ಬೆಳಗಾವಿ :
ಉತ್ತರ ಕರ್ನಾಟಕದ ಜತೆಗೆ ರಾಜ್ಯದ ಎಲ್ಲಾ ವಿಚಾರವು ಚರ್ಚೆಗೆ ಬರುತ್ತೆ. ಹೆಚ್ಚು ಈ ಭಾಗದ ವಿಚಾರ ಚರ್ಚೆಯಾಗಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಸೋಮವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆ ವಿಚಾರಕ್ಕೆ ಉತ್ತರಿಸಿದ ಅವರು, ಬಿಜೆಪಿಯವರ ಹತ್ತಿರ ಸಂಪನ್ಮೂಲಗಳು ಚೆನ್ನಾಗಿ ಇವೆ.
ಜನರಿಗೆ ಸುಳ್ಳು ಹೇಳುವುದನ್ನು ಬಿಜೆಪಿ ಚೆನ್ನಾಗಿ ಕಲಿತಿದ್ದಾರೆ.ಇದನ್ನೆ ಜನರು ಕೂಡ ನಂಬುತ್ತಾರೆ.
ತೆಲಂಗಾಣದಲ್ಲಿ ಬಿಆರ್‌ಎಸ್ ನಮಗಿಂತ ಹೆಚ್ಚು ಭರವಸೆ ನೀಡಿದ್ದರು. ಗ್ಯಾರಂಟಿ ಕೊಡದೆ ಇದ್ರು ನಾನು ಗೆಲ್ಲುತ್ತಿದ್ದೇವು. ಕಾರಣ ಕೆಸಿಆರ್ ಜನರ ಮಧ್ಯೆ ಇರುತ್ತಿರಲಿಲ್ಲ ಎಂದರು.
ಪಂಚರಾಜ್ಯ ಚುನಾವಣಾ ಫಲಿತಾಂಶ ಲೋಕಸಭಾ ಚುನಾವಣೆ ಮೇಲೆ ಯಾವುದೇ ಪ್ರಭಾವ ಬೀರಲ್ಲ. ಎಂದ ಅವರು, ಭವಾನಿ ರೇವಣ್ಣ ವೀಡಿಯೋ ವೈರಲ್ ವಿಚಾರಕ್ಕೆ ಉತ್ತರಿಸಿದ ಅವರು, ನಾನು ಆ ವೀಡಿಯೋ ನೋಡಿಲ್ಲ ಎಂದಷ್ಟೇ ಹೇಳಿ ತೆರಳಿದರು.