವಿಜೃಂಭಣೆಯಿಂದ ಜರಗಿತು.
ಮುಂಜಾನೆ ಶುಭ ವೇಳೆಯಲ್ಲಿ ಪೂಜಾರಿ ವಿಠ್ಠಲ ಕರೆಪ್ಪ ಸನದಿ ದೇವರಿಗೆ ರುದ್ರಾಭಿಷೇಕ ಹಾಗೂ ನೈವೇದ್ಯ ಮಹಾ ಮಂಗಳಾರತಿಯನ್ನು ಅರ್ಪಿಸಿದರು.
ನಂತರದಲ್ಲಿ ಶಿವರಾಯ ಮುತ್ಯಾ ಪಲ್ಲಕ್ಕಿ ಹೊತ್ತು ಊರ ತುಂಬಾ ಭವ್ಯ ಮೆರವಣಿಗೆ ಸಾಗಿತು. ಗ್ರಾಮದ ಮಧ್ಯ ಅಲಗ ಹಾಯುವ ಕಾರ್ಯವೂ ಕೂಡ ಜರುಗಿತು. ಪಲ್ಲಕ್ಕಿಯೊಂದಿನ ವಿವಿಧ ಗ್ರಾಮಗಳ ಡೊಳ್ಳು ವಾದಕರು ಜಾತ್ರೆಯ ಮೆರಗನ್ನು ಹೆಚ್ಚಿಸಿದರು.ಈ ವೇಳೆ ಹಿರಿಯ ಕಂಠಿಕಾರ ಶಿವರಾಯ ಹಿರೇಕುರುಬರ, ಗುಂಡು ಕುರುಬರ, ಮುತ್ತಪ್ಪ ಸನದಿ, ತಿಪ್ಪಣ್ಣ ಹಿರೇಕುರುಬರ, ಅಣ್ಣಸಾಹೇಬ ಬಿರಾದರ್, ದೀಪಕ್ ಮುರಗುಂಡಿ, ಸುರೇಶ್ ಬಾಗಿ ಹಾಗೂ ಗ್ರಾಮದ ಎಲ್ಲ ಗ್ರಾಮಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ನಂತರದಲ್ಲಿ ಮಹಾಪ್ರಸಾದ ಸೇವೆ ಜರಗಿತು.