ಬೆಳಗಾವಿ : ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯು, ಇಬ್ಬರು ಬಾಣಂತಿಯರು ವಾಸವಿದ್ದ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ.
ಬೆಳಗಾವಿಯ ಪೀರನವಾಡಿಯ ಪಾಟೀಲ ಗಲ್ಲಿಯಲ್ಲಿ ಘಟನೆ ನಡೆದಿದ್ದು, ಕಳೆದ ಎರಡು ದಿನಗಳಿಂದ ಬಿಟ್ಟು ಬಿಡದೇ ಮನೆಯಲ್ಲಿ ಸಂಗ್ರಹವಾದ ನೀರನ್ನು ಹೊರ ಹಾಕಲು ಕುಟುಂಬ ಸದಸ್ಯರ ಹರಸಾಹಸ ಪಡುತ್ತಿದ್ದಾರೆ.
ಮನೆಗೆ ಏಕಾಏಕಿ ನೀರು ನುಗ್ಗಿರುವದರಿಂದ ಬಾಡಿಗೆ ಮನೆಗೆ ಬಾಣಂತಿಯರು, ನವಜಾತ ಶಿಶುಗಳ ಸ್ಥಳಾಂತರ ಮಾಡಲಾಗಿದೆ.
ಪೀರಣವಾಡಿಯ ನಾಗಲಿಂಗ ಹಿರೇಮಠ ಎಂಬುವವರ ಮನೆಗೆ ನೀರು ನುಗ್ಗಿದ್ದು, ಈ ಹಿಂದೆ ಇದೆ ಮನೆ ಗೋಡೆ ಕುಸಿದಿದ್ದರಿಂದ ನಾಗಲಿಂಗ ಹಿರೇಮಠ ಅವರ ತಾಯಿ ಮೃತಪಟ್ಟಿದ್ದರು. ಬಾಣಂತಿಯರು ಮನೆಯಲ್ಲಿದ್ದಾಗಲೇ ನೀರು ನುಗ್ಗಿ,
ಮನೆಯಲ್ಲಿದ್ದ ಅಡುಗೆ ವಸ್ತುಗಳೆಲ್ಲವೂ ನೀರು ಪಾಲಾಗಿವೆ ಹೋಟೆಲ್‌ನಿಂದ ಅನ್ನ-ಸಾಂಬಾರು ತಂದು ಊಟ ಮಾಡುತಿದ್ದೇವೆ.
ಇಡೀ ದಿನ ನೀರು ಹೊರಗೆ ಹಾಕುವುದೇ ನಮ್ಮ ಕೆಲಸವಾಗಿದೆ ಎಂದು ಪೀರನವಾಡಿ ಪಟ್ಟಣ ಪಂಚಾಯತಿ ಅಧಿಕಾರಿಗಳ ವಿರುದ್ಧ ಸರಸ್ವತಿ ಕುಲಕರ್ಣಿ ಆಕ್ರೋಶ ಹೊರಹಾಕುತ್ತಿದ್ದಾರೆ.