ಬೆಳಗಾವಿ :2ಎ ಮೀಸಲಾತಿ ವಿಚಾರದ ಬಗ್ಗೆ ಪಾರ್ಟಿಲಿ ಚರ್ಚೆ ಮಾಡುತ್ತೇವೆ ಆ ಸಮುದಾಯದವರು ಬಂದು ಭೇಟಿಯಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಒಕ್ಕಲಿಗರು ಮೀಸಲಾತಿ ಕೇಳಿದ್ದಾರೆ ಈ ಬಗ್ಗೆ ಸರ್ಕಾರ ಸ್ಪಷ್ಟಪಡಿಸಲಿ, ಸಮಾಜದ ಹಿಂದುಳಿದ ವರ್ಗಗಳಿಗೆಲ್ಲಾ ಶೇರ್ ಸಿಗಬೇಕು.
ಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್ ಆದೇಶಗಳಿವೆ
ಆದ್ರೆ ಸರ್ಕಾರ ಎಲ್ಲರಿಗೂ ಚಾಕಲೇಟ್ ಕೊಡ್ತಿದಾರೆ ಅಂತ ಡಿಕೆಶಿ ಸರ್ಕಾರದ ಕಾಲುಎಳೆದಿದ್ದಾರೆ.
ಕೋವಿಡ್ ಇದೆ ಅಂತ ರಾಹುಲ್ ಗಾಂಧಿ ಗೆ ಯಾತ್ರೆ ನಿಲ್ಲಿಸಲು ಹೇಳಿದ್ದಾರೆ ಎಂದು ಗುಡುಗಿದ ಡಿಕೆಸಿ ಮೇಕೆದಾಟು ಸಮಯದಲ್ಲೂ ನಮಗೆ ಆಗಿತ್ತು ಆಗ ಕೇಸ್ ಕೂಡ ಹಾಕಿದ್ರು ಎಂದು ಹೇಳಿದ್ದಾರೆ.