ಬೆಳಗಾವಿ :ಮಹಾರಾಷ್ಟ್ರದ ಗಡಿ ಕನ್ನಡಿಗರಿಗೆ ಅನ್ಯಾಯ ಆಗ್ತಿದೆ. ಬಸವರಾಜ ಬೋಮ್ಮಾಯಿ ಅವರನ್ನ ಮಹಾರಾಷ್ಟ್ರ ದ ಜತ್ ತಾಲೂಕಿಗೆ ಆಹ್ವಾನ ಮಾಡ್ತಿವಿ. ಜತ್ ನಲ್ಲಿ ಬೋಮ್ಮಾಯಿ ಅವರಿಗೆ ದಕ್ಷಿಣ ಪಥೇಶ್ವರ ಅಂತಾ ಬಿರುದು ನೀಡಿ ಗೌರವಿಸುತ್ತೇವೆ ಎಂದು ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿದರು.
ಮಿಲನ್ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಈ ಪ್ರಶಸ್ತಿ ಕೊಡ್ತಿವಿ. ಈಗಾಗಲೇ ಸಿಎಂ ಕಚೇರಿ ಜೊತೆಗೆ ಪತ್ರ ಸಂಪರ್ಕ ಮಾಡಿದ್ದೇವೆ. ನಾಳೆ ಸುಪ್ರೀಂ ಕೋರ್ಟ್ ನಲ್ಲಿ ಗಡಿ ವಿವಾದ ಅರ್ಜಿ ವಿಚಾರಣೆ ಗೆ ಬರಲಿದೆ. ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ಏನಾಗುತ್ತದೆ ಎಂಬ ಆತಂಕ ನಮ್ಮಲ್ಲಿ ಇದೇ. ಗಡಿ ಭಾಗವನ್ನ ಅಭಿವೃದ್ಧಿ, ಗಡಿ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಸರ್ಕಾರದ ವಿವಿಧ ಇಲಾಖೆಯಿಂದ ಆಗಿಲ್ಲ. ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಗಡಿ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ್ ನಲ್ಲಿ ಗಡಿ ವಿವಾದ ವಿಚಾರದಲ್ಲಿ ಮಹಾಜನ್ ವರದಿ ಬಿಟ್ಟರೆ ಬೇರೆಯಾವುದೇ ದಾಖಲೆಗಳು ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.