ಬೈಲಹೊಂಗಲ : ಮತಕ್ಷೇತ್ರದ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬುಧವಾರ ಪ್ರಧಾನಿ ನರೇಂದ್ರ ಮೋದಿ ತಾಲೂಕಿನ ಬೈಲವಾಡ ಕ್ರಾಸ್ ಬಳಿ ಪ್ರಚಾರ ಸಭೆಗೆ ಆಗಮಿಸಿದ್ದರು, ಗುರುವಾರ ಎಲ್ಲ ರೈತ ಸಂಘಟನೆಗಳು ಕೂಡಿಕೊಂಡು ಪಕ್ಷೇತರ ಅಭ್ಯರ್ಥಿ ಡಾ. ವಿಶ್ವನಾಥ ಪಾಟೀಲ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿ ಬೃಹತ ಚಕ್ಕಡಿ ಯಾತ್ರೆಯನ್ನು ಕೈಗೊಂಡರು.
ಪಟ್ಟಣದ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ಆರಂಭವಾದ ಬೃಹತ ಯಾತ್ರೆಯುದ್ದಕ್ಕೂ ಅಭಿಮಾನಿಗಳು ಡಾ.ವಿಶ್ವನಾಥ ಪಾಟೀಲ ಪರ ಘೋಷಣೆ ಕೂಗಿದರು. ಸಹಸ್ರ ಸಂಖ್ಯೆಯಲ್ಲಿ ಕೂಡಿದ ರೈತರು ನಮ್ಮ ಬೆಂಬಲ ಪಕ್ಷೇತರ ಅಭ್ಯರ್ಥಿ ಡಾ.ವಿಶ್ವನಾಥ ಪಾಟೀಲ ಅವರಿಗೆ ಎಂದು ಶಕ್ತಿ ಪ್ರದರ್ಶನ ಮಾಡಿದರು.