ಇಂದೋ ನಾಳೆಯೋ ಅನ್ನುತ್ತಿರುವ ನೀರಿನ ಟ್ಯಾಂಕ್ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿರುವ ಗ್ರಾಮಸ್ಥರು

  • Krishna Shinde
  • 14 Jan 2024 , 10:59 PM
  • Vijayapur
  • 329

ದೇವರ ಹಿಪ್ಪರಗಿ: ಸರಕಾರ ಗ್ರಾಮೀಣ ಬಾಗದ ಜನರಿಗೆ ಕುಡಿಯುವ ನೀರಿಗೆ ಅನುಕೂಲ ವಾಗಲಿಯಂದು  ನೀರಿನ ಟ್ಯಾಂಕ್  ನಿರ್ಮಾಣ ಮಾಡಿ ಕೊಡುತ್ತಿದೆ.ಆದರೆ ಭ್ರಷ್ಟ ಅಧಿಕಾರಿಗಳು ಸರಕಾರದ ಹಣ ದುರ್ಭಳಿಕೆ ಮಾಡಿಕೊಳ್ಳುತ್ತಿದ್ದಾರೆ. 

ಹೌದು ತಮ್ಮ ಮುಂದೆ ಈಗ ನಾವು ಹೇಳಲು ಹೊರಟಿರುವ ಸ್ಟೋರಿ ಎಲ್ಲಿದು ಅಂತೀರಾ ಮುಂದೆ ಹೇಳುತ್ತೇವೆ ನೋಡಿ.

ಇದು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಗ್ರಾಮಕ್ಕೆ ಬಹುಹಳ್ಳಿ ಕುಡಿಯುವ  ನೀರು ಸರಬರಾಜು ಯೋಜನೆಯಡಿ 2020 -2021 ನೇ ಸಾಲಿನ ಎಸ್ ಡಿ ಪಿ ಯೋಜನೆಯಡಿಯಲ್ಲಿ ನೀರಿನ ಹೆಡ್ ಟ್ಯಾಂಕ್ ಕಾಮಗಾರಿಗೆ ಸುಮಾರು 25 ಲಕ್ಷ ರೂಪಾಯಿ ಅನುದಾನದಡಿ ನಿರ್ಮಾಣ ಮಾಡಲಾಗಿದೆ. 

ನಿರ್ಮಾಣ ಮಾಡುವ ಸಂದರ್ಭದಲ್ಲಿ ಕಳಪೆ ಗುಣಮಟ್ಟ ಪದಾರ್ಥಗಳನ್ನು ಬಳಕೆ ಮಾಡಿದರಿಂದ ಬಳಕೆಗೂ ಮೊದಲೇ ಬಿರುಕು ಬಿಟ್ಟಿರುತ್ತದೆ.ನಿರ್ಮಿಸಿದ ನೀರಿನ  ಟ್ಯಾಂಕ್ ಉದ್ಘಾಟನೆಗೂ ಮೊದಲೇ ಸೋರುತ್ತಿದೆ. ನೀರು ಹೊರಬರುತ್ತಿರುವ ಜಾಗದಲ್ಲಿ ಪ್ಯಾಚ್ ವರ್ಕ್ ಮಾಡಿರುತ್ತಾರೆ. ಕಾಂಪೋಂಡ್ ಗೇಟ್ ಕೂಡಾ ಮುರಿದು ಹೋಗಿರುತ್ತದೆ.ಎಂದು ಜಾಂಭವ ಯುವ ಸೇನಾ ವಿಜಯಪುರ ಜಿಲ್ಲಾ ಗೌರವ ಅಧ್ಯಕ್ಷರು,ಪತ್ರಕರ್ತರಾದ ಮಹಾಂತೇಶ ಹಾದಿಮನಿ ಆರೋಪಿಸಿದ್ದಾರೆ.

ಸಂಪೂರ್ಣ ನೀರು ತುಂಬಿದ ನಂತರ  ನೀರಿನ ಹೆಡ್ ಟ್ಯಾಂಕ್  ಕೆಲವೇ ದಿನಗಳಲ್ಲಿ ಕುಸಿದು ಬೀಳವ ಸಂಭವವಿದೆ.ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು  ಇಂತಹ ಕಳಪೆ ಕಾಮಗಾರಿ ಮಾಡಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆರೋಪಿಸಿದ್ದಾರೆ.

 ಗ್ರಾಮ ಪಂಚಾಯಿತಿ ಅಧಿಕಾರಿಗಳಾದ ತಾವುಗಳು ಈ ನೀರಿನ ಹೆಡ್ ಟಾಂಕ್ ತಮ್ಮ ಹಾಂಡ್ ವರ್ ತೆಗೆದುಕೊಳ್ಳಬಾರದೆಂದು ತಮ್ಮಲಿ ಕೂಡಾ ಅವರು ಮನವಿ ಮಾಡಿಕೊಂಡಿದ್ದಾರೆ.ಒಂದುವೇಳೆ ತಾವುಗಳು ಇದರ ಬಗ್ಗೆ ನಿರ್ಲಕ್ಷ್ಯ ತೋರಿದರೆ ಗ್ರಾಮ ಪಂಚಾಯಿತಿ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Read All News