ಬೈಲಹೊಂಗಲ : ರಾಜ್ಯದ ಎರಡನೇಯ ರಾಜಧಾನಿ ಎನಿಸಿಕೊಂಡಿರುವ ಬೆಳಗಾವಿಗೆ ಲೋಕಸಭೆ ಅಭ್ಯರ್ಥಿಗಳನ್ನು ಘೋಷಣೆ ಮಾಡದೆ ಅದರ ಹಿಂದಿರುವ ಕಾರಣದ ಶೋಧನೆಗಾಗಿ ಮತದಾರ ಕಾಯುವಂತಾಗಿದೆ.
ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಎಡವಿದ್ದು ಕಾರ್ಯಕರ್ತರು, ಮತದಾರರನ್ನು ಚಿಂತೆಗೀಡು ಮಾಡಿವೆ. ಆಯಾ ಪಕ್ಷಗಳ ಒಂದಿಷ್ಟು ಮತಗಳು ಪಕ್ಷದ ಚಿನ್ಹೆಗಳ ಮೇಲೆ ನಿರ್ಧಾರ ಆಗಿರುವಂತದ್ದು ನಿಜ. ಮತ್ತೊಂದಿಷ್ಟು ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸಿನ ಆಧಾರದ ಮೇಲೆ ನಿಶ್ಚಿತವಾಗಿದ್ದು ಪಕ್ಷಗಳು ಅಭ್ಯರ್ಥಿಯ ಆಯ್ಕೆಯ ಗೊಂದಲದಲ್ಲಿ ಇದ್ದರೆ ಮತದಾರ ಮಾತ್ರ ಮೂಕ ಪ್ರೇಕ್ಷಕನಾಗಿದ್ದಾನೆ.
ಹಿಂದೆಂದೂ ಕಾಣದ ಜಿದ್ದಾಜಿದ್ದಿ ಕಣವಾಗಿ ಮಾರ್ಪಟ್ಟ ಬೆಳಗಾವಿ ಲೋಕಸಭಾ ಕ್ಷೇತ್ರ, ದೇಶದ ಗಮನ ಸೆಳೆಯುತ್ತಿದೆ.ಬೇರೆ ಜಿಲ್ಲೆಯ ಮುಖಂಡರಿಗೆ ಮನೆ ಹಾಕುತ್ತಿರುವ ಪಕ್ಷಗಳಿಗೆ ಸ್ಥಳಿಯ ಮತದಾರ ಕಾದು ಕುಳಿತಿದ್ದಾನೆ.
ರಾಜಕೀಯ ಎನ್ನುವದು ವಂಶವಾಹಿ ಆಗುತ್ತಿರುವ ಬಗ್ಗೆ ಎಲ್ಲಡೆ ಅಪಸ್ವರ ಆರಂಭವಾಗಿದೆ. ಪಕ್ಷಕ್ಕೆ ನಿಷ್ಠಾವಂತನಾಗಿ ದುಡಿದ ವ್ಯಕ್ತಿಗೆ ಮುಂದೆ ಹೋಗಲು ಅವಕಾಶವಿಲ್ಲವೇ ಎಂಬ ಪ್ರಶ್ನೆ ನಿಜವಾದ ಕಾರ್ಯಕರ್ತನ ಕಾಡದೆ ಇರದು.
ಒಟ್ಟಾರೆ ಬೆಳಗಾವಿ ಲೋಕಸಭೆಯು 8 ವಿಧಾನಸಭಾ ಮತಕ್ಷೇತ್ರಗಳನ್ನು ಹೊಂದಿದ್ದು ಆಯಾ ಪಕ್ಷಗಳು ಸೂಕ್ತ ಅಭ್ಯರ್ಥಿಗಳನ್ನು ಚುನಾವಣಾ ಅಖಾಡಕ್ಕೆ ಬಿಟ್ಟು ಮತದಾರನ ಆಯ್ಕೆಗೆ ಬಿಟ್ಟರೆ ಪ್ರಜ್ಞಾವಂತ ಮತದಾರ ತಮ್ಮ ನೆಚ್ಚಿನ ವ್ಯಕ್ತಿಗೆ ಮನೆ ಹಾಕಲು ಅನೂಕೂಲವಾಗುತ್ತದೆ.
ವರದಿ : ರವಿಕಿರಣ್ ಯಾತಗೇರಿ