ವಿಶ್ವಕರ್ಮರು ಕೇವಲ ಜಾತಿ ಧರ್ಮಕ್ಕೆ ಸೀಮಿತರಲ್ಲ: ಸಚಿವೆ ಶೋಭಾ ಕರಂದ್ಲಾಜೆ

  • Prasad Kambar
  • 14 Jan 2024 , 11:25 PM
  • Udupi
  • 520

ಶ್ರೀ ಕ್ಷೇತ್ರಕ್ಕೆ ಉಡುಪಿ ಜಿಲ್ಲಾ ಸಂಸದರು ಭೇಟಿ
ವಿಶ್ವಬ್ರಾಹ್ಮಣ ಮೂಲ ಕುಲ ಗುರು ಪರಂಪರಾ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಶಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ "ಚಾತುರ್ಮಾಸ್ಯ ವ್ರತಾಚರಣೆ" ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ನಡೆಯುತ್ತಿರುವ ಶುಭ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ದಿನಾಂಕ 24- 09- 2023 ರಂದು ಉಡುಪಿ ಜಿಲ್ಲಾ ಸಂಸದರು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಕು. ಶೋಭಾ ಕರಂದ್ಲಾಜೆ ಕಾಪು ಜನಪ್ರಿಯ ಶಾಸಕರಾದ ಮಾನ್ಯ ಶ್ರೀ ಸುರೇಶ್ ಶೆಟ್ಟಿ ಗುರ್ಮೆ ಯವರು ಭೇಟಿ ನೀಡಿ ಜಗದ್ಗುರುಗಳಿದ ಆಶೀರ್ವಾದ ಮಂತ್ರಾಕ್ಷತೆಯನ್ನು ಪಡೆದರು.

ನಾವು ಹೋಗುತ್ತಿರುವ ಯಾವದೇ ಮಂದಿರ ಇರಬಹುದು. ಅದಕ್ಕೆ ವಿಶ್ವಕರ್ಮರ ಚಾಕು ಚಕ್ಯೆತೆ ಬೇಕೇ ಬೇಕು. ವಿಶ್ವಕರ್ಮರ ಕೈ ಇಲ್ಲಾ ಅಂದ್ರೆ ನಾವು ಇರಲ್ಲಿಕೆ ಆಗುವುದಿಲ್ಲ. ವಿಶ್ವಕರ್ಮ ಧರ್ಮವು ಕೇವಲ ಜಾತಿಗೆ ಸೀಮಿತವಾಗಿ ಉಳಿದಿಲ್ಲ. ಇದು ಜಗತ್ತಿಗೆ ಸೀಮಿತವಾಗಿರುವುದು ಎಂದು ಹೇಳಿದರು ಮತ್ತು ವಿಶ್ವಕರ್ಮ ಜಯಂತಿಯ ದಿನದಂದು ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಸುಮಾರು 13000 ಕೋಟಿ ವೆಚ್ಚದ ವಿಶ್ವಕರ್ಮ ಕೌಶಲ್ಯ ಯೋಜನೆಯ ಅನುಷ್ಠಾನದ ಕುರಿತು ಮಾತನಾಡಿದರು. ತರಬೇತಿ ಪಡೆದ ನಂತರ ವಿಶ್ವಕರ್ಮ ಕೌಶಲ್ಯ ಪಮಾಣ ಪತ್ರ ನೀಡಲಾಗುವುದು. ಹಾಗೂ ವಿಶ್ವಕರ್ಮ ಕೌಶಲ್ಯ ಯೋಜನೆಯಡಿಯಲ್ಲಿ ಸ್ವಂತ ಉದ್ಯೋಗ ಮಾಡಲು ಬಯಸುವರಿಗೆ ಮೊದಲ ಹಂತದಲ್ಲಿ 2 ಲಕ್ಷ ರೂಪಾಯಿ ಸಾಲ ನೀಡುವದಾಗಿ ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಗೀತಾಂಜಲಿ ಸುವರ್ಣ, ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ವೀಣಾ ಶೆಟ್ಟಿ, ಕಾಪು ಮಂಡಲ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ಸುಮಾ ಶೆಟ್ಟಿ, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜನಾರ್ಧನ ಆಚಾರ್ಯ, ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಅಧ್ಯಕ್ಷಾದ ಶ್ರೀಧರ ಆಚಾರ್ಯ ವಡೇರ ಹೊಬಳಿ, ಪ್ರಧಾನ ಕಾರ್ಯದರ್ಶಿ ಶ್ರೀ ಲೋಕೇಶ್ ಆಚಾರ್ಯ ಕಂಬಾರ, ಅಸೆಟ್ ಅಧ್ಯಕ್ಷ ಶ್ರೀ ಸೂರ್ಯ ಕುಮಾರ್ ಮಾತೃ ಮಂಡಳಿ ಅಧ್ಯಕ್ಷರಾದ ಸಂಧ್ಯಾ ಲಕ್ಷ್ಮಣ್ ಮತ್ತು ಪ್ರಮುಖರು ಉಪಸ್ಥಿತರಿದ್ದರು.

Read All News