ಬೆಳಗಾವಿ: ಬೆಳಗಾವಿಯ ಸಂಕಮ್ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಡಿಜಿಟಲ್ ನ್ಯೂಸ್ ಅಸೋಸಿಯೇಷನ್ (ರಿ) ಇದರ ಉದ್ಘಾಟನಾ ಸಮಾರಂಭದಲ್ಲಿ ಉಪಾಧ್ಯಕ್ಷರಾದಂತಹ ರತ್ನಾಕರ್ ಗೌಂಡಿ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಭಾರತದಲ್ಲಿಯೇ ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ಮೂರನೇ ಸ್ಥಾನದಲ್ಲಿದೆ. ಹಾಗೂ ದಕ್ಷಿಣ ಭಾರತದಲ್ಲಿ ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ಮೊದಲನೇ ಸ್ಥಾನದಲ್ಲಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಕ್ಕೆ ಡಿಜಿಟಲ್ ನ್ಯೂಸ್ ಅಸೋಸಿಯೇಷನ್ ಮೂಲಕ ಮನದಾಳದ ಮಾತನ್ನು ಮನವಿಯಾಗಿ ಹಂಚಿಕೊಂಡರು.
ಡಿಜಿಟಲ್ ಮಾಧ್ಯಮ ಪತ್ರಕಾರರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ಡಿಜಿಟಲ್ ಮಾಧ್ಯಮಗಳಿಗೆ ನೀಡಿದಂತ ಸಹಕಾರ ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಡಿಜಿಟಲ್ ಮಾಧ್ಯಮ ಪತ್ರಕಾರರಿಗೆ ಸರ್ಕಾರಿಯ ಸೌಲತ್ತುಗಳು ಸಿಗಬೇಕೆಂದು ಹೇಳಿದರು. ಹಾಗೆ ವಾರ್ತಾ ಇಲಾಖೆದಲ್ಲಿಯೂ ಕೂಡ ನಮಗೆ ಸ್ಥಾನಮಾನವೂ ಸಿಗಬೇಕೆಂದು ಹೇಳಿದರು.