ಎಲ್ಲಿಗೆ ಬಂತು ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು..?

  • krishna s
  • 14 Oct 2024 , 7:03 PM
  • Belagavi
  • 953

ಬೆಳಗಾವಿ:ಕೆಲವು ದಿನಗಳ ಹಿಂದೆ ರೈಲ್ವೆ ಇಲಾಖೆ ತೀರ್ಮಾನಿಸಿದ ಬೆಂಗಳೂರು-ಬೆಳಗಾವಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಾರ್ಗ ರದ್ದುಗೊಂಡಿದೆ. ಈ ನಿರ್ಧಾರದ ಬಗ್ಗೆ ಯಾವುದೇ ಸ್ಪಷ್ಟನೆ ನೀಡದೆ, ರೈಲ್ವೆ ಇಲಾಖೆ ಬೆನ್ನೇರಿ ನಿಂತಿರುವುದರಿಂದ ಬೆಳಗಾವಿ ಜನತೆ ತೀವ್ರ ಅಸಮಾಧಾನಗೊಂಡಿದ್ದಾರೆ. “ವಂದೇ ಭಾರತ್ ಎಲ್ಲಿ?” ಎಂಬ ಪ್ರಶ್ನೆ ಇಡೀ ನಗರದಲ್ಲಿ ಪ್ರಚಲಿತವಾಗಿದ್ದು, ಜನರು ಇದಕ್ಕೆ ಉತ್ತರ ನಿರೀಕ್ಷಿಸುತ್ತಿದ್ದಾರೆ.

ಈಗಾಗಲೇ ಜನರಿಗೆ ಮಹತ್ವದ ವೇಗದ ಸಂಪರ್ಕ ಕಲ್ಪಿಸುವ ಆಶಯದಿಂದ ನಿರೀಕ್ಷಿಸಿದ್ದ ವಂದೇ ಭಾರತ್ ರೈಲು ಕೇವಲ ಹುಬ್ಬಳಿಯವರೆಗೆ ಮಾತ್ರ ಸೀಮಿತಗೊಂಡಿರುವುದು ಬೆಳಗಾವಿ ಜನರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಜನರು ಏಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನಿಸುತ್ತಿದ್ದಾರೆ, ಏಕೆಂದರೆ ಪುಣೆ-ಹುಬ್ಬಳಿ ಮಾರ್ಗದಲ್ಲಿ ಯಾವುದೇ ತೊಂದರೆ ಇಲ್ಲದೆ ವಂದೇ ಭಾರತ್ ಸಾಗಿದೆ.

ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ಈ ವಿಷಯವನ್ನು ರೈಲ್ವೆ ಸಚಿವರ ಮುಂದಿಟ್ಟಿದ್ದಾರೆ. ಆದರೆ, ಇದುವರೆಗೆ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಅಥವಾ ನಿರ್ಧಾರ ಕಂಡುಬಂದಿಲ್ಲ. ಬೆಳಗಾವಿಯಿಂದ ಬೆಂಗಳೂರಿಗೆ ವಿದ್ಯಾರ್ಥಿಗಳು, ಉದ್ಯೋಗಿಗಳು, ಮತ್ತು ವ್ಯಾಪಾರಸ್ಥರು ನಿರಂತರವಾಗಿ ಪ್ರಯಾಣಿಸುತ್ತಿದ್ದು, ಈ ಸಂಚಾರದ ಅವಶ್ಯಕತೆಯು ತೀವ್ರವಾಗಿದೆ.

ಬೆಳಗಾವಿ ಜನತೆ ರೈಲು ಮತ್ತೆ ಯಾವಾಗ ಬರುವುದು? ಎಂಬ ಪ್ರಶ್ನೆಗೆ ನಿರೀಕ್ಷೆಯಲ್ಲಿದ್ದು, ರೈಲ್ವೆ ಇಲಾಖೆಯ ನಿರ್ಲಕ್ಷ್ಯವು ಇನ್ನಷ್ಟು ಗೊಂದಲ ಹಾಗೂ ಆಕ್ರೋಶವನ್ನು ಉಂಟುಮಾಡುತ್ತಿದೆ.

Read All News