ಪಾವರ್ ಸೆಂಟರ್ ಅಥಣಿ ಕ್ಷೇತ್ರದ ಸೌಧದ ಮಾರ್ಗ ರಸ್ತೆ ಅಭಿವೃದ್ಧಿ ಎಂದು ?

  • 11 Jan 2024 , 7:37 PM
  • Belagavi
  • 455

ಅಥಣಿ :ಮಾಜಿ ಡಿಸಿಎಂ ಸರಕಾರದ ಶಕ್ತಿ ಕೇಂದ್ರ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಅಥಣಿ ತಾಲೂಕಿನ ಮಿನಿ ವಿಧಾನಸೌಧ ರಸ್ತೆಗೆ ಇಲ್ಲಿಯವರೆಗೂ ಅಭಿವೃದ್ಧಿ ಮಾಡಲು ಮುಂದಾಗದೆ ಇರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕಿಕೊಂಡು ಸಂಚಾರ ನಡೆಸುವಂತಾಗಿದೆ.

ಅಥಣಿ- ವಿಜಯಪುರ ರಾಜ್ಯ ಹೆದ್ದಾರಿ ದುಸ್ಥಿತಿ ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣ ಪ್ರಭಾವಿ ರಾಜಕಾರಣಿ ಗಳ ತವರೂರಾಗಿದೆ. ಬಿಜೆಪಿ ಶಾಸಕ ಮಹೇಶ ಕುಮಠಳ್ಳಿ ಕ್ಷೇತ್ರದಲ್ಲೇ ರಸ್ತೆಯ ದುಸ್ಥಿತಿ. ಪಟ್ಟಣದಿಂದ ಎರಡು ಕೀ ಮೀ ರಸ್ತೆ ಹದಗೆಟ್ಟಿದ್ದರಿಂದ ಸಾಕಷ್ಟು ಬಾರಿ ಅಪಘಾತವಾಗಿವೆ.ತಹಸೀಲ್ದಾರ್ ಕಛೇರಿ ಇರುವುದರಿಂದ ತಾಲೂಕಿನ ಹಳ್ಳಿ ರೈತರಿಗೂ ರಸ್ತೆ ಗುಂಡಿಯಿಂದ ಸಾಕಷ್ಟು ಸಂಕಷ್ಟ ಎದುರಾಗಿದೆ.

ಸುಮಾರು ಎರಡು ಕಿಮಿ ರಸ್ತೆ ಉದ್ದಕ್ಕು ಬರಿ ಗುಂಡಿಗಳದ್ದೆ ಕಾರುಬಾರು. ಕೂಡಲೇ ವೆವಸ್ಥಿತ ರಸ್ತೆ ಮಾಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ

Read All News